
ಕೋಲ್ಕತಾ: ಪಶ್ಚಿಮ ಬಂಗಾಳದ ಪಡಿತರ ಹಗರಣದ ತನಿಖೆಗೆ ಆಗಮಿಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳ ಮೇಲೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆನ್ನಲ್ಲೇ ಹಗರಣದ ಆರೋಪಿ ಹಾಗೂ ಬೊಂಗಾವ್ ಪುರಸಭೆಯ ಮಾಜಿ ಅಧ್ಯಕ್ಷ ಶಂಕರ್ ಅಧ್ಯ ಅವರನ್ನು ಶನಿವಾರ ಮಧ್ಯರಾತ್ರಿ ಇ.ಡಿ. ಬಂಧಿಸಿದೆ.
ಇನ್ನೊಂದೆಡೆ ಪರಾರಿಯಾಗಿರುವ ಹಗರಣದ ಇನ್ನೊಬ್ಬ ಆರೋಪಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ವಿರುದ್ಧ ಶನಿವಾರ ಇ.ಡಿ. ಲುಕೌಟ್ ನೋಟಿಸ್ ಜಾಗೊಳಿಸಿದೆ. ಆಧ್ಯ ಅವರನ್ನು ತೀವ್ರ ಶೋಧದ ಬಳಿಕ ಇ.ಡಿ. ಬಂಧಿಸಿದರೆ, ಶೇಖ್‌ಗೆ ಹುಡುಕಾಟ ಮುಂದುವರಿದಿದೆ.
ಗುರುವಾರ ರಾತ್ರಿ ಇ.ಡಿ. ಅಧಿಕಾರಿಗಳು ಉತ್ತರ 24 ಪರಗಣ ಜಿಲ್ಲೆಯಲ್ಲಿ ಪಡಿತರ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಾ ಮತ್ತು ಶೇಖ್ ಅವರ ನಿವಾಸಗಳ ಮೇಲೆ ದಾಳಿ ನಡೆಸಲು ಯತ್ನಿಸಿದ್ದರು. ಆಗ ಅಧಿಕಾರಿಗಳ ಮೇಲೆ ಸಾವಿರಾರು ತೃಣಮೂಲ ಕಾರ್ಯಕರ್ತರು ಹಿಂಸಾತ್ಮಕ ದಾಳಿ ನಡೆಸಿದ್ದರು.
ಇಡಿ ಮೇಲೆ ಅಟ್ಯಾಕ್ ಬಳಿಕ ನಾಪತ್ತೆಯಾದ ಟಿಎಂಸಿ ನಾಯಕ: ಕುಟುಂಬ ಸಮೇತ ಎಸ್ಕೇಪ್; ಲುಕ್‌ಔಟ್ ನೋಟಿಸ್ ಜಾರಿ
ಇ.ಡಿ. ವಿರುದ್ಧವೇ ದೂರು:
ಈ ನಡುವೆ, ಇ.ಡಿ. ಅಧಿಕಾರಿಗಳು ಯಾವುದೇ ಸರ್ಚ್ ವಾರಂಟ್ ಇಲ್ಲದೇ ದಾಳಿಗೆ ಬಂದಿದ್ದರು. ಸರ್ಚ್ ವಾರಂಟ್ ತೋರಿಸು ಎಂದಾಗ ನಮ್ಮನ್ನು ಬಲವಂತವಾಗಿ ನೂಕಿ ಶಹಜಹಾನ್ ಶೇಖ್ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದರು ಎಂದು ಇ.ಡಿ. ವಿರುದ್ಧ ಶೇಖ್ ಅವರ ನೌಕರ ನಜಾತ್ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ.
ಈಗಾಗಲೇ 1000 ಜನರು ತಮ್ಮ ಮೇಲೆ ದಾಳಿ ನಡೆಸಲು ಯತ್ನಿಸಿದರು. ನಮ್ಮನ್ನು ಹತ್ಯೆ ಮಾಡಲೆಂದೇ ಈ ದಾಳಿ ನಡೆದಿತ್ತು ಎಂದು ಇದೇ ಠಾಣೆಯಲ್ಲಿ ಇ.ಡಿ. ಅಧಿಕಾರಿಗಳು ದೂರು ನೀಡಿದ್ದಾರೆ. ಏತನ್ಮಧ್ಯೆ, ಇ.ಡಿ. ತಂಡದ ಮೇಲೆ ನಡೆದ ದಾಳಿಯು ‘ಪ್ರಚೋದನೆಯ ಪರಿಣಾಮ’ವಾಗಿದೆ. ಬಿಜೆಪಿ ಇಚ್ಛೆಯ ಮೇರೆಗೆ ಕೇಂದ್ರೀಯ ಸಂಸ್ಥೆ ತನ್ನ ಪಕ್ಷದ ನಾಯಕನ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಆರೋಪಿಸಿದ್ದಾರೆ.
ತನಿಖೆಗೆ ತೆರಳಿದ್ದಾಗ ಮಾರಣಾಂತಿಕ ಹಲ್ಲೆ ಬಂಗಾಳದಲ್ಲಿ ಇಡಿ ಮೇಲೆಯೇ ದಾಳಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ