ಕೆಂಪುಕೋಟೆಯಲ್ಲಿ ಸಿಖ್ ಧ್ವಜಾರೋಹಣ ಮಾಡಿದ ದೀಪ್ ಸಿದು ಮಹತ್ವದ ಹೇಳಿಕೆ!

Published : Jan 27, 2021, 12:36 PM ISTUpdated : Jan 27, 2021, 05:12 PM IST
ಕೆಂಪುಕೋಟೆಯಲ್ಲಿ ಸಿಖ್ ಧ್ವಜಾರೋಹಣ ಮಾಡಿದ ದೀಪ್ ಸಿದು ಮಹತ್ವದ ಹೇಳಿಕೆ!

ಸಾರಾಂಶ

ಕೆಂಪುಕೋಟೆಯಲ್ಲಿ ಸಿಖ್ ಧ್ವಜಾರೋಹಣ ಮಾಡಿದ ದೀಪ್ ಸಿದು ಮಹತ್ವದ ಹೇಳಿಕೆ!| ಸಿಖ್ ಧ್ವಜಾರೋಹಣ ಮಾಡಿದ ಆರೋಪ ಸದ್ಯ ದೀಪ್ ಸಿದು ಯಾರು?| ಬಿಜೆಪಿ ಬೆಂಬಲಿಗನೆಂಬ ಆರೋಪದ ಬೆನ್ನಲ್ಲೇ ಮಹತ್ವದ ಹೇಳಿಕೆ

ನವದೆಹಲಿ(ಜ.27): ಗಣರಾಜ್ಯೋತ್ಸವದಂದು ಕೆಂಪುಕೋಟೆ ಮೇಲಿನ ತ್ರಿವರ್ಣ ಧ್ವಜದ ಬಳಿ ಸಿಖ್ ಧ್ವಜಾರೋಹಣ ಮಾಡಿದ ಆರೋಪ ಸದ್ಯ ದೀಪ್ ಸಿದು ಎಂಬಾತನ ಮೇಲಿದೆ. ಈ ಆರೋಪದ ಬೆನ್ನಲ್ಲೇ ಖುದ್ದು ಸಿದು ಫೇಸ್‌ಬುಕ್ ಮೂಲಕ ಈ ಧ್ವಜಾರೋಹಣ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ತಾನು ರಾಷ್ಟ್ರ ಧ್ವಜವನ್ನು ಕಿತ್ತೆಸೆದಿಲ್ಲ ಎಂದಿದ್ದಾರೆ. ಆದರೆ ಈ ವಿವಾದ ಇಲ್ಲಿಗೇ ಮುಗಿಯುವುದಿಲ್ಲ. ದೀಪ್ ಸಿದು ಬಿಜೆಪಿ ಕಾರ್ಯಕರ್ತನೆಂಬ ಆರೋಪವೂ ಕೇಳಿ ಬಂದಿದೆ. ಈ ದಾಳಿ ಬಳಿಕ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಸಿದು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

"

ಬಿಜೆಪಿ ಬೆಂಬಲಿಗನಾ ದೀಪ್?

ಈ ಪ್ರಶ್ನೆಯನ್ನು ಖುದ್ದು ದೀಪ್ ಬಳಿ ಕೇಳಿದಾಗ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಬಿಜೆಪಿ ಮಾತ್ರವಲ್ಲ ತಾನು ಯಾವುದೇ ರಾಜಕೀಯ ಪಕ್ಷದ ಬೆಂಲಿಗನಲ್ಲ ಎಂದಿದ್ದಾರೆ. ಹೀಗಿರುವಾಗಲೇ ಬಿಜೆಪಿ ಸಂಸದ ಸನ್ನಿ ಡಿಯೋಲ್‌ ಜೊತೆಗಿದ್ದ ಅವರ ಫೋಟೋಗಳ ಬಗ್ಗೆ ಸವಾಲೆಸೆಯಲಾಗಿದೆ. ಇದಕ್ಕೂ ಉತ್ತರಿಸಿರುವ ದೀಪ್ ಹೌದು ಇದು ಚುನಾವಣೆಗೂ ಮೊದಲು ತೆಗೆದ ಫೋಟೋಗಳಾಗಿವೆ. ಅಂದು ನಾನು ಅವರನ್ನು ಭೇಟಿಯಾಗಲು ತೆರಳಿದ್ದೆ. ಆದರೆ ನಾನು ಬಿಜೆಪಿ ಬೆಂಬಲಿಗನಲ್ಲ ಎಂದಿದ್ದಾರೆ.

"

ಸನ್ನಿ ಡಿಯೋಲ್ ಸ್ಪಷ್ಟನೆ:

ಅತ್ತ ಬಿಜೆಪಿ ಸಂಸದ ಸನ್ನಿ ಡಿಯೋಲ್ ಕೂಡಾ ವೈರಲ್ ಆಗುತ್ತಿರುವ ಫೋಟೋಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇಂದು ಕೆಂಪು ಕೋಟೆಯಲ್ಲಿ ನಡೆದ ಘಟನೆ ನೋಡಿ ಮನಸ್ಸು ಬಹಳ ನೋವಾಗಿದೆ. ಈ ಹಿಂದೆ ಡಿಸೆಂಬರ್‌ 6 ರಂದು ನನಗಾಗಲಿ, ನನ್ನ ಕುಟುಂಬಕ್ಕಾಗಲಿ ದೀಪ್ ಸಿದು ಜೊತೆ ಯಾವುದೇ ಒಡನಾಟನ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದೇನೆ ಎಂದಿದ್ದಾರೆ. 

ಯಾರು ಈ ದೀಪ್ ಸಿದು?

ದೀಪ್ ಸಿದು ಜನಿಸಿದ್ದು ಪಂಜಾಬ್‌ನ ಮುಖ್ತಸರ್‌ನಲ್ಲಿ. ಅವರೊಬ್ಬ ಮಾಡೆಲ್ ಹಾಗೂ ನಟರಾಗಿದ್ದಾರೆ. ಕಿಂಗ್‌ಫಿಷರ್ ಮಾಡೆಲಿಂಗ್ ಸೇರಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. 'ರಮ್ತಾ ಜೋಗಿ' ಸಿನಿಮಾ ಮೂಲಕ ಅವರು ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌