Kalita Majhi: ₹2,500 ಸಂಬಳಕ್ಕೆ ಮುಸುರೆ ತಿಕ್ಕುವ ಕೆಲಸ ಮಾಡುತ್ತಿದ್ದ ಮಹಿಳೆ ಈಗ ಶಾಸಕಿ! ಬಿಜೆಪಿ ಗೆಲುವಿನ ರಹಸ್ಯ ಇರೋದೇ ಇಲ್ಲಿ!

Published : May 05, 2026, 05:45 PM IST
Kalita Majhi From Domestic Worker to MLA The Incredible Journey

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ, ಬಡತನವನ್ನು ಮೆಟ್ಟಿ ನಿಂತು ಆಸ್ಗ್ರಾಮ್ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕೇವಲ ₹2,500 ಸಂಬಳದಿಂದ ರಾಜಕೀಯದ ಉನ್ನತ ಸ್ಥಾನಕ್ಕೇರಿದ ಅವರ ಈ ಹೋರಾಟದ ಕಥೆ ಹಲವರಿಗೆ ಸ್ಫೂರ್ತಿದಾಯಕವಾಗಿದೆ.

ನವದೆಹಲಿ (ಮೇ.5) ಬಡತನದ ಸಂಕೋಲೆಗಳನ್ನು ಮೀರಿ, ಹಸಿದ ಹೊಟ್ಟೆ ಹೋರಾಟವನ್ನೇ ಮೆಟ್ಟಿಲಾಗಿ ಮಾಡಿಕೊಂಡ ಮಹಿಳೆಯೊಬ್ಬರು ಇಂದು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅವರೇ ಪಶ್ಚಿಮ ಬಂಗಾಳದ ಕಲಿತಾ ಮಾಝಿ(Kalita maji)

₹2,500 ಸಂಬಳಕ್ಕೆ ಮುಸುರೆ ತಿಕ್ಕುವ ಕೆಲಸದಿಂದ ವಿಧಾನಸಭೆಯವರೆಗೆ!

ಕೇವಲ 2,500 ರೂಪಾಯಿಗಳ ಮಾಸಿಕ ವೇತನಕ್ಕೆ ಮನೆಮನೆಗಳಿಗೆ ಹೋಗಿ ಪಾತ್ರೆ ತೊಳೆಯುವ, ಕಸ ಬಳಿಯುವ ಕೆಲಸ ಮಾಡುತ್ತಿದ್ದ ಕಡು ಬಡವಿ ಕಲಿತಾ ಮಾಝಿ, ಇಂದು ಪಶ್ಚಿಮ ಬಂಗಾಳದ ಆಸ್ಗ್ರಾಮ್ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಅದೂ 12,535 ಮತಗಳ ಭಾರಿ ಅಂತರದಿಂದ ಜಯಗಳಿಸುವ ಮೂಲಕ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿರುವುದು ಸಣ್ಣ ಸಾಧನೆಯಲ್ಲ.

ಶಿಕ್ಷಣ ಅರ್ಧಕ್ಕೇ ನಿಂತರೂ ಛಲ ಬಿಡದ ಮಹಿಳೆ!

ಬಾಲ್ಯದಲ್ಲೇ ಆರ್ಥಿಕ ಸಂಕಷ್ಟ ಎದುರಿಸಿದ ಕಲಿತಾ, ಓದನ್ನು ಅರ್ಧಕ್ಕೇ ಬಿಟ್ಟು ಕೆಲಸಕ್ಕೆ ಇಳಿಯಬೇಕಾಯಿತು. ಪತಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರೆ, ಕಲಿತಾ ಇತರರ ಮನೆಗಳಲ್ಲಿ ಪಾತ್ರೆ ತೊಳೆದು ಕುಟುಂಬವನ್ನು ಸಾಕಿ ಸಲಹುತ್ತಿದ್ದರು. 8ನೇ ತರಗತಿಯಲ್ಲಿ ಓದುತ್ತಿರುವ ಮಗ ಪಾರ್ಥನಿಗೆ ಒಳ್ಳೆಯ ಭವಿಷ್ಯ ನೀಡಬೇಕೆಂಬುದೇ ಈ ದಂಪತಿಯ ಏಕೈಕ ಕನಸಾಗಿತ್ತು.

ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತೆಯಾಗಿ ಹೋರಾಟ

ರಾಜಕೀಯ ಕಲಿತಾ ಅವರಿಗೆ ಹೊಸತಲ್ಲ. ಕಳೆದ ಹತ್ತು ವರ್ಷಗಳಿಂದ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತೆಯಾಗಿ ಹಗಲಿರುಳು ಶ್ರಮಿಸಿದ್ದರು. 2021ರ ಚುನಾವಣೆಯಲ್ಲಿ ಸೋಲು ಕಂಡರೂ, ಛಲ ಬಿಡದ ಅವರಿಗೆ 2026ರಲ್ಲಿ ಬಿಜೆಪಿ ಪಕ್ಷ ಮತ್ತೆ ಅವಕಾಶ ನೀಡಿತು. ನಾಯಕತ್ವದ ನಂಬಿಕೆಯನ್ನು ಅವರು ಈ ಬಾರಿ ಹುಸಿಗೊಳಿಸಲಿಲ್ಲ.

ಲಕ್ಷಾಧಿಪತಿ ಅಲ್ಲ ಈಕೆ, ಜನಸಾಮಾನ್ಯರ ಪ್ರತಿನಿಧಿ!

ಇಂದಿನ ಕಾಲದಲ್ಲಿ ಚುನಾವಣೆಗೆ ಕೋಟಿಗಟ್ಟಲೆ ಹಣ ಬೇಕೆನ್ನುವ ಮಾತಿಗೆ ಕಲಿತಾ ಅಪವಾದ. ಇವರ ಒಟ್ಟು ಆಸ್ತಿ ಕೇವಲ ₹1,61,216. ಬ್ಯಾಂಕ್ ಠೇವಣಿ ಮತ್ತು ಎಲ್‌ಐಸಿ ಪಾಲಿಸಿಗಳೇ ಇವರ ದೊಡ್ಡ ಸಂಪತ್ತು. ಸಾಮಾನ್ಯ ಜನರ ನೋವನ್ನೇ ಬಂಡವಾಳವಾಗಿಸಿಕೊಂಡು ಅವರು ಇಂದು ವಿಧಾನಸಭೆಯ ಮೆಟ್ಟಿಲು ಹತ್ತುತ್ತಿದ್ದಾರೆ.

ಕಲಿತಾ ಮಾಝಿ ಗೆಲುವು ಶ್ಲಾಘಿಸಿದ ಬಿಎಲ್ ಸಂತೋಷ್

ಕಲಿತಾ ಮಾಝಿಯವರ ಈ ಗೆಲುವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಶ್ಲಾಘಿಸಿದ್ದಾರೆ. 'ಪಕ್ಷವು ವ್ಯಕ್ತಿಗಳ ಹಿನ್ನೆಲೆಯನ್ನಲ್ಲ, ಬದಲಾಗಿ ಪರಿಶ್ರಮ ಮತ್ತು ಪ್ರತಿಭೆಯನ್ನು ಗುರುತಿಸುತ್ತದೆ' ಎಂದು ಅವರು ಅಭಿನಂದಿಸಿದ್ದಾರೆ. ಈ ಹಿಂದೆ ಚಂದನಾ ಬೌರಿ ಎಂಬ ದಿನಗೂಲಿ ಕಾರ್ಮಿಕ ಮಹಿಳೆಯನ್ನು ಶಾಸಕಿಯನ್ನಾಗಿ ಮಾಡಿದ್ದ ಬಂಗಾಳದ ಬಿಜೆಪಿ, ಈಗ ಕಲಿತಾ ಮಾಝಿ ಮೂಲಕ ಮತ್ತೊಬ್ಬ ನಾಯಕಿಯನ್ನ ಸೃಷ್ಟಿಸಿದೆ.

ಒಟ್ಟಿನಲ್ಲಿ, ಕೂಲಿ ಮಾಡುವ ಕೈಗಳು ಶಾಸನ ಸಭೆಯಲ್ಲಿ ಕುಳಿತು ಜನರ ಪರವಾಗಿ ಧ್ವನಿ ಎತ್ತಲಿವೆ ಎಂಬುದು ಪ್ರಜಾಪ್ರಭುತ್ವದ ಅತಿದೊಡ್ಡ ಗೆಲುವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೂರನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದ ಬಿಜೆಪಿ ವೋಟ್‌ಶೇರ್‌: ಕೇರಳದಲ್ಲಿ ಕಮಲ ಭವಿಷ್ಯದಲ್ಲಿ ಅರಳುವ ಸೂಚನೆಯೇ??
BJP Double Victory: ದೆಹಲಿಯಲ್ಲಿ ಕೇಜ್ರಿವಾಲರನ್ನ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನ ಅಧಿಕಾರದಿಂದ ಕೆಳಗಿಳಿಸಿದ್ದೇಗೆ ಬಿಜೆಪಿ?