Cyclone Biparjoy: ಪಶ್ಚಿಮ ರೈಲ್ವೆಯ 99 ರೈಲು ರದ್ದು, ರದ್ದಾಗಿರುವ ರೈಲುಗಳನ್ನು ಚೆಕ್ ಮಾಡುವುದು ಹೇಗೆ

By Gowthami KFirst Published Jun 16, 2023, 4:17 PM IST
Highlights

ಬಿಪೊರ್‌ಜೊಯ್‌ ಚಂಡಮಾರುತದ ಪರಿಣಾಮವಾಗಿ ಭೂಕುಸಿತ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಜೂನ್ 18 ರವರೆಗೆ ಸುಮಾರು 100 ರೈಲುಗಳನ್ನು ರದ್ದುಗಳಿಸಲಾಗಿದೆ. ಯಾವರೆಲ್ಲ ರೈಲು ರದ್ದುಗೊಂಡಿದೆ ಎಂಬುದನ್ನು ಚೆಕ್ ಮಾಡುವ ವಿಧಾನ ಇಲ್ಲಿ ನೀಡಲಾಗಿದೆ.

ನವದೆಹಲಿ (ಜೂ.16): ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪೊರ್‌ಜೊಯ್‌ ಚಂಡಮಾರುತ  ಗುಜರಾತ್‌ನ ಕಛ್‌ ಬಳಿ ಇರುವ ಜಕಾವು ಬಂದರಿಗೆ ಅಪ್ಪಳಿಸಿದೆ. ಪರಿಣಾಮವಾಗಿ ಭೂಕುಸಿತ ಸಂಭವಿಸಿದೆ. ಈವರೆಗೆ ಇಬ್ಬರು ಮೃತಪಟ್ಟು 23 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಬಿಪರ್‌ಜೋಯ್ ಚಂಡಮಾರುತ ಪರಿಣಾಮ ಗುಜರಾತ್‌ನ ನೆರೆ ಪೀಡಿತ ಪ್ರದೇಶಗಳಲ್ಲಿ ಸಂಚರಿಸುವ ಸುಮಾರು 99 ರೈಲುಗಳನ್ನು ರದ್ದು ಮಾಡಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ. ಅತ್ಯಂತ ತೀವ್ರವಾದ ಚಂಡಮಾರುತ 'ಬಿಪರ್‌ಜೋಯ್' ನಿಂದಾಗಿ ಭೂಕುಸಿತ ಪ್ರಕ್ರಿಯೆಯು ಪ್ರಾರಂಭವಾಗಿ ಇದು ಮುಂದುವರಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಹಿರಿಯ ಹವಾಮಾನ ವಿಜ್ಞಾನಿಗಳು ತಿಳಿಸಿದ್ದಾರೆ. ಹೀಗಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 

ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಯ ದೃಷ್ಟಿಯಿಂದ ಜೂನ್ 18 ರವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ 99 ರೈಲುಗಳನ್ನು ರದ್ದುಗೊಳಿಸಲಾಗಿದೆ, 39 ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಟ್ವೀಟ್ ಮಾಡಿದ್ದಾರೆ.

Latest Videos

 ಕೊಂಕಣ ರೈಲ್ವೆ-ಭಾರತೀಯ ರೈಲ್ವೆಗೆ ವಿಲೀನಕ್ಕೆ ಸಾರ್ವಜನಿಕರ ಬೆಂಬಲ, ವಿಲೀನದ ಅನುಕೂಲಗಳು ಇಲ್ಲಿದೆ

ಸದ್ಯ ಗಂಟೆಗೆ 115 ರಿಂದ 125 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗಂಟೆಗೆ 140 ಕಿ.ಮೀ ವೇಗದಲ್ಲಿ ಬೀಸಬಹುದು. ಮಧ್ಯರಾತ್ರಿಯ ವೇಳೆಗೆ ಗಾಳಿಯ ವೇಗ ಕಡಿಮೆಯಾಗಬಹುದು ಎಂದು   ಹವಾಮಾನ ಇಲಾಖೆ ನಿರ್ದೇಶಕಿ ಮನೋರಮಾ ಮೊಹಂತಿ ತಿಳಿಸಿದ್ದಾರೆ.

ರದ್ದಾಗಿರುವ ರೈಲುಗಳು ಯಾವುದು ಚೆಕ್ ಮಾಡುವ ವಿಧಾನ: 
ಭಾರತೀಯ ರೈಲ್ವೆ ಯ ವೆಬ್‌ಸೈಟ್‌ಗೆ 'ನ್ಯಾಷನಲ್ ಟ್ರೈನ್ ಇನ್ಕ್ವೈರಿ ಸಿಸ್ಟಮ್' (https://enquiry.indianrail.gov.in/mntes/) ಅನ್ನು ಕ್ಲಿಕ್  ಸುಲಭವಾಗಿ ಮಾಡಿದರೆ ಸುಲಭವಾಗಿ ಸದ್ಯ ನೀವು ಸಂಚರಿಸುತ್ತಿರುವ, ಅಥವಾ ಬುಕ್ ಮಾಡಿರುವ ರೈಲಿನ ಸ್ಥಿತಿಗತಿಯನ್ನು ತಿಳಿಯಬಹುದು.

 



For the kind attention of passengers.

The following trains of 16/06/2023 have been Fully Cancelled/Short-Originate by WR as a precautionary measure in the cyclone-prone areas over Western Railway. pic.twitter.com/NcxSLeqK7a

— Western Railway (@WesternRly)

ಚಂಡಮಾರುತದಿಂದ ಉಂಟಾಗಿರುವ ಗಾಳಿ ಗಂಟೆಗೆ ಸುಮಾರು 140 ಕಿ.ಮೀ. ವೇಗದಲ್ಲಿ ಸಾಗುತ್ತಿರುವ ಚಂಡಮಾರುತದಿಂದಾಗಿ ಕಛ್‌ ಮತ್ತು ಸೌರಾಷ್ಟ್ರ ಕಡಲತೀರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹೈ ಅಲರ್ಚ್‌ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಗುಜ​ರಾತ್‌ ಕರಾ​ವ​ಳಿಯ ಅನೇಕ ಭಾಗ​ಗಳಲ್ಲಿ ವಿದ್ಯುತ್‌ ಏರು​ಪೇ​ರಾ​ಗಿದೆ. ಹಲವು ಭಾಗ​ಗ​ಳಲ್ಲಿ ಹೋರ್ಡಿಂಗ್‌​ಗಳು, ಮರ​ಗಳು ಹಾಗೂ ವಿದ್ಯುತ್‌ ಕಂಬ​ಗಳು ಧರೆ​ಗು​ರು​ಳಿ​ವೆ.

ಬಿಪ​ರ್‌​ಜೊಯ್‌ (ಬಂಗಾ​ಳಿ​ಯಲ್ಲಿ ವಿಪ​ತ್ತು ಎಂದ​ರ್ಥ) ಬಿರು​ಗಾ​ಳಿಯ ಅಬ್ಬ​ರ ಎಷ್ಟಿತ್ತು ಎಂದರೆ ಕೆಲವು ಕಡೆ ಸಮು​ದ್ರದ ನೀರು ತೀರ​ಪ್ರ​ದ​ಶದ ಗ್ರಾಮಗಳಿಗೆ ನುಗ್ಗಿದೆ. ಇನ್ನು ಮೃತಪಟ್ಟವರು ದನ-ಪಾಲಕರಾದ ತಂದೆ ಮತ್ತು ಮಗ ಎಂದು ತಿಳಿದುಬಂದಿದೆ. ನೆರೆಯಲ್ಲಿ ಸಿಲುಕಿದ್ದ ತಮ್ಮ ಮೇಕೆಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಮೃತಪಟ್ಟಿದ್ದಾರೆ.

 ಕರ್ನಾಟಕದಲ್ಲಿ ಹಾದು ಹೋಗುವ ನೈರುತ್ಯ ರೈಲುಗಳ ವೇಳಾಪಟ್ಟಿ ಬದಲಾವಣೆ, ನಿಲುಗಡೆ ರದ್ದು

ಯುಎಇಯ ಖ್ಯಾತ ಗಗನಯಾತ್ರಿ ಸುಲ್ತಾನ್ ಅಲ್-ನೆಯಾದಿ ಅವರು ಬಾಹ್ಯಾಕಾಶದಿಂದ ತೀವ್ರ ಚಂಡಮಾರುತದ ಬಿಪರ್‌ಜಾಯ್‌ನ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಹಿಂದಿನ ವೀಡಿಯೊದಲ್ಲಿ ಹೇಳಿದಂತೆ, ಅರೇಬಿಯನ್ ಸಮುದ್ರದಲ್ಲಿ  ಬಿಪೊರ್‌ಜೊಯ್‌ (Biparjoy) ಚಂಡಮಾರುತದ ಕೆಲವು ಚಿತ್ರಗಳು ಇಲ್ಲಿವೆ, ನಾನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಎರಡು ದಿನಗಳಲ್ಲಿ ಕ್ಲಿಕ್ ಮಾಡಿದ್ದೇನೆ" ಎಂದು ಗಗನಯಾತ್ರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

 

As promised in my previous video 📸 here are some pictures of the cyclone forming in the Arabian Sea that I clicked over two days from the International Space Station 🌩️ pic.twitter.com/u7GjyfvmB9

— Sultan AlNeyadi (@Astro_Alneyadi)

 

click me!