
ನವದೆಹಲಿ(ಮಾ.18): ಕಾಶ್ಮೀರ ಹಿಂದೂಗಳ ಮೇಲೆ ನಡೆದ ಹತ್ಯಾಕಾಂಡ ಕುರಿತ ದಿ ಕಾಶ್ಮೀರ್ ಫೈಲ್ಸ್ ಬಾಲಿವುಡ್ ಚಿತ್ರ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಸುಳ್ಳನ್ನೇ ತೋರಿಸಲಾಗಿದೆ. ಸತ್ಯಾಂಶವಿಲ್ಲ ಎಂಬ ಜಮ್ಮು ಮತ್ತು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. 70 ಐಎಸ್ಐ ಉಗ್ರರ ಬಿಡುಗಡೆ ಮಾಡಲು ಆದೇಶಿಸಿದ್ದ ಫಾರೂಖ್ ಅಬ್ದುಲ್ಲಾ, ಹಿಂದೂಗಳ ಹತ್ಯೆಗೆ ದಾರಿ ಮಾಡಿಕೊಟ್ಟಿದ್ದರು ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಹೇಳಿದ್ದಾರೆ.
ಓಮರ್ ಅಬ್ದುಲ್ಲಾ ಅವರಿಗೆ ದಿ ಕಾಶ್ಮೀರ ಫೈಲ್ಸ್ ಚಿತ್ರದಲ್ಲಿನ ಸತ್ಯಾಂಶಗಳು ಕಾಣುತ್ತಿಲ್ಲ. ಚಿತ್ರದ ಯಾವಭಾಗದಲ್ಲಿ ಸುಳ್ಳು ಹೇಳಲಾಗಿದೆ ಎಂದು ಅಮಿತ್ ಮಾಳವಿಯಾ ಓಮರ್ ಅಬ್ದುಲ್ಲಾಗೆ ಪ್ರಶ್ನಿಸಿದ್ದಾರೆ. ಫಾರೂಖ್ ಅಬ್ದುಲ್ಲಾ ಜನವರಿ 18, 1990ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದಕ್ಕೂ ಮೊದಲು ಜೈಲಿನಲ್ಲಿದ್ದ 70 ಐಎಸ್ಐ ಉಗ್ರರನ್ನು ಬಿಡುಗಡೆ ಮಾಡಲು ಫಾರೂಖ್ ಆದೇಶಿಸಿದ್ದರು ಎಂದು ಮಾಳವಿಯಾ ಹೇಳಿದ್ದಾರೆ.
ಸತ್ಯ ಮರೆ ಮಾಚಿ ಸುಳ್ಳಿನ ವೈಭವೀಕರಣ, ಕಾಶ್ಮೀರ ಫೈಲ್ಸ್ ಚಿತ್ರದ ವಿರುದ್ಧ ಓಮರ್ ಅಬ್ದುಲ್ಲಾ ಆಕ್ರೋಶ!
ಕಾಶ್ಮೀರದ ಗವರ್ನರ್ ಆಗಿ ಜಗ್‌ಮೋಹನ್ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ 1984ರಲ್ಲಿ ನೇಮಕ ಮಾಡಿದ್ದರು. 1989ರ ಜುಲೈ ತಿಂಗಳಿನಲ್ಲಿ ಜಗ್‌ಮೋಹನ್ ಕಾಶ್ಮೀರ ಕುರಿತು ಎಚ್ಚರಿಕೆಯನ್ನು ಅಂದಿನ ಕೇಂದ್ರ ಸರ್ಕಾರಕ್ಕೆ ನೀಡಿದ್ದರು. ಕಾಶ್ಮೀರದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ದಾಳಿಗೆ ಸಜ್ಜಾಗುತ್ತಿದೆ. ಅಶಾಂತಿಗೆ ಸಜ್ಜಾಗುತ್ತಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದರು. ಆದರೆ ರಾಜೀವ್ ಗಾಂಧಿ ಈ ವಿಚಾರ ನಿರ್ಲಕ್ಷ್ಯಿಸಿ, ಮುಂಬರುವ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಜಗ್‌ಮೋಹನ್‌ಗೆ ಆಫರ್ ನೀಡಿದ್ದರು. ಆ ಆಫರ್ ಜಗ್‌ಮೋಹನ್ ತಿರಿಸ್ಕರಿಸಿದ್ದರು. ಇನ್ನು ಜನವರಿ 20, 1990ರಲ್ಲಿ ಜಗ್‌ಮೋಹನ್ ಅವರನ್ನು ಮರು ನೇಮಕ ಮಾಡಲಾಗಿತ್ತು.
ಫಾರೂಖ್ ಅಬ್ದುಲ್ಲಾ ಜನವರಿ 18, 1990ರಲ್ಲಿ ಜಮ್ಮು ಕಾಶ್ಮೀರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜನವರಿ 19, 1990ರಂದು ಜಿಹಾದಿಗಳು ಕಾಶ್ಮೀರದಲ್ಲಿ ಪಂಡಿತ್ ಹಿಂದೂಗಳನ್ನು ಕಾಶ್ಮೀರ ಬಿಟ್ಟು ತೊಲಗಲು ಸೂಚನೆ ನೀಡಿದ್ದರು. ಅಲ್ಲಲ್ಲಿ ಹಿಂಸಾಚಾರಗಳು ಆರಂಭಗೊಂಡಿತ್ತು. ಗವನರ್ರ್ ಜನವರಿ 22, 1990 ರಂದು ಕಾಶ್ಮೀರಕ್ಕೆ ತಲುಪಿದ್ದಾರೆ. ಅಷ್ಟರಲ್ಲಿ ಮಸೀದಿಗಳ ಮೈಕ್‌ಗಳಲ್ಲಿ ಕಾಶ್ಮೀರ ನಮ್ಮದು, ಇಲ್ಲಿ ಇರಬೇಕಾದರೆ ಇಸ್ಲಾಂಗೆ ಮತಾಂತರವಾಗಿ, ಇಲ್ಲವಾದರೆ ತೊಲಗಿ, ಅದೂ ಸಾಧ್ಯವಾಗಿದ್ದರೆ ಪರಿಣಾಮ ಎದುರಿಸಿ ಎಂದು ಸೂಚನೆ ನೀಡಲಾಗಿತ್ತು.
ಕಾಶ್ಮೀರ್ ಫೈಲ್ಸ್: ಚಿತ್ರ ನೋಡಿ ಕಂಬನಿ ಮಿಡಿದ ಅನುಪಮ್ ಖೇರ್ ತಾಯಿ !
ಎಲ್ಲಾ ಸುಳ್ಳು; ಓಮರ್ ಅಬ್ದುಲ್ಲಾ
ದಿ ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಸತ್ಯವನ್ನು ಮರೆ ಮಾಚಿ ಸುಳ್ಳನ್ನು ಹೇಳಲಾಗಿದೆ. ಕಾಶ್ಮೀರ ಪಂಡಿತರ ಮೇಲಿನ ಘಟನೆ ನಡೆದಾಗ ಫಾರೂಕ್ ಅಬ್ದುಲ್ಲಾ ಸಿಎಂ ಆಗಿರಲಿಲ್ಲ. ಕೇಂದ್ರದಲ್ಲಿ ವಿಪಿ ಸಿಂಗ್ ಸರ್ಕಾರಕ್ಕೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಕಾಶ್ಮೀರದಲ್ಲಿ ಮುಸ್ಲಿಂಮರು, ಸಿಖರು ಹತ್ಯೆಯಾಗಿದ್ದಾರೆ. ಚಿತ್ರದಲ್ಲಿ ಸುಳ್ಳನ್ನೇ ಹೇಳಲಾಗಿದೆ ಎಂದು ಕಾಶ್ಮೀರಿ ಫೈಲ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗರಂ
ಬಿಜೆಪಿಯವರು ತಮಗೆ ಅನುಕೂಲ ಆಗುವ ರೀತಿಯಲ್ಲಿ ದಿ ಕಾಶ್ಮೀರಿ ಫೈಲ್ಸ್ ಚಿತ್ರ ತೆಗೆಸಿದ್ದಾರೆ. ಚಿತ್ರ ಚೆನ್ನಾಗಿದ್ದರೆ ಜನ ನೋಡುತ್ತಾರೆ, ಆದರೆ ಪ್ರಧಾನಿ ಪ್ರಮೋಟ್ ಮಾಡೋದು ಸರಿನಾ? ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಕಲಬುರಗಿಯಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವಾಗಿಯೇ ಜನ ಚಿತ್ರ ನೋಡಿದರೆ ಯಾರ ಅಭ್ಯಂತರವೂ ಇಲ್ಲ. ಆದರೆ ಬಿಜೆಪಿಯವರು ತಮ್ಮ ಚಿಂತನೆಗೆ ತಕ್ಕಂತೆಯೇ ಚಿತ್ರ ಇರುವಂತೆ ಮಾಡಿ ಅದರಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಯತ್ನದಲ್ಲಿದ್ದಾರೆ. ದೇಶದಲ್ಲಿ ಬೆಂಕಿ ಹಚ್ಚಿ, ವಿಭಜನೆ ಮಾಡೋ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ