Pradeep Purnekar : ಕಚೇರಿ ಮುಂಭಾಗವೇ ಭೀಕರ ದಾಳಿ, ಉಸಿರು ಚೆಲ್ಲಿದ ಶಿವಸೇನಾ ಮುಖಂಡ!

Published : Sep 30, 2026, 11:56 AM ISTUpdated : Sep 30, 2026, 12:09 PM IST
Shiv Sena (UBT) leader Pradeep Purnekar

ಸಾರಾಂಶ

ಥಾಣೆಯಲ್ಲಿ ಶಿವಸೇನೆ (ಯುಬಿಟಿ) ನಾಯಕ ಪ್ರದೀಪ್ ಪೂರ್ಣೇಕರ್ ಅವರ ಕಚೇರಿ ಮುಂಭಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವು. ಈ ಕೃತ್ಯದ ಹಿಂದಿನ ಕಾರಣವೇನು? ಪೊಲೀಸರು ಹೇಳೋದೇನು?

ಪುಣೆ (ಸೆ.30): ಥಾಣೆ ನಗರದ ಕಚೇರಿ ಮುಂಭಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹಲ್ಲೆ ನಡೆಸಿದ ಪರಿಣಾಮ ಸ್ಥಳೀಯ ಶಿವಸೇನೆ (ಯುಬಿಟಿ) ನಾಯಕ ಪ್ರದೀಪ್ ಪೂರ್ಣೇಕರ್(Pradeep Purnekar) ದುರ್ಮರಣಕ್ಕೀಡಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕಪುರಬಾವಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಳಿಕ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಆತಂಕದಲ್ಲಿದ್ದಾರೆ.

ಯಾರು ಪ್ರದೀಪ್ ಪೂರ್ಣೇಕರ್?

ಪ್ರದೀಪ್ ಪೂರ್ಣೇಕರ್ ಅವರು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ(UBT) ಪಕ್ಷದ ಥಾಣೆ ವಿಭಾಗದ ಮುಖ್ಯಸ್ಥರಾಗಿದ್ದರು ಎಂದು ನಾಯಕರೊಬ್ಬರು ತಿಳಿಸಿದ್ದಾರೆ.

ಕಚೇರಿ ಮುಂಭಾಗ ಘಟನೆ ಹೇಗಾಯ್ತು?

ನಿನ್ನೆ ರಾತ್ರಿ ಸುಮಾರು ಒಂಭತ್ತು ಗಂಟೆಗೆ ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಪೂರ್ಣೇಕರ್ ಮೇಲೆ ಮಾರಕಾಸ್ಟ್ರಗಳಿಂದ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಘೋಡ್‌ಬಂದರ್ ರಸ್ತೆಯ ಆರ್ ಮಾಲ್ ಸಮೀಪದ ಇನ್ಫಿನಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆ ಆರಂಭಿಸಿದರು. ಆದರೆ ಆ ವೇಳೆಗೆ ಅವರಿಗೆ ಗುಂಡೇಟಿನಿಂದಾಗಿ ತೀವ್ರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರದೀಪ್ ಪೂರ್ಣೇಕರ್ ಮೇಲಿನ ದಾಳಿಗೆ ಕಾರಣವೇನು?

ದಾಳಿ ನಡೆಯಲು ಕಾರಣವೇನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಈ ಬಗ್ಗೆ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಕೀಯ ವೈಷಮ್ಯ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆ ಕೊ ಲೆ ನಡೆದಿರುವ ಸಾಧ್ಯತೆ ಬಗ್ಗೆಯೂ ಪೊಲೀಸರು ಸಂಶಯವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

ಗುಂಡಿನ ದಾಳಿ ನಡೆದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ ಅಧಿಕಾರಿಗಳು, ಸ್ಥಳಕ್ಕೆ ತೆರಳಿ ಕೃತ್ಯ ನಡೆದ ಸ್ಥಳದ ಸುತ್ತಮುತ್ತ ಭದ್ರಪಡಿಸಿದ್ದು, ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ವಿಧಿವಿಜ್ಞಾನ ಸಾಕ್ಷ್ಯಗಳನ್ನೂ ಸಂಗ್ರಹಿಸಲಾಗುತ್ತಿದೆ. ಇನ್ನು ಈ ಘಟನೆ ನಡೆಯುವಾಗ ಕಣ್ಣಾರೆ ಕಂಡ ಪ್ರತ್ಯಕ್ಷ ಸಾಕ್ಷಿಗಳಾಗಿರುವ ಸಾಧ್ಯತೆ ಇರುವವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ನಡೆಸಿದವರು ಯಾರು ಮತ್ತು ಗುಂಡಿನ ದಾಳಿಗೂ ಮುನ್ನ ಹಾಗೂ ನಂತರ ಅವರು ಎಲ್ಲಿಗೆ ತೆರಳಿದ್ದರು ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸಿಸಿಟಿವಿ ದೃಶ್ಯ ಪರಿಶೀಲನೆ

ದಾಳಿಕೋರರನ್ನು ಪತ್ತೆಹಚ್ಚಲು, ಎಸ್ಕೇಪ್ ಆಗಿರುವ ಮಾರ್ಗ ಪತ್ತೆಹಚ್ಚಲು ಘಟನಾ ಸ್ಥಳದಲ್ಲಿನ ಸಿಸಿಟಿವಿಗಳನ್ನು ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ. ಹ ತ್ಯೆಗೆ ಕಾರಣರಾದವರನ್ನು ಪತ್ತೆಹಚ್ಚಲು ಸಹಾಯವಾಗಬಹುದಾದ ಇತರ ಸಾಕ್ಷ್ಯಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಥಾಣೆಯಾದ್ಯಂತ ಚೆಕ್‌ಪೋಸ್ಟ್‌

ಶಂಕಿತ ಆರೋಪಿಗಳನ್ನು ಹಿಡಿಯಲು ಥಾಣೆಯಿಂದ ಹೊರಹೋಗುವ ಪ್ರಮುಖ ಮಾರ್ಗಗಳಲ್ಲಿ ಪೊಲೀಸರು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ. ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದಾಳಿಕೋರರನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಶೋಧ ಕಾರ್ಯ ನಡೆಸುತ್ತಿದ್ದು, ಅಗತ್ಯ ಮಾಹಿತಿಯನ್ನು ಸಂಗ್ರಹಿಸುತ್ತಿವೆ.

ಈ ಹ ತ್ಯೆಯಿಂದ ಸ್ಥಳೀಯ ಶಿವಸೇನೆ (ಯುಬಿಟಿ) ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಆತಂಕ ಉಂಟಾಗಿದೆ. ಹ ತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಪಕ್ಷದ ಹಿರಿಯ ನಾಯಕರು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

₹1.20 ಲಕ್ಷಕ್ಕೆ ಕರುಳ ಕುಡಿಯನ್ನೇ ಮಾರಿದರಾ ಹೆತ್ತವರು? ಚಿನ್ನದ ಸರ, ಮೊಬೈಲ್‌ ಖರೀದಿ ಆರೋಪ; 7 ಮಂದಿ ಬಂಧನ
ಈ ದೇಶದಲ್ಲಿ ₹850ಕ್ಕೆ ನಿಂಬೆಹಣ್ಣು, ₹300ಕ್ಕೆ ಸೌತೆಕಾಯಿ; ಭಾರತದಲ್ಲಿ ರೈತನಿಗೆ ಸಿಗೋದು ಎಷ್ಟು?