ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಪ್ರಾಣಿಯ ವಾಕ್‌... ವಿಡಿಯೋ ವೈರಲ್‌

By Contributor Asianet  |  First Published Feb 3, 2022, 10:02 AM IST
  • ನ್ಯಾಷನಲ್ ಹೈವೇಯಲ್ಲಿ ಹುಲಿಯನ ಗಾಂಭೀರ್ಯದ ನಡಿಗೆ
  • ರಾಷ್ಟ್ರೀಯ ಪ್ರಾಣಿಯ ವಿಡಿಯೋ ವೈರಲ್‌
  • ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆರೆಯಾದ ದೃಶ್ಯ

ತಮಿಳುನಾಡು(ಫೆ.3): ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಪ್ರಾಣಿ ಕಾಣ ಸಿಗುವುದು ಬಲು ಅಪರೂಪ. ಇಂತಹ ಅಪರೂಪದ ದೃಶ್ಯವೊಂದು ತಮಿಳುನಾಡಿನಲ್ಲಿ ಕಾಣ ಸಿಕ್ಕಿದೆ. ರಾಷ್ಟ್ರೀಯ ರಾಜ ಗಾಂಭೀರ್ಯದ ಹೆಜ್ಜೆ ಇಡುತ್ತಾ ರಾಷ್ಟ್ರೀಯ ಪ್ರಾಣಿ ಹುಲಿ ನಡೆದು ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. 

ಈ ವಿಡಿಯೋವನ್ನು ಛಾಯಾಚಿತ್ರಗ್ರಾಹಕ ರಾಜ್ ಮೋಹನ್‌ (Raj Mohan) ಅವರು ಸೆರೆ ಹಿಡಿದಿದ್ದು, ಬಳಿಕ ಟ್ವಿಟ್ಟರ್‌ನಲ್ಲಿ ಸೋಮವಾರ ಪೋಸ್ಟ್‌ ಮಾಡಿದ್ದರು. ನಂತರ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್‌ ನಂದ (Susanta Nanda) ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಪ್ರಾಣಿ ಎಂದು ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದರು. ಈ ವಿಡಿಯೋವನ್ನು 43,000 ಮಂದಿ ವೀಕ್ಷಿಸಿದ್ದಾರೆ. ತಮಿಳುನಾಡಿನ (Tamil Nadu) ವಲಪರಿ (Valparai) ಎಂಬಲ್ಲಿ ಘಟನೆ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಲ್ಪ ದೂರ ನಡೆಯುವ ಹುಲಿ ನಂತರ ಹತ್ತಿರದ ಕಾಡಿನೊಳಗೆ ನುಗ್ಗುತ್ತದೆ.

Woke up to this at !
As narrated by my wife-
Literally, woke up to a and stopped dead in my tracks for a few seconds when shouted 'Tiger Tiger Tiger' while I was fast asleep. Click below to read rest of the story. https://t.co/9jcCxRiJ5F pic.twitter.com/7CEJAAxU6f

— Raj Mohan (@rajography47)

Tap to resize

Latest Videos

ಇನ್ನು ಈ ವಿಡಿಯೋ ವೀಕ್ಷಿಸಿದ ಮಂದಿ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ವಿಡಿಯೋವನ್ನು ಅದ್ಭುತ ಎಂದರೆ, ಮತ್ತೆ ಕೆಲವರು ಎಂತಹ ಸುಂದರ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ತನ್ನೆದುರೇ ನೂರಾರು ಜಿಂಕೆಗಳಿದ್ದರೂ ಅವುಗಳಿಗೆ ಏನೂ ಮಾಡದೇ ಹುಲಿಯೊಂದು ನಡೆದುಹೋದ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು.ತನಗೆ ಹಸಿವಾಗದೇ ಹೋದರೆ ಯಾವ ಪ್ರಾಣಿಯೂ ಮತ್ತೊಂದರ ಮೇಲೆ ದಾಳಿ ನಡೆಸದು. ಹೊಟ್ಟೆ ತುಂಬಿದಲ್ಲಿ ಅದು ತನ್ನ ಆಹಾರ ಕಣ್ಣೆದುರೇ ಓಡಾಡಿದರು ಕ್ಯಾರೇ ಎನ್ನದು. ಇದಕ್ಕೊಂದು ಉತ್ತಮ ಉದಾಹರಣೆ ನಾಗರಹೊಳೆ ಅಭಯರಾಣ್ಯದ ಈ ವಿಡಿಯೋ.  ವಿಡಿಯೋದಲ್ಲಿ ತೋರಿಸುವಂತೆ ನೂರಾರು ಜಿಂಕೆಗಳು ಕಾಡಿನಲ್ಲಿ ಅಲೆದಾಡುತ್ತಿರುತ್ತವೆ. ಅವುಗಳ ಎದುರೇ ಬರುವ ಹುಲಿ ತನಗೂ ಅವುಗಳಿಗೂ ಯಾವುದೇ ಸಂಬಂಧವಿಲ್ಲದಂತೆ ರಾಜ ಗಾಂಭೀರ್ಯ ನಡೆಯ ಮೂಲಕ ಮುಂದೆ ಸಾಗುತ್ತದೆ. ಆದರೆ ಜಿಂಕೆಗಳು ಮಾತ್ರ ಆತಂಕದಿಂದ ಅತ್ತಿತ್ತ ಚದುರಿ ಓಡಲು ಪ್ರಯತ್ನಿಸುತ್ತವೆ. 

ಈ ಸಮಯ ಆನಂದಮಯ.. ಕ್ಯಾಮರಾದಲ್ಲಿ ಸೆರೆಯಾಯ್ತು ಟೈಗರ್‌ಗಳ ಸರಸ..!

2016 ರ ಸೆಪ್ಟೆಂಬರ್‌  17 ರಂದು ಸೆರೆಯಾದ ನಾಗರಹೊಳೆ ಅಭಯಾರಣ್ಯದಲ್ಲಿ ಸೆರೆಯಾದ ವಿಡಿಯೋ ಇದಾಗಿದ್ದು,  ವೈರಲ್‌ ಹಗ್‌ ಎಂಬ ಯೂಟ್ಯೂಬ್‌ ಚಾನೆಲ್‌ 2019ರ ಮಾರ್ಚ್‌  29 ರಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದೆಲ್ಲೆಡೆ ವೈರಲ್‌ ಆಗುತ್ತಿದೆ.

ಕರ್ನಾಟಕದ ನಾಗರಹೊಳೆ (Nagarahole) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  ಈ ಸ್ಥಳವು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ವನ್ಯಜೀವಿ ಸಂರಕ್ಷಣೆಯ ಪ್ರಮುಖ ಕೇಂದ್ರವಾಗಿದೆ. ಹುಲಿ ಮತ್ತು ಜಿಂಕೆಗಳಲ್ಲದೆ, ಈ ಸ್ಥಳವು ಚಿರತೆ (leopard), ನೈಋತ್ಯ ಲಾಂಗೂರ್, ಏಷ್ಯಾಟಿಕ್ ಆನೆ (Asiatic Elephant), ಗೌರ್, ಸ್ಲೋತ್ ಕರಡಿ ಮತ್ತು ಇನ್ನೂ ಅನೇಕ ಪ್ರಾಣಿಗಳಿಗೆ ತನ್ನ ಒಡಲಲ್ಲಿ ಆಶ್ರಯ ನೀಡಿದೆ. 

Mahindra Xylo ಬನ್ನೇರುಘಟ್ಟದಲ್ಲಿ ಪ್ರವಾಸಿಗರಿದ್ದ ಸಫಾರಿ ಗಾಡಿಯನ್ನು ಎಳೆದಾಡಿದ ಹುಲಿ... ಆನಂದ್‌ ಮಹೀಂದ್ರಾ ಹೇಳಿದ್ದೇನು..!

click me!