* ರಾಹುಲ್ ಗಾಂಧಿ ಕೊಟ್ಟ ಹೇಳಿಕೆಯಿಂದ ವಿವಾದ
* ರಾಹುಲ್ ಗಾಂಧಿ ಹೇಳಿಕೆಗೆ ನಮ್ಮ ಬೆಂಬಲವಿಲ್ಲ ಎಂದ ಅಮೆರಿಕ
* ಚೀನಾ- ಪಾಕಿಸ್ತಾನ ವಿಚಾರವಾಗಿ ಕೊಟ್ಟ ಹೇಳಿಕೆಗೆ ಖಂಡನೆ
ನವದೆಹಲಿ(ಫೆ.03): ಭಾರತ ಸರ್ಕಾರದ ವಿದೇಶಾಂಗ ನೀತಿಯಿಂದಾಗಿ ಚೀನಾ ಮತ್ತು ಪಾಕಿಸ್ತಾನಗಳು ಹತ್ತಿರವಾಗುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸಂಸತ್ತಿನಲ್ಲಿ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಅಮೆರಿಕ ಪ್ರತಿಕ್ರಿಯೆ ನೀಡಿದೆ. ಅಂತಹ ಹೇಳಿಕೆಯನ್ನು ನಾನು ಬೆಂಬಲಿಸುವುದಿಲ್ಲ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ. ಇದು ಪಾಕಿಸ್ತಾನ ಮತ್ತು ಚೀನಾದ ವಿಚಾರವಾಗಿದ್ದು, ಇದನ್ನು ಎರಡೂ ದೇಶಗಳಿಗೆ ಬಿಡಬೇಕು ಎಂದರು.
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?
ಚೀನಾ ಮತ್ತು ಪಾಕಿಸ್ತಾನವನ್ನು ಒಗ್ಗೂಡಿಸಲು ನಿಮ್ಮ ನೀತಿ ಕೆಲಸ ಮಾಡಿದೆ ಮತ್ತು ಇದು ಭಾರತದ ಮುಂದಿರುವ ದೊಡ್ಡ ಸವಾಲು ಎಂದು ರಾಹುಲ್ ಗಾಂಧಿ ಬುಧವಾರ ಸಂಸತ್ತಿನಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಭಾಷಣಕ್ಕೆ ಧನ್ಯವಾದ ಸಮರ್ಪಣೆ ವೇಳೆ ಹೇಳಿದ್ದರು. ಚೀನಾ ಸ್ಪಷ್ಟ ಯೋಜನೆಯನ್ನು ಹೊಂದಿದೆ ಮತ್ತು ಅದರ ಅಡಿಪಾಯವನ್ನು ಡೋಕ್ಲಾಮ್ ಮತ್ತು ಲಡಾಖ್‌ನಲ್ಲಿ ಹಾಕಲಾಗಿದೆ. ಕಾಶ್ಮೀರ ವಿಚಾರದಲ್ಲಿ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿದೆ ಎಂದರು.
ನಾವು ಎದುರಿಸುತ್ತಿರುವ ಸಂದರ್ಭಗಳು ಕಡಿಮೆ ಎಂದು ಭಾವಿಸಬೇಡಿ ಎಂದು ರಾಹುಲ್ ಹೇಳಿದರು. ಇದು ಭಾರತಕ್ಕೆ ಗಂಭೀರ ಅಪಾಯವಾಗಿದೆ. ಪ್ರಧಾನಿ ಮೋದಿಯವರೇ, ಗಣರಾಜ್ಯೋತ್ಸವದಂದು ನಿಮಗೆ ಅತಿಥಿಗಳನ್ನು ಯಾಕೆ ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ನೀವೇ ಕೇಳಿ ಎಂದು ರಾಹುಲ್ ಗಾಂಧಿ ಹೇಳಿದರು. ಇಂದು ಭಾರತ ಸಂಪೂರ್ಣ ಪ್ರತ್ಯೇಕವಾಗಿದೆ. ನಮ್ಮ ವಿರೋಧಿಗಳು ನಮ್ಮ ಸ್ಥಾನವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವರು ಕೂಡ ರಾಹುಲ್ ಹೇಳಿಕೆಯನ್ನು ಆಧಾರರಹಿತ ಎಂದು ಹೇಳಿದ್ದಾರೆ
ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಕೂಡ ರಾಹುಲ್ ಅಸವರ ಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಮೋದಿ ಸರ್ಕಾರದ ತಪ್ಪು ನೀತಿಗಳಿಂದಾಗಿ ಪಾಕಿಸ್ತಾನ ಮತ್ತು ಚೀನಾ ಒಂದಾಗಿವೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆರೋಪಿಸಿದರು. ಆದ್ದರಿಂದ ಬಹುಶಃ ಅವರು ಸ್ವಲ್ಪ ಇತಿಹಾಸವನ್ನು ತಿಳಿದುಕೊಳ್ಳಬೇಕು. 1963 ರಲ್ಲಿ ಪಾಕಿಸ್ತಾನವು ಶಾಕ್ಸ್‌ಗಾಮ್ ಕಣಿವೆಯನ್ನು ಅಕ್ರಮವಾಗಿ ಚೀನಾಕ್ಕೆ ಬಿಟ್ಟುಕೊಟ್ಟಿತು. ಚೀನಾ 1970 ರ ದಶಕದಲ್ಲಿ ಪಿಒಕೆ ಮೂಲಕ ಕಾರಕೋರಂ ಹೆದ್ದಾರಿಯನ್ನು ನಿರ್ಮಿಸಿತು. ಹಾಗಾದರೆ ಆಗ ಚೀನಾ ಮತ್ತು ಪಾಕಿಸ್ತಾನ ದೂರವಾಗಿದ್ದವೇ ಎಂದು ರಾಹುಲ್ ಗಾಂಧಿ ನೀವೇ ಕೇಳಿ ಎಂದಿದ್ದಾರೆ.