
ಗಾಂಧಿನಗರ: ‘ಎಲ್ಲಿ ತಾರತಮ್ಯ ಇರುವುದಿಲ್ಲವೋ ಅಲ್ಲಿ ನಿಜವಾದ ಜಾತ್ಯತೀತತೆ ಇರುತ್ತದೆ. ನಮ್ಮ ಸರ್ಕಾರ ಯೋಜನೆಗಳ ಫಲವನ್ನು ಜನರಿಗೆ ತಲುಪಿಸುವಾಗ ಯಾವುದೇ ಜಾತಿ, ಧರ್ಮ ಆಧರಿಸಿ ತಾರತಮ್ಯ ಮಾಡಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳ ಗೃಹಪ್ರವೇಶ ಹಾಗೈ 4,400 ಕೋಟಿ ರು. ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ‘ಎಲ್ಲರಿಗೂ ಸಂತೋಷವಾಗುವ ಹಾಗೂ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುವುದೇ ನಿಜವಾದ ಸಾಮಾಜಿಕ ನ್ಯಾಯ ಎಂದು ಹೇಳಿದರು.
‘ನಾವು ಸರ್ಕಾರದ ಯೋಜನೆಗಳ ಫಲವನ್ನು ಸಂಪೂರ್ಣವಾಗಿ ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ. ಅಂದರೇ ಸರ್ಕಾರವೇ ಫಲಾನುಭವಿಗಳ ಪಾಲಾಗುತ್ತಿದೆ. ಸರ್ಕಾರದ ಈ ನಡೆ ಭ್ರಷ್ಟಾಚಾರವನ್ನು ದೊಡ್ಡ ಮಟ್ಟದಲ್ಲಿ ತಡೆಗಟ್ಟಿದೆ. ಯೋಜನೆಗಳ ಫಲವನ್ನು ಜನರಿಗೆ ತಲುಪಿಸುವಾಗ ಸರ್ಕಾರ ಯಾವುದೇ ಜಾತಿ ಧರ್ಮಗಳನ್ನು ಆಧರಿಸಿ ತಾರತಮ್ಯ ಮಾಡಿಲ್ಲ. ಅದೇ ರೀತಿ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಆವಾಸ ಯೋಜನೆ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರ ವಹಿಸಿದೆ. 4 ಕೋಟಿ ಮನೆಗಳಲ್ಲಿ ಶೇ.70ರಷ್ಟನ್ನು ಸರ್ಕಾರ ಈಗಾಗಲೇ ಮಹಿಳೆಯರಿಗೆ ನೀಡಿದೆ’ ಎಂದು ಹೇಳಿದರು. ‘ನನ್ನ ಪ್ರಕಾರ ಎಲ್ಲಿ ತಾರತಮ್ಯ ಇರುವುದಿಲ್ಲವೋ ಅಲ್ಲಿ ನಿಜವಾದ ಜಾತ್ಯತೀತತೆ ಇರುತ್ತದೆ. ಎಲ್ಲರಿಗೂ ಸಂತೋಷ ಮತ್ತು ಅನುಕೂಲಕರವಾಗಿ ಕೆಲಸ ಮಾಡುವುದೇ ನಿಜವಾದ ಸಾಮಾಜಿಕ ನ್ಯಾಯವಾಗಿದೆ. ನಾವು ಇದೇ ನಿಟ್ಟಿನಲ್ಲಿ ಸಾಗುತ್ತಿದ್ದೇವೆ’ ಎಂದು ಅವರು ಹೇಳಿದರು
PMAY ಅಡಿ ಮನೆ ಸಾಲ ಸಬ್ಸಿಡಿ ನೀಡಲು ನಿರಾಕರಿಸಿದ ಬ್ಯಾಂಕ್‌ಗೆ ಶಾಕ್: ಕೇಸ್ ಗೆದ್ದ ಗ್ರಾಹಕ
ಎಪ್ರಿಲ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪಂಜಾಯತ್ ರಾಜ್ ದಿನ ರೇವಾಗೆ ಭೇಟಿ ನೀಡಿದ್ದರು. ಈ ವೇಳೆ ಪ್ರಧಾನ ಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ 4 ಲಕ್ಷ ಮನೆಗಳ ಗೃಹ ಪ್ರವೇಶ ನೆರವೇರಿಸಿ ಫಲಾನುಭವಿಗಳಿಗೆ ಕೀ ವಿತರಿಸಿದ್ದರು. 2022ರ ಡಿಸೆಂಬರ್ ತಿಂಗಳಲ್ಲಿ ತ್ರಿಪುರಾಗೆ ತೆರಳಿದ ಮೋದಿ, ಗ್ರಾಮೀಣ ಭಾಗದಲ್ಲಿ ನಿರ್ಮಿಸಲಾದ 2 ಲಕ್ಷ ಮನೆಗಳ ಗೃಹ ಪ್ರವೇಶ ನೆರವೇರಿಸಿದ್ದರು.
2022ರ ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರದೇಶ ಸಾತ್ನಾದಲ್ಲಿ ನಿರ್ಮಿಸಲಾದ 4.51 ಲಕ್ಷ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದ್ದರು. 2022ರ ನವೆಂಬರ್ ತಿಂಗಳಲ್ಲಿ ದೆಹಲಿ ಸ್ಲಂ ನಿವಾಸಿಗಳಿಗೆ ನಿರ್ಮಿಸಲಾದ 3024 ಫ್ಲ್ಯಾಟ್‌ಗಳನ್ನು ವಿತರಿಸಿದ್ದರು. 2022ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ಮೋದಿ ಗುಜರಾತ್ ಪ್ರವಾಸದಲ್ಲಿ 45,000 ಮನೆಗಳ ನಿರ್ಮಾಣಕ್ಕೆ ಶಿಲನ್ಯಾಸ ಮಾಡಿದ್ದರು.
ಮಧ್ಯಪ್ರದೇಶದ 5 ಲಕ್ಷ ಜನರ 'ಗೃಹ ಪ್ರವೇಶ'ದಲ್ಲಿ ಭಾಗವಹಿಸಿದ ಪಿಎಂ ಮೋದಿ
2022ರ ಮಾರ್ಚ್ ತಿಂಗಳಲ್ಲಿ ಮಧ್ಯ ಪ್ರದೇಶದಲ್ಲಿ ನಿರ್ಮಿಸಲಾದ 5 ಲಕ್ಷ ಆವಾಸ್ ಮನೆಗಳ ಗೃಹ ಪ್ರವೇಶ ನೇರವೇರಿಸಿ ಅರ್ಹರಿಗೆ ಕೀ ವಿತರಿಸಿದ್ದರು. 2021ರ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಪಿಎಂ ಅವಾಸ್ ಯೋಜನೆಯಡಿ ನಿರ್ಮಿಸಲಾದ 75,000 ಮನೆಗಳ ಗೃಹ ಪ್ರವೇಶ ನೆರವೇರಿಸಿ, ಫಲಾನುವಿಗಳಿಗೆ ಮನೆ ವಿತರಿಸಿದ್ದರು. 2020ರ ಸೆಪ್ಟೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದ 1.75 ಲಕ್ಷ ಕುಟುಂಬಗಳಿಗೆ ಪಿಎಂ ಆವಾಸ್ ಯೋಜನೆ ಮನೆಗಳನ್ನು ವಿತರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ