ಟ್ರಂಪ್‌ ನಿಯೋಗದಲ್ಲಿ ಕನ್ನಡಿಗ ಪೈ!

Published : Feb 25, 2020, 07:46 AM IST
ಟ್ರಂಪ್‌ ನಿಯೋಗದಲ್ಲಿ ಕನ್ನಡಿಗ ಪೈ!

ಸಾರಾಂಶ

ಟ್ರಂಪ್‌ ನಿಯೋಗದಲ್ಲಿ ಕನ್ನಡಿಗ ಪೈ!| ಡೊನಾಲ್ಡ್‌ ಟ್ರಂಪ್‌ ಕೈಗೊಂಡಿರುವ ಭಾರತ ಪ್ರವಾಸ ನಿಯೋಗದಲ್ಲಿ ಇರುವುದಕಲ್ಕೆ ಸಂತಸ ವ್ಯಕ್ತಪಡಿಸಿದ ಅಜಿತ್ ಪೈ

ವಾಷಿಂಗ್ಟನ್‌[ಫೆ.25]: ಡೊನಾಲ್ಡ್‌ ಟ್ರಂಪ್‌ ಕೈಗೊಂಡಿರುವ ಭಾರತ ಪ್ರವಾಸ ನಿಯೋಗದಲ್ಲಿ ಕನ್ನಡಿಗರೊಬ್ಬರು ಇದ್ದಾರೆ. ಟ್ರಂಪ್‌ ಜತೆಗೇ ಅವರು ಅಮೆರಿಕ ಅಧ್ಯಕ್ಷರ ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದಾರೆ!

ಹೌದು. ಅವರೇ ಭಾರತೀಯ ಅಮೆರಿಕನ್‌ ಅಜಿತ್‌ ಪೈ.

47 ವರ್ಷದ ಪೈ ಅವರು ಅಮೆರಿಕ ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದ ಫೆಡರಲ್‌ ಕಮ್ಯುನಿಕೇಶನ್‌ ಕಮಿಶನ್‌ನ ಅಧ್ಯಕ್ಷರಾಗಿದ್ದಾರೆ. ಇವರು ಈ ಹುದ್ದೆ ಏರಿದ ಮೊದಲ ಭಾರತೀಯ ಅಮೆರಿಕನ್‌ ವ್ಯಕ್ತಿ ಕೂಡ ಹೌದು. ಪೈ ಹಾಗೂ ಅಮೆರಿಕ ಅಧ್ಯಕ್ಷರ ವಿಶೇಷ ಸಹಾಯಕ ಕೇತೇಶ್‌ ಪಟೇಲ್‌ ಅವರು ಟ್ರಂಪ್‌ ಜತೆ ಭಾರತಕ್ಕೆ ಆಗಮಿಸಿದ್ದಾರೆ.

ಟ್ರಂಪ್‌ ನಿಯೋಗದಲ್ಲಿ ಇರುವ ಭಾರತೀಯರೆಂದರೆ ಈ ಇಬ್ಬರು ಮಾತ್ರ. ಪೈ ತಂದೆ ಹೈದರಾಬಾದ್‌ನವರಾಗಿದ್ದು, ತಾಯಿ ಬೆಂಗಳೂರಿನವರು. 5 ದಶಕದ ಹಿಂದೆಯೇ ಪೈ ಕುಟುಂಬ ಅಮೆರಿಕಕ್ಕೆ ತೆರಳಿತ್ತು. ಭಾರತ ಭೇಟಿಯ ಬಗ್ಗೆ ಪೈ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

World Water Day: ವಿಶ್ವ ಜಲ ದಿನ: ಪ್ರತಿ ಹನಿ ನೀರು ಉಳಿಸಲು ಮೋದಿ ಕರೆ, ಜಲಶಕ್ತಿ ಸಚಿವಾಲಯದಿಂದ ಬೃಹತ್ ಸಮಾವೇಶ
Jackfruit Tree: ಶಿವಗಿರಿ ಮಠದಲ್ಲಿರುವ 122 ವರ್ಷದ ಹಲಸಿನ ಮರಕ್ಕೆ ಚಿಕಿತ್ಸೆ, ಗುರುವಿನ ಸ್ಪರ್ಶ ಕ್ಕೆ ಮತ್ತೆ ಚಿಗುರಿದೆ!