
ಕೋಲ್ಕತಾ (ಡಿ.03) ಭಾರತದ ಹಲವು ಗ್ರಾಮಗಳಲ್ಲಿ ಬದುಕು ಸಾಗಿಸುವ ಜನರು ಕೆಲ ವಿಶೇಷ ವರದಾನಗಳನ್ನು ಪಡೆಯುತ್ತಾರೆ. ಈ ಪೈಕಿ ದೀರ್ಘಾಯುಷಿ, ಉತ್ತಮ ಆರೋಗ್ಯ, ಎತ್ತರ ಸೇರಿದಂತೆ ಹಲವು ವಿಶೇಷತೆಗಳ ಕುರಿತು ವರದಿಯಾಗುತ್ತದೆ. ಆದರೆ ಈ ಜಿಲ್ಲೆಯ ಕೆಲ ಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ ಒಬ್ಬರೂ ನಿಧನರಾಗಿಲ್ಲ, ಒಬ್ಬರೂ ಬೇರೆಡೆಗೆ ಸ್ಥಳಾಂತರಗೊಂಡಿಲ್ಲ, ಹೆಣ್ಣುಮಕ್ಕಳು ಕಳೆದ 20 ವರ್ಷದಿಂದ ಇಲ್ಲೇ ನೆಲೆಸಿದ್ದಾರೆ. ಇದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಈ ಅಚ್ಚರಿ ನಡೆದಿದೆ. ಇದೀಗ ಈ ಅಚ್ಚರಿ ಬೆಳೆಕಿಗೆ ಬಂದಿದೆ.
ಇದು ಹೇಗೆ ಸಾಧ್ಯ? ಕಳೆದ 20 ವರ್ಷದಿಂದ ಒಬ್ಬರು ನಿಧನರಾಗಿಲ್ಲ, ಸ್ಥಳಾಂತರಗೊಂಂಡಿಲ್ಲ ಎಂದರೆ ಹೇಗೆ ಎಂದು ನೀವು ಗೊಂದಲಕ್ಕೀಡಾಗಬೇಡಿ. ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಇದು ಸಾಮಾನ್ಯ. ಆದರೆ ಚುನಾವಣಾ ಆಯೋಗ ನಡೆಸುತ್ತಿರುವ SIR ಪರಿಷ್ಕರಣೆಯಲ್ಲಿ ಈ ಅಸಲಿ ರಹಸ್ಯ ಬಹಿರಂಗವಾಗಿದೆ. ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (SIR ) ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ. ಭಾರಿ ವಿರೋಧದ ಬಳಿಕವೂ SIR ನಡೆಯುತ್ತಿದೆ. ಈ ವೇಳೆ ಮತದಾರರ ಪಟ್ಟಿಯಲ್ಲಿ ಕಳೆದ 20 ವರ್ಷದಿಂದ ಎಲ್ಲರೂ ಬದುಕಿದ್ದಾರೆ, ಹೆಣ್ಣುಮಕ್ಕಳು ಮದುವೆಯಾದರೂ ಅವರ ಹೆಸರು ಇಲ್ಲೇ ಇದೆ. ಅನುಮಾನಗೊಂಡ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದೆ. ಈ ವರದಿ ಕೈಸೇರುತ್ತಿದ್ದಂತೆ ರಹಸ್ಯ ಬಹಿರಂಗವಾಗಿದೆ.
ಚುನಾವಣಾ ಆಯೋಗದ ನೋಟಿಸ್ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಈ ಕುರಿತ ವರದಿ ನೀಡಿದೆ. ವಿಶೇಷ ಅಂದರೆ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 2,208ರಷ್ಟಿದ್ದ ಬೂತ್ ಸಂಖ್ಯೆ ಇದೀಗ 480ಕ್ಕೆ ಇಳಿಕೆಯಾಗಿದೆ. ಕಳೆದ 20 ವರ್ಷದಿಂದ ಕೆಲ ಬೂತ್‌ಗಳಲ್ಲಿ ನಿಧನರಾದರೂ ಅವರ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಿರಲಿಲ್ಲ. ಸ್ಥಳಾಂತರಗೊಂಡರೂ ಅವರ ಹೆಸರು ಮತದಾರ ಪಟ್ಟಿಯಲ್ಲಿದೆ. ಹೀಗೆ ಸ್ಥಳಾಂತರಗೊಂಡವರು, ನಿಧನರಾದರವೂ ಕಳೆದ ಚುನಾವಣೆಗಳಲ್ಲಿ ಮತದಾನ ಮಾಡಿದ್ದಾರಾ ಅನ್ನೋ ಕುರಿತು ಪರಿಶೀಲನೆಗಳು ನಡೆಯುತ್ತಿದೆ.
ಈ ಕುರಿತು ಬಿಜೆಪಿಯ ನಾಯಕ, ಕೇಂದ್ರ ಸಚಿವ ಸುಕಾಂತ ಮಜುಂದಾರ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. 2,200 ಬೂತ್‌ಗಳಲ್ಲಿ ಚುನಾವಣಾ ಆಯೋಗ ನೀಡಿದ SIR ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅಚ್ಚರಿ ಅಂಶಗಳು ಬಯಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ವರದಿ ತರಿಸಿಕೊಂಡು ನೋಡಿದಾ ಮ್ಯಾಜಿಕ್ ನಡೆದಿದೆ. 2,200ರಷ್ಟಿದ್ದ ಬೂತ್ ಇದೀಗ 480ಕ್ಕೆ ಇಳಿಕೆಯಾಗಿದೆ ಎಂದು ಸುಕಾಂತ ಮುಜುಂದಾರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಹಲವು ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದೆ. ಪ್ರಮುಖವಾಗಿ ನಿಧನರಾಗಿರುವವರ ವಿವರ, ಸ್ಥಳಾಂತರ, ನಾಪತ್ತೆಯಾದವರ ವಿವರ ನೀಡುವಂತೆ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ