ಮುಕೇಶ್ ಅಂಬಾನಿ ಮಗನ ಮದುವೆ ಭಾರತದಲ್ಲಿ ಮಾಡುತ್ತಿರೋದಕ್ಕೆ ಬಲವಾದ ಕಾರಣವಿದೆ. ಮಗ ಅನಂತ್ ಮದುವೆ ಭಾರತದಲ್ಲಿ ಯಾಕೆ ಆಗಬೇಕು ಎಂಬ ಕಾರಣವನ್ನು ತಿಳಿಸಿದಾಗ ಅಂಬಾನಿ ಬೇಡ ಅನ್ನೋದಕ್ಕೆ ಹೋಗಲಿಲ್ಲವಂತೆ.
ಮುಂಬೈ: ರಿಲಯನ್ಸ್ ಇಂಡಸ್ಟ್ರಿಯ ಒಡೆಯ ಮುಕೇಶ್ ಅಂಬಾನಿ ಮಗನ ಮದುವೆ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ. ಗುಜರಾತಿನ ಜಾಮ್ ನಗರ ಹಾಗೂ ಇಟಲಿಯಲ್ಲಿ ವಿವಾಹ ಪೂರ್ವ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಆದ್ರೆ ಮದುವೆ ಮಾತ್ರ ಭಾರತದಲ್ಲಿಯೇ ನಡೆಯಬೇಕು ಎಂದು ಅನಂತ್ ಅಂಬಾನಿ ದೃಢ ನಿರ್ಧಾರ ತೆಗೆದುಕೊಂಡಿದ್ದರಂತೆ. ಮಗ ಹೇಳಿದ ಕಾರಣಕ್ಕೆ ತಂದೆ ಮುಕೇಶ್ ಅಂಬಾನಿ, ದುಸ್ರಾ ಸಹ ಮಾತನಾಡದೇ ಒಪ್ಪಿಕೊಂಡರು ಎಂದು ವರದಿಯಾಗಿದೆ. ಅನಂತ್ ಅಂಬಾನಿ ಮದುವೆ ಗುಜರಾತಿನ ಶೈಲಿಯಲ್ಲಿ ಸಂಪ್ರದಾಯಬದ್ಧವಾಗಿ ಮುಂಬೈನಲ್ಲಿ ನಡೆಯಲಿದೆ ಎಂದು ಅಂಬಾನಿ ಕುಟುಂಬ ಸ್ಪಷ್ಟಪಡಿಸಿವೆ.
ನಿಶ್ಚಿತಾರ್ಥದ ಸಂದರ್ಭದಲ್ಲಿ ಮದುವೆಗೆ ಸಂಬಂಧಿಸಿದ ಎಲ್ಲಾ ವಿವಾಹ ಸಮಾರಂಭ ಭಾರತದಲ್ಲಿಯೇ ನಡಯಲಿದೆ ಎಂದು ಅನಂತ್ ಅಂಬಾನಿ ಸ್ಪಷ್ಟಪಡಿಸಿದ್ದರು. . ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ವಿವಾಹ ಸಮಾರಂಭ ನಡೆಯಲಿದೆ ಎಂದು ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸಹ ಹೇಳಿದ್ದರು. ಇದೀಗ ಅದೇ ರೀತಿ ಮುಂಬೈ ಮಹಾನಗರದಲ್ಲಿ ಮದುವೆ ಕಾರ್ಯಕ್ರಮಗಳು ಆರಂಭಗೊಂಡಿವೆ.
ಬಾಲಿವುಡ್ ಸ್ಟಾರ್, ಖ್ಯಾತ ಆಟಗಾರರು ಸೇರಿದಂತೆ ಆಗರ್ಭ ಶ್ರೀಮಂತರು ತಮ್ಮ ಮದುವೆಯನ್ನು ಸುಂದರ ಸ್ಥಳದಲ್ಲಿ ಆಗಲು ಇಷ್ಟಪಡುತ್ತಾರೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ-ರಣ್‌ವೀರ್ ಸಿಂಗ್ ಮದುವೆಗೆ ವಿದೇಶದ ಸುಂದರ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಲಕ್ಷ ಲಕ್ಷ ಕೋಟಿ ಕುಳವಾಗಿರುವ ಮುಕೇಶ್ ಅಂಬಾನಿ ಮಗನ ಮದುವೆ ಭಾರತದಲ್ಲಿ ಮಾಡುತ್ತಿರೋದಕ್ಕೆ ಬಲವಾದ ಕಾರಣವಿದೆ. ಮಗ ಅನಂತ್ ಮದುವೆ ಭಾರತದಲ್ಲಿ ಯಾಕೆ ಆಗಬೇಕು ಎಂಬ ಕಾರಣವನ್ನು ತಿಳಿಸಿದಾಗ ಅಂಬಾನಿ ಬೇಡ ಅನ್ನೋದಕ್ಕೆ ಹೋಗಲಿಲ್ಲವಂತೆ. ಮಗ ನೀಡಿದ ಕಾರಣ ಕೇಳಿ ಆತನ ಇಚ್ಛೆಯಂತೆ ಮುಂಬೈನಲ್ಲಿ ಪುತ್ರನ ಮದುವೆ ಮಾಡುತ್ತಿದ್ದಾರೆ.
ಅಂಬಾನಿ ಮನೆ ಪಕ್ಕದಲ್ಲಿರೋ ಈ ಪುಟಾಣಿ ಅಂಗಡಿಯ ಬಾಡಿಗೆ ಎಷ್ಟು ಗೊತ್ತಾ?
ತಂದೆಗೆ ಅನಂತ್ ಹೇಳಿದ ಕಾರಣ ಏನು?
ಪ್ರಧಾನಿ ನರೇಂದ್ರ ಮೋದಿಯವರು ವೆಡ್ ಇನ್ ಇಂಡಿಯಾ ಕಲ್ಪನೆಗೆ ಕರೆ ನೀಡಿದ್ದರು. ಶ್ರೀಮಂತರು, ದೊಡ್ಡ ದೊಡ್ಡ ಕಲಾವಿದರು ಮದುವೆಯನ್ನು ಭಾರತದಲ್ಲಿಯಾದ್ರೆ ಇಲ್ಲಿಯ ಜನರಿಗೆ ಕೆಲಸ ಸಿಗುತ್ತದೆ. ಹಾಗಾಗಿ ಭಾರತದಲ್ಲಿ ಮದುವೆಯಾಗುವಂತೆ ಕರೆ ನೀಡಿದ್ದರು. ವೆಡ್ ಇನ್ ಇಂಡಿಯಾ ಕಲ್ಪನೆಯಿಂದ ಸ್ಪೂರ್ತಿ ಪಡೆದುಕೊಂಡಿರುವ ಅನಂತ್ ಅಂಬಾನಿ ಭಾರತದಲ್ಲಿ ಮದುವೆಯಾಗಲು ನಿರ್ಧರಿಸಿದ್ದರಂತೆ. ಇದೇ ಕಾರಣವನ್ನು ತಂದೆಗೆ ಹೇಳಿದಾಗ ಬೇಡ ಅನ್ನದೇ ಒಪ್ಪಿಕೊಂಡರು ಎಂದು ತಿಳಿದು ಬಂದಿದೆ.
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಭಾರತೀಯ ಆರ್ಥಿಕತೆಯಲ್ಲಿ ದೊಡ್ಡಮಟ್ಟದ ಪರಿಣಾಮ ಬೀರಲಿದೆ. ಈ ಮದುವೆಯ ಮೂಲಕ ಕಲಾವಿದರು, ಸಾಂಸ್ಕೃತಿಕ ಕರಕುಶಲ ಕರ್ಮಿಗಳು,, ವಿನ್ಯಾಸಕರು ಹೀಗೆ ನಾನಾ ಕ್ಷೇತ್ರಗಳ ಸಾವಿರಾರು ಮಂದಿ ಉದ್ಯೋಗ ಪಡೆಯುತ್ತಿದ್ದಾರೆ. ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಆರು ತಿಂಗಳ ಕಾಲ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ನೇಮಿಸಲಾಗಿತ್ತು. ಅಡುಗೆಯವರು, ಚಾಲಕರು, ಕಲಾವಿದರು ಸೇರಿದಂತೆ ಹಲವು ಮದುವೆಯಿಂದ ಆರ್ಥಿಕ ಲಾಭ ಪಡೆದುಕೊಳ್ಳುತ್ತಿದ್ದಾರೆ. ವಿವಾಹ ಪೂರ್ವ ಕಾರ್ಯಕ್ರಮದಿಂದ ಜಾಮ್‌ನಗರ, ರಾಜ್‌ಕೋಟ್ ಮತ್ತು ಹತ್ತಿರದ ಪ್ರದೇಶಗಳ ಪ್ರವಾಸೋದ್ಯಮದ ಬೆಳವಣಿಗೆಯಾಗಿದೆ ಎಂದು ವರದಿಯಾಗಿದೆ.
ಮದುವೆಗೂ ಮುನ್ನವೇ ಎಲ್ಲರ ಮನಸ್ಸು ಗೆದ್ದ ಅಂಬಾನಿ ಸೊಸೆ ರಾಧಿಕಾ