ಪತಿ ಸ್ಯಾಲರಿ ಎಷ್ಟು? ಮುಚ್ಚಿಟ್ಟ ಮಾಹಿತಿ ತಿಳಿಯಲು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿದ ಪತ್ನಿ!

By Suvarna NewsFirst Published Oct 4, 2022, 8:23 PM IST
Highlights

ಪುರುಷರ ವೇತನ ಕೇಳಬಾರದು, ಮಹಿಳೆಯರ ವಯಸ್ಸು ಕೇಳಬಾರದು ಅನ್ನೋ ಮಾತಿದೆ. ಹೀಗಾಗಿ ಹಲವು ಕುಟುಂಬಗಳಲ್ಲಿ ಈಗಲೂ ತನ್ನ ಪತಿಗೆ ಎಷ್ಟು ಸಂಬಳ ಅನ್ನೋದು ಇನ್ನೂ ತಿಳಿದಿಲ್ಲ. ಹಲವರು ಇದನ್ನು ರಹಸ್ಯವಾಗಿಡುತ್ತಾರೆ. ಹೀಗೆ ಪತ್ನಿ ಮುಂದೆ ಸ್ಯಾಲರಿ ಮುಚ್ಚಿಟ್ಟ ಪತಿಗೆ ಶಾಕ್ ಎದುರಾಗಿದೆ. 

ಬರೇಲಿ(ಅ.04):  ಪತಿ ಸ್ಯಾಲರಿ ಎಷ್ಟು? ಈ ಪ್ರಶ್ನೆಗೆ ಎಷ್ಟು ಮಂದಿಗೆ ಉತ್ತರ ಗೊತ್ತು? ಈಗಿನ ಕಾಲದಲ್ಲಿ ಎಲ್ಲಾ ಪತ್ನಿಯರಿಗೆ ಈ ವಿಚಾರ ತಿಳಿದಿರುತ್ತದೆ  ಅಂದುಕೊಂಡರೆ ತಪ್ಪು. ಕಾರಣ ಭಾರತದಲ್ಲಿ ಹಲವು ಕಟುಂಬದಲ್ಲಿ ಈ ಪ್ರಶ್ನೆಗೆ ಉತ್ತರ ತಿಳಿದಿಲ್ಲ. ಕೇಳುವ ಪ್ರಯತ್ನ,ಧೈರ್ಯವೂ ಮಾಡಿಲ್ಲ, ಹೇಳುವ ಗೋಜಿಗೂ ಹೋಗಿಲ್ಲ. ಇದೇ ರೀತಿ ಉತ್ತರ ಪ್ರದೇಶದ ಬರೇಲಿಯಲ್ಲಿ ಘಟನೆಯೊಂದು ನಡೆದಿದೆ. ಮದುವೆಗೂ ಮುನ್ನ ಆಕೆ ಕೇಳಿದ ಪ್ರಮುಖ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೆ ಉತ್ತರ ಬಂದಿರಲಿಲ್ಲ. ನಿಮ್ಮ ಸ್ಯಾಲರಿ ಎಷ್ಟು ಎಂದು? ಮದುವೆ ಆಯ್ತು. ದಿನಗಳೂ ಉರುಳಿತು. ಆದರೂ ಪತಿಯ ಸ್ಯಾಲರಿ ಮಾತ್ರ ಎಷ್ಟು ಎಂದು ತಿಳಿಯಲೇ ಇಲ್ಲ. ಈ ಕುರಿತು ಕೇಳಿದರೆ ಪತಿಯಿಂದ ಎಚ್ಚರಿಕೆ, ಹಾರಿಕೆ, ಆಕ್ರೋಶದ ನುಡಿಗಳು. ಇತ್ತ ಪತ್ನಿಯಿಂದ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾನೆ. ಇದರಿಂದ ರೋಸಿ ಹೋದ ಪತ್ನಿ ನೇರವಾಗಿ ತನ್ನ ಪತ್ನಿಯ ಸಂಬಳ ತಿಳಿಯಲು ನೇರವಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಗಂಡನಿಗೆ ಶಾಕ್ ನೀಡಿದ್ದಾಳೆ. ಈ ಪತ್ನಿಯ ಹೆಸರು ಸಂಜು ಗುಪ್ತಾ.

ಪತಿಯಿಂದ ಜೀವನಾಂಶ ಪಡೆಯಲು, ಪತಿಯ ಬೇರ್ಪಟ್ಟು ಸ್ವತಂತ್ರಳಾಗಿ ಜೀವಿಸಲು ಸಂಜು ಗುಪ್ತಾಗೆ ಆದಾಯದ ಅವಶ್ಯಕೆ ಇದ್ದೇ ಇದೆ. ಸಂಜು ಗುಪ್ತ ತನ್ನ ಪತಿಯ ಸ್ಯಾಲರಿ ತಿಳಿಯಲು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿದ್ದಾಳೆ. ಬರೇಲಿ ಸೆಂಟ್ರಲ್ ಪಬ್ಲಿಕ್ ಇನ್ಫೋರ್ಮೇಶನ್ ಆಫೀಸರ್(CPIO), ಆದಾಯ ತೆರಿಗೆ ಇಲಾಖೆಗೆ ಅರ್ಜಿ ಹಾಕಿದ್ದಾಳೆ. ಆದರೆ CPIO ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಪತಿ ಹಾಗೂ ಪತ್ನಿ ನಡುವಿನ ಈ ರೀತಿಯ ಪ್ರಶ್ನೆಗಳಿಗೆ ಉತ್ತರ ನೀಡಿ ಅವರ ಸಂಸಾರ ಹಾಳುಮಾಡುವುದು ಏಕೆ? ಇದರಿಂದ ಉತ್ತರ ನೀಡದಿರುವುದೇ ಲೇಸು ಎಂದು ಸುಮ್ಮನಾಗಿದ್ದಾರೆ. ಈ ಕುರಿತು ಸಂಜು ಗುಪ್ತ ಪತಿಯ ಪರವಾನಗಿ ಕೇಳುವುದು ಸೂಕ್ತ ಎಂದು ನಿರ್ಧರಿಸಿ ಅರ್ಜಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ.

Dream JOB ಇಂತಾ ಕೆಲಸ ಸಿಗಬೇಕು, ಏನೂ ಮಾಡದ ಈತನಿಗೆ ತಿಂಗಳಿಗೆ 1.70 ಲಕ್ಷ ರೂಪಾಯಿ ವೇತನ!

ಆದರೆ ಸಂಜು ಗುಪ್ತ ಇಷ್ಟಕ್ಕೆ ಸುಮ್ಮನಾಗಿಲ್ಲ. ಪತಿಯ ಸ್ಯಾಲರಿ ತಿಳಿಯಲು ಪಟ್ಟು ಹಿಡಿದಿದ್ದಾಳೆ. ತನ್ನ ಆರ್‌ಟಿಐ ಅರ್ಜಿಗೆ ಉತ್ತರ ದೊರಕದ ಕಾರಣ ನೇರವಾಗಿ ಸೆಂಟ್ರಲ್ ಇನ್‌ಫಾರ್ಮೇಶನ್ ಕಮಿಶನ್(CIC) ಮೊರೆ ಹೋಗಿದ್ದಾಳೆ. ಈ ಅರ್ಜಿಗೆ ಉತ್ತರ ನೀಡಲು CIC ಸುಪ್ರೀಂ ಕೋರ್ಟ್ ಈ ಕುರಿತು ನೀಡಿದ ತೀರ್ಪನ್ನು ಗಮನಿಸಿದೆ. ಇಷ್ಟೇ ಅಲ್ಲ ಪತಿಯ ಸ್ಯಾಲರಿ ಅರಿಯಲು ಪತ್ನಿ ಅರ್ಹಳಾಗಿದ್ದಾಳೆ ಅನ್ನೋ ಸುಪ್ರೀಂ ತೀರ್ಪಿನ ಆಧಾರದಲ್ಲಿ CIC ಮಹತ್ವದ ನಿರ್ದೇಶ ನೀಡಿದೆ. ಸಂಜು ಗುಪ್ತ ಪತಿಯ ಸ್ಯಾಲರಿ ಎಷ್ಟು ಎಂದು ಸೂಕ್ತ ದಾಖಲೆಯೊಂದಿಗೆ ತಿಳಿಸಿ ಎಂದು ನಿರ್ದೇಶನ ನೀಡಿದೆ.

15 ದಿನದಲ್ಲಿ ಪತಿಯ ನೆಟ್ ಸ್ಯಾಲರಿ, ಗ್ರಾಸ್ ಸ್ಯಾಲರಿ ಎಷ್ಟು ಎಂದು ಸಂಜು ಗುಪ್ತಾಗೆ ಮಾಹಿತಿ ನೀಡಬೇಕು ಎಂದು CIC ನಿರ್ದೇಶಿಸಿದೆ. ಇತ್ತ ಇಷ್ಟು ದಿನ ಮುಚ್ಚಿಟ್ಟಿದ್ದ ಸ್ಯಾಲರಿ ಇದೀಗ ಬಹಿರಂಗವಾಗಲಿದೆ. ಇದೀಗ ಇದೇ ರೀತಿ ಸ್ಯಾಲರಿ ಮುಚ್ಚಿಟ್ಟ ಹಲವು ಗಂಡಂದಿರಿಗೆ ಇದೀಗ ತಲೆನೋವು ಶುರುವಾಗಿದೆ. ತನ್ನ ನಿಖರ ಸ್ಯಾಲರಿ ಎಷ್ಟು ಎಂದು ಪತ್ನಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿದರೆ ಗತಿ ಏನು? ಹಲವು ರಹಸ್ಯಗಳು ಬಹಿರಂಗವಾಗಲಿದೆ ಎಂದು ತಲೆ ತಲೆ ಚಚ್ಚಿಕೊಳ್ಳುವಂತಾಗಿದೆ.

Ayushmann Khurrana 25 ಕೋಟಿಯಿಂದ 15 ಕೋಟಿಗೆ ಸಂಬಳ ಇಳಿಸಿಕೊಂಡ ನಟ; ಕಾರಣ ಕೇಳಿ ಶಾಕ್ ಆಗ್ಬೇಡಿ
 

click me!