ಪತ್ನಿಯಷ್ಟೇ ಪತಿ ಕೂಡಾ ಮನೆಕೆಲಸ ಮಾಡಬೇಕು : ಸುಪ್ರೀಂ

Kannadaprabha News   | Kannada Prabha
Published : Mar 22, 2026, 05:35 AM IST
supreme court

ಸಾರಾಂಶ

‘ಪತಿಯಾದವನು ಮನೆಯಲ್ಲಿ ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು ಮೊದಲಾದ ಕೆಲಸಗಳಲ್ಲಿ ಹೆಂಡತಿಯಷ್ಟೇ ಸಮಾನವಾಗಿ ತೊಡಗಿಕೊಳ್ಳಬೇಕು. ಆಕೆಂದರೆ ಆತ ಮನೆ ಕೆಲಸದಾಕೆಯನ್ನು ಮದುವೆಯಾಗಿಲ್ಲ, ಜೀವನ ಸಂಗಾತಿಯನ್ನು ಮದುವೆಯಾಗಿದ್ದಾನೆ’ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ನವದೆಹಲಿ: ‘ಪತಿಯಾದವನು ಮನೆಯಲ್ಲಿ ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು ಮೊದಲಾದ ಕೆಲಸಗಳಲ್ಲಿ ಹೆಂಡತಿಯಷ್ಟೇ ಸಮಾನವಾಗಿ ತೊಡಗಿಕೊಳ್ಳಬೇಕು. ಆಕೆಂದರೆ ಆತ ಮನೆ ಕೆಲಸದಾಕೆಯನ್ನು ಮದುವೆಯಾಗಿಲ್ಲ, ಜೀವನ ಸಂಗಾತಿಯನ್ನು ಮದುವೆಯಾಗಿದ್ದಾನೆ’ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದ

ಪತ್ನಿ ಸರಿಯಾಗಿ ಆಹಾರ ತಯಾರಿಸುತ್ತಿಲ್ಲ ಮತ್ತು ಪತಿಯ ಮೇಲೆ ಕ್ರೌರ್ಯ ತೋರುತ್ತಿದ್ದಾಳೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ವಿಚಾರಣಾ ಕೋರ್ಟ್‌ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ ಕರ್ನಾಟಕ ಹೈಕೋರ್ಟ್‌ ಈ ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದ.

ಎಲ್ಲ ಕೆಲಸಗಳಲ್ಲೂ ಪತಿ ಸಮಾನವಾಗಿ ಪಾಲ್ಗೊಳ್ಳಬೇಕು

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್‌ ನಾಥ್‌ ಹಾಗೂ ನ್ಯಾ. ಸಂದೀಪ್‌ ಮೆಹ್ತಾ ಅವರಿದ್ದ ಪೀಠ, ‘ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು.. ಹೀಗೆ ಎಲ್ಲ ಕೆಲಸಗಳಲ್ಲೂ ಪತಿ ಸಮಾನವಾಗಿ ಪಾಲ್ಗೊಳ್ಳಬೇಕು. ಇಂದಿನ ಕಾಲ ಬೇರೆ. ಗಂಡನಾದವನು ಮನೆಗೆಲಸದವಳನ್ನು ಮದುವೆಯಾಗಿರುವುದಿಲ್ಲ, ಬದಲಾಗಿ ಜೀವನ ಸಂಗಾತಿಯನ್ನು ಮದುವೆಯಾಗಿರುತ್ತಾನೆ’ ಎಂದು ತಿಳಿಹೇಳಿತು.

ಜೊತೆಗೆ, ಇಬ್ಬರನ್ನೂ ಸಂಧಾನಕ್ಕಾಗಿ ಹಾಜರಾಗುವಂತೆ ಸೂಚಿಸಿ, ಏ.27ಕ್ಕೆ ವಿಚಾರಣೆಯನ್ನು ಮುಂದೂಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಧ್ಯಪ್ರಾಚ್ಯದ ಮೂಲ ಸೌಕರ್ಯ ಹಾನಿಗೆ ಪ್ರಧಾನಿ ಮೋದಿ ಆಕ್ಷೇಪ
ಹೋಟೆಲ್‌ಗಳಿಗೆ ನಾಳೆಯಿಂದ ಸಿಗುತ್ತೆ ಇನ್ನಷ್ಟು ಎಲ್‌ಪಿಜಿ!