ನೀವು ಪ್ರಧಾನಿಯಾಗಿದ್ದರೆ ಏನು ಮಾಡ್ತಿದ್ರಿ? ಹೀಗಿತ್ತು ರಾಹುಲ್ ಗಾಂಧಿ ಉತ್ತರ!

By Suvarna News  |  First Published Apr 3, 2021, 10:10 AM IST

ಪ್ರಧಾನಿಯಾಗಿದ್ದರೆ ರಾಹುಲ್ ಗಾಂಧಿ ಯಾವುದಕ್ಕೆ ಪ್ರಾಮುಖ್ಯತೆ ನಿಡುತ್ತಿದ್ದರು?| ಪ್ರಶ್ನೆಗೆ ರಾಹುಲ್ ಗಾಂಧಿ ಕೊಟ್ಟ ಉತ್ತರ ಹೀಗಿತ್ತು


ನವದೆಹಲಿ(ಏ.03): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾನು ಪ್ರಧಾನ ಮಂತ್ರಿಯಾಗಿದ್ದರೆ ಅಭಿವೃದ್ಧಿ ಕಡೆ ಗಮನ ನೀಡುವ ಬದಲು ಉದ್ಯೋಗಾವಕಾಶ ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದೆ ಎಂದಿದ್ದಾರೆ. 

LIVE: My interaction with Ambassador Nicholas Burns from Harvard Kennedy School. https://t.co/KZUkRnLlDg

— Rahul Gandhi (@RahulGandhi)

ರಾಹುಲ್ ಗಾಂಧಿ ಅಮೆರಿಕದ ಹಾರ್ವರ್ಡ್ ಕೆನಡಿ ಸ್ಕೂಲ್‌ನ ರಾಯಭಾರಿ ನಿಕೋಲಸ್ ಬರ್ಸ್‌ ಜೊತೆ ಮಾತುಕತೆ ನಡೆಸುತ್ತಿದ್ದ ವೇಳೆ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಹೀಗಿರುವಾಗಲೇ ಪ್ರಧಾನಿಯಾಗಿದ್ದರೆ ನೀವೇನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದಾಗ ಅಭಿವೃದ್ಧಿಗಿಂತ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವತ್ತ  ಗಮನ ಹರಿಸುತ್ತಿದ್ದೆ. ಉದ್ಯೋಗ ಸೃಷ್ಟಿ ಮೂಲಕ ಅಭಿವೃದ್ಧಿ ಕಡೆ ಸಾಗುವತ್ತ ಗಮನ ಹರಿಸುತ್ತಿದ್ದೆ. ನಮಗೆ ಅಭಿವೃದ್ಧಿ ಅಗತ್ಯವಿದೆ. ಆದರೆ ಉದ್ಯೋಗಾವಕಾಶ ಸೃಷ್ಟಿ ಅದಕ್ಕೂ ಮಹತ್ವನೀಯ ಎಂದಿದ್ದಾರೆ. 

Latest Videos

ಇದೇ ವೆಳೆ ಬೇರೆ ಪ್ರಶ್ನೆಗಳಿಗೆ ಉತ್ತರಿಇಸರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಉದ್ಯೋಗಾವಖಾಶ ಸೃಷ್ಟಿಯಿಂದ ಅಭಿವೃದ್ಧಿಯತ್ತ ಸಾಗಬಹುದಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. 

click me!