Suicide Case: ನರ್ಮದಾಗೆ ಹಾರಿ ಪ್ರಾಣ ಬಿಟ್ಟ ಡೆಪ್ಯುಟಿ ರೇಂಜರ್ ಮಗ, ಸೆಲ್ಫೀ ವಿಡಿಯೋದಲ್ಲಿ 1 ಕೋಟಿ ರೂ. ರಹಸ್ಯ!

Published : Nov 28, 2021, 06:28 PM IST
Suicide Case: ನರ್ಮದಾಗೆ ಹಾರಿ ಪ್ರಾಣ ಬಿಟ್ಟ ಡೆಪ್ಯುಟಿ ರೇಂಜರ್ ಮಗ, ಸೆಲ್ಫೀ ವಿಡಿಯೋದಲ್ಲಿ 1 ಕೋಟಿ ರೂ. ರಹಸ್ಯ!

ಸಾರಾಂಶ

* ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ * ಸಾಯೋ ಮುನ್ನ ಮಾಡಿದ್ದ ಸೆಲ್ಫೀ ವಿಡಿಯೋ * ಸೆಲ್ಫೀ ವಿಡಿಯೋದಲ್ಲಿತ್ತು ಕರಾಳ ಸತ್ಯ  

ಭೋಪಾಲ್(ನ.28): ಮಧ್ಯಪ್ರದೇಶದ ಖಾರ್ಗೋನೆಯಲ್ಲಿ (Khargone, Madhya Pradesh) ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ನರ್ಮದಾ ನದಿಯ (Narmada River) 40 ಅಡಿ ಎತ್ತರದ ಸೇತುವೆಯಿಂದ ಜಿಗಿದ ಯುವಕನ ಶವ ಮೂರು ದಿನಗಳ ನಂತರ ಇಲ್ಲಿ ಪತ್ತೆಯಾಗಿದೆ. ಮುರಳ್ಳ ಗ್ರಾಮದ ಬಳಿಯ ನರ್ಮದಾ ನದಿಯಲ್ಲಿ ಯುವಕನ ಶವ ತೇಲುತ್ತಿರುವುದು ಪತ್ತೆಯಾಗಿದೆ. ಆತನಿಂದ ಬಳಿ ಇದ್ದ ಆತ್ಮಹತ್ಯೆ ಪತ್ರವನ್ನು (Death Note) ಪೊಲೀಸರು ಪತ್ತೆ ಮಾಡಿದ್ದಾರೆ. ಸಾಯುವ ಮೊದಲು, ಯುವಕನು ತನ್ನ ಸೆಲ್ಫೀ ವಿಡಿಯೋ (Selfie Video) ಮಾಡಿದ್ದು ಇದರಲ್ಲಿ ವಿಚ್ಛೇದನಕ್ಕಾಗಿ ಪತ್ನಿ ಒಂದು ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾಳೆ ಎಂದು ಆರೋಪಿಸಿದ್ದಾನೆ. ಪತ್ನಿ ಸೇರಿದಂತೆ ಅತ್ತೆ ಮನೆ ಮೂವರು ಕಿರುಕುಳ ನೀಡುತ್ತಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಆತ್ಮಹತ್ಯೆಗೆ ಶರಣಾದ ಯುವಕನ ತಂದೆ ಉಪ ರೇಂಜರ್ ಎಂಬುವುದು ಉಲ್ಲೇಖನೀಯ.

ಈ ಘಟನೆಯು ಖಾರ್ಗೋನ್ ಜಿಲ್ಲಾ ಕೇಂದ್ರದಿಂದ 80 ಕಿಮೀ ದೂರದಲ್ಲಿರುವ ಬರ್ವಾಹ್‌ನ ನರ್ಮದಾ ಸೇತುವೆಯಾಗಿದೆ (Narmada bridge in Khargone). ಅಜಯ್ ಕುಮಾರ್ ದ್ವಿವೇದಿ ಮತ್ತು ಅವರ ಸ್ನೇಹಿತ ರೇವಾ ನಿವಾಸಿ ಕೌಶಲ್ ಶುಕ್ಲಾ ಅವರು ನವೆಂಬರ್ 25 ರಂದು ಇಂದೋರ್‌ನಿಂದ ಓಂಕಾರೇಶ್ವರಕ್ಕೆ ಹೋಗುತ್ತಿದ್ದ. ಬರ್ವಾದಲ್ಲಿ ಅಕ್ವಿಡೆಕ್ಟ್ ಸೇತುವೆಯ ಮೇಲೆ ಫೋಟೋಗ್ರಫಿ ಮಾಡಬೇಕೆಂದು ಅಜಯ್ ಬೈಕ್ ನಿಲ್ಲಿಸಿ ನಡೆಯತೊಡಗಿದ. ಈ ಮಧ್ಯೆ, ಸ್ನೇಹಿತ ಕೌಶಲ್ ಫೋಟೋ ಶೂಟ್‌ಗಾಗಿ(Photoshoot) ಕ್ಯಾಮರಾ ತೆಗೆಯುವ ಮೊದಲು ಅಜಯ್ ನರ್ಮದಾಗೆ ಹಾರುತ್ತಾನೆ. ಇಬ್ಬರೂ ಇಂದೋರ್‌ನ (Indore) ಮಹಾರಾಜ ರಂಜಿತ್ ಸಿಂಗ್ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದಾರೆ. ಇದರಿಂದಾಗಿ ಇಬ್ಬರಲ್ಲೂ ಉತ್ತಮ ಸ್ನೇಹವಿತ್ತು. ಇದರಿಂದ ಇಬ್ಬರೂ ಓಂಕಾರೇಶ್ವರ ದರ್ಶನಕ್ಕೆ ಪ್ಲಾನ್ ಮಾಡಿದ್ದರು. ಮಾಹಿತಿ ಪಡೆದ ಪೊಲೀಸರು ಮತ್ತು ಮುಳುಗುಗಾರೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಸತತ ಮೂರು ದಿನಗಳ ಹುಡುಕಾಟದ ಬಳಿಕ ಶವ ಪತ್ತೆಯಾಗಿದೆ.

ಕೆಲವು ದಿನಗಳ ನಂತರ ಕೆಲಸಕ್ಕೆ ಸೇರಬೇಕಾಗಿತ್ತು, ಇದಕ್ಕೂ ಮೊದಲೇ ಆತ್ಮಹತ್ಯೆ 

ಕೆಲ ದಿನಗಳ ಹಿಂದೆ ಉಜ್ಜಯಿನಿ ಭೇಟಿಗೂ ಹೋಗಿದ್ದೆ ಎಂದು ಕೌಶಲ್ ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕೆಲಸಕ್ಕೆ ಸೇರುವ ತಯಾರಿ ನಡೆದಿತ್ತು. ಆದರೆ ಇದಕ್ಕೂ ಮೊದಲು ಓಂಕಾರೇಶ್ವರನ ದರ್ಶನಕ್ಕೆಂದು ಹೊರಟರು. ಮಾಹಿತಿ ಪಡೆದು ಅಜಯ್ ಕುಟುಂಬಸ್ಥರು ಇಲ್ಲಿಗೆ ಆಗಮಿಸಿದ್ದಾರೆ. ಮಗನ ದೇಹವನ್ನು ಅಪ್ಪಿಕೊಂಡು ತಂದೆ ಪ್ರಮೋದ್ ದ್ವಿವೇದಿ ಅಳಲಾರಂಭಿಸಿದ್ದಾರೆ. ಪೊಲೀಸರು ಮೃತದೇಹದ ಪಂಚನಾಮೆಯನ್ನು ಮಾಡಿ ಮರಣೋತ್ತರ ಪರೀಕ್ಷೆಗಾಗಿ ಬಡವಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ತಂದೆ ಪ್ರಮೋದ್ ರೇವಾ ಜಿಲ್ಲೆಯ ಸಿರ್ಮೌರ್‌ನಲ್ಲಿ ಉಪ ರೇಂಜರ್. ಅಜಯ್ ಮತ್ತು ನಮ್ಮ ವಿರುದ್ಧ ಮಗನ ಅತ್ತೆಯಂದಿರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ, ಹಣಕ್ಕಾಗಿ ಪೀಡಿಸುತ್ತಿದ್ದರು ಇದರಿಂದ ಮಗ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದರು.

ಬೈಕ್ ಟ್ರಂಕ್‌ನಲ್ಲಿ ಸೂಸೈಡ್ ನೋಟ್ ಪತ್ತೆ, ಸೆಲ್ಫೀ ವಿಡಿಯೋ ಕೂಡಾ ಪತ್ತೆ

ಅಜಯ್ ಬೈಕ್‌ನ ಟ್ರಂಕ್‌ನಲ್ಲಿ ಆತ್ಮಹತ್ಯೆ ಪತ್ರವೊಂದು ಪೊಲೀಸರಿಗೆ ಸಿಕ್ಕಿದೆ. ಇದರಲ್ಲಿ ಅಜಯ್ ಗುರು ಪ್ರಸಾದ್ ತಿವಾರಿ, ಪ್ರಾರ್ಥನಾ ತಿವಾರಿ, ಪ್ರಿನ್ಸ್ ತಿವಾರಿ, ರಾಮ ತಿವಾರಿ ನನ್ನ ಸಾವಿಗೆ ಕಾರಣರು. 3 ವರ್ಷಗಳಿಂದ ನನ್ನ ಮತ್ತು ನನ್ನ ಕುಟುಂಬದವರ ವಿರುದ್ಧ ಮೊಕದ್ದಮೆ ಹೂಡಿ ಒಂದು ಕೋಟಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸರಗೊಂಡು ಈ ಹೆಜ್ಜೆ ಇಟ್ಟಿದ್ದೇನೆ ಎಂದಿದ್ದಾರೆ. ಅಜಯ್ ಅವರೇ ವಿಡಿಯೋ ಮಾಡಿ ಹೀಗೆ ಹೇಳಿದ್ದಾರೆ- ನನ್ನ ಸಾವಿಗೆ ಪ್ರಾರ್ಥನಾ ತಿವಾರಿ ಕಾರಣ. 3 ವರ್ಷಗಳಿಂದ ನನ್ನ ಕುಟುಂಬದ ಮೇಲೆ ಕೇಸು ಹಾಕಲಾಗಿದೆ. ನನ್ನ ಚಿಕ್ಕಪ್ಪನ ವಿರುದ್ಧವೂ ಪ್ರಕರಣ ದಾಖಲಾಗಿದೆ. 3 ವರ್ಷಗಳಿಂದ ಪ್ರಕರಣ ನಡೆಯುತ್ತಿದೆ. ನನ್ನ ವಿರುದ್ಧದ ಪ್ರಕರಣವನ್ನು ಇತ್ಯರ್ಥಗೊಳಿಸಲು ಒಂದು ಕೋಟಿ ಕೇಳುತ್ತಿದ್ದಾರೆ. ಸಾಕಷ್ಟು ಯೋಜನೆ ರೂಪಿಸಿದ್ದರು. ಈ ನಿರ್ಧಾರದಿಂದ ಬೇಸತ್ತು ಇಂತಹವರಿಗೆ ಶಿಕ್ಷೆಯಾಗಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ನವೆಂಬರ್ 25 ರಂದು ಯುವಕನೊಬ್ಬ ಸೇತುವೆಯಿಂದ ನರ್ಮದಾ ನದಿಗೆ ಹಾರಿದ್ದ. ಸ್ಥಳೀಯ ಮುಳುಗುಗಾರರು ಶೋಧ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಯುವಕರು ಇಂದೋರ್‌ನಲ್ಲಿದ್ದುಕೊಂಡು ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ವಿಚಾರ ನ್ಯಾಯಾಲಯದಲ್ಲಿಯೂ ನಡೆಯುತ್ತಿದ್ದು, ಇದರಿಂದ ತೊಂದರೆಯಾಗಿದ್ದು, ಕ್ರಮಕೈಗೊಳ್ಳಲಾಗಿದೆ. ಇದೀಗ ಬೈಕ್‌ನ ಟ್ರಂಕ್‌ನಿಂದ ಸೂಸೈಡ್ ನೋಟ್ ಪತ್ತೆಯಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಮುಂದಿನ ತನಿಖೆಯಲ್ಲಿ ಹೊರಬರುವ ವಿಷಯಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬರ್ವಾದ ಪೊಲೀಸ್ ಉಸ್ತುವಾರಿ ಜಗದೀಶ್ ಗೋಯಲ್ ತಿಳಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್