ಆ ಒಂದು ಮಾತಿನಿಂದ ಮೋದಿಗೆ ನೇರವಾಗಿ ಟಕ್ಕರ್ ನೀಡಿದ ದೀದಿ!

Published : Apr 05, 2021, 03:13 PM ISTUpdated : Apr 05, 2021, 03:16 PM IST
ಆ ಒಂದು ಮಾತಿನಿಂದ ಮೋದಿಗೆ ನೇರವಾಗಿ ಟಕ್ಕರ್ ನೀಡಿದ ದೀದಿ!

ಸಾರಾಂಶ

ದಿನೇ ದಿನೇ ಕಾವು ಪಡೆದುಕೊಳ್ಳುತ್ತಿರೋ ಪಶ್ಚಿಮ ಬಂಗಾಳದ ಚುನಾವಣೆ| ನಾನು ಒಂದು ಕಾಲಿನಲ್ಲಿ ಬಂಗಾಳವನ್ನು ಗೆಲ್ಲುತ್ತೇನೆ| ಭವಿಷ್ಯದಲ್ಲಿ ದೆಹಲಿಯಲ್ಲಿ ಎರಡು ಕಾಲುಗಳ ಮೇಲೆ ಗೆಲುವು ಪಡೆಯುತ್ತೇನೆ

ಕೋಲ್ಕತ್ತಾ(ಏ.05): ಕೊರೋನಾತಂಕದ ನಡುವೆಯೇ ನಡೆಯುತ್ತಿರುವ ಪಂಚರಾಜ್ಯ ಚುನಾವಣೆ ಮೇಲೆ ಸದ್ಯ ಇಡೀ ದೇಶದ ಗಮನವಿದೆ. ಯಾರು ಗೆಲ್ಲುತ್ತಾರೆ? ಜನರ ಒಲವು ಯಾರ ಕಡೆಗಿದೆ ಎಂಬುವುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳ ಚುನಾವಣಾ ಕಣ ಈ ಬಾರಿ ಭಾರೀ ಕಾವು ಪಡೆದಿದೆ. ಬಿಜೆಪಿ ಹಾಗೂ ಟಿಎಂಸಿ ನಡುವಿನ ಪೈಪೋಟಿಯಲ್ಲಿ ಗೆಲುವು ಯಾರ ಪಾಲಾಗುತ್ತದೆ ಎಂಬುವುದೇ ಸದ್ಯದ ಕುತೂಹಲ. ಹೀಗಿರುವಾಗಲೇ ಸದ್ಯ ಚುನಾವಣಾ ಪ್ರಚಾರದಲ್ಲಿ ಸಿಎಂ ಮಮತಾ ಬ್ಯಾನರ್ಜಿ, ಪಿಎಂ ಮೋದಿಗೆ ಮಾತಿನ ಗುದ್ದು ನೀಡಿದ್ದಾರೆ.

ಹೌದು ಈ ಬಾರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೂಗ್ಲಿಯ ದೇಬಾನಂದಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ದೀದೀ, ನಾನು ಒಂದು ಕಾಲಿನಲ್ಲಿ ಬಂಗಾಳವನ್ನು ಗೆಲ್ಲುತ್ತೇನೆ. ಭವಿಷ್ಯದಲ್ಲಿ ದೆಹಲಿಯಲ್ಲಿ ಎರಡು ಕಾಲುಗಳ ಮೇಲೆ ಗೆಲುವು ಪಡೆಯುತ್ತೇನೆ ಎಂದು ಸವಾಲೆಸೆದಿದ್ದಾರೆ. ಈ ಮೂಲಕ ದೀದಿ ಮುಂದಿನ ಲೋಕಸಭಾ ಚುನಾವಣೆ ದೆಹಲಿ ಗದ್ದುಗೆ ಬಗ್ಗೆ ಪ್ರಸ್ತಾಪಿಸಿ ನೇರವಾಗಿ ಮೋದಿಗೆ ಟಕ್ಕರ್ ನೀಡಿದ್ದಾರೆ. 

ಇನ್ನು ಇದೇ ವೇಳೆ ಕೋವಿಡ್ ವಿಚಾರ ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ ಸದ್ಯ ಕೋವಿಡ್ ಪರಿಸ್ಥಿತಿ ಇದೆ, ಇಂತಹ ಸಂದರ್ಭದಲ್ಲಿ ಎಂಟು ಹಂತದ ಮತದಾನ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ನನಗೆ ಚುನಾವಣೆಕ್ಕಿಂತ ರಾಜ್ಯದ ಜನರ ಆರೋಗ್ಯ ಮುಖ್ಯ ಎನ್ನುವ ಸಂದೇಶ ರವಾನಿಸಿ ಭಾವನಾತ್ಮಕವಾಗಿ ಜನರ ಮನಗೆಲ್ಲಲು ದೀದಿ ಯತ್ನಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ