Viral Video: ಕಾಶ್ಮೀರಿ ಹುಡುಗಿಯೊಬ್ಬಳು ಹಿಜಾಬ್ ಧರಿಸಿ ಬುಲೆಟ್ ರೈಡ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಜನರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ (ಆ.4): ಕಾಶ್ಮೀರದಲ್ಲಿ ಸ್ವಾತಂತ್ರ್ಯ ಇಲ್ಲ. ಕೇಂದ್ರ ಸರ್ಕಾರ ಆರ್ಟಿಕಲ್ 370 ತೆಗೆದುಹಾಕುವ ಮೂಲಕ ತಪ್ಪು ಮಾಡಿದೆ ಎನ್ನುವವರಿಗೆಲ್ಲಾ ಕೆನ್ನೆಗೆ ಹೊಡೆದಂತಿರುವ ವಿಡಿಯೋವೊಂದು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ವೈರಲ್ ಆಗಿದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದಿದ್ದು ಸಂವಿಧಾನ ಬಾಹಿರ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಾಡುತ್ತಿದ್ದರೆ, ಇನ್ನೊಂದೆಡೆ ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ವಿಡಿಯೋಗಳು ವೈರಲ್ ಆಗುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾಶ್ಮೀರದ ಆರ್ಟಿಕಲ್ 370 ವಿಧಿ ಚರ್ಚೆ ಆಗುತ್ತಿರುವ ನಡುವೆ, ಕಾಶ್ಮೀರದಲ್ಲಿ ಯುವತಿಯೊಬ್ಬಳು ರಸ್ತೆಯಲ್ಲಿ ನಿರ್ಭಯವಾಗಿ ಬುಲೆಟ್ ಓಡಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಆಕೆ, ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಥ್ಯಾಂಕ್ಸ್ ಎಂದಿದ್ದಾರೆ. ಆಕೆಯ ಈ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲಿಯೇ ಸಮಾಜದ ವಿವಿಧ ವರ್ಗಗಳಿಂದ ಸಾಕಷ್ಟು ಪ್ರಕ್ರಿಯೆಗಳೂ ಬಂದಿದೆ.
ನುಸ್ರತ್ ಫಾತಿಮಾ ಎನ್ನುವ ಯುವತಿ ತನ್ನ ಟ್ವಿಟರ್ ಹ್ಯಾಂಡಲ್‌ನಿಂದ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆಕೆ ತನ್ನ ಟ್ವಿಟರ್ ಬಯೋಡೇಟಾದಲ್ಲಿ ಬರೆದುಕೊಂಡಿರುವ ಪ್ರಕಾರ, ಕಾಶ್ಮೀರದ ಬಾರಾಮುಲ್ಲಾ ಆಕೆಯ ಮೂಲ. ಆಕೆ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ, ಹಿಜಾಬ್ ಧರಿಸಿಕೊಂಡು ಅವರು ಬುಲೆಟ್ ಓಡಿಸುತ್ತಿದ್ದಾರೆ. ಸೀ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ವೇಳೆ ಕೇಂದ್ರ ಸರ್ಕಾರವನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಹಾಗಾದರೆ ಆಕೆ ಟ್ವೀಟ್ ಮಾಡಿದ್ದೇನು..
ಟ್ವಿಟರ್‌ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಫಾತಿಮಾ ವೇಗವಾಗಿ ರಸ್ತೆಯಲ್ಲಿ ಬುಲೆಟ್ ಓಡಿಸಿಕೊಂಡು ಹೋಗುತ್ತಿದ್ದಾರೆ. ಆಕೆ ಹೆಲ್ಮೆಟ್ ಅನ್ನು ಧರಿಸಿಲ್ಲ. ಬುಲೆಟ್ ರೈಡ್ ಮಾಡುವ ವೇಳೆ ತನ್ನ ಎರಡೂ ಕೈಗಳನ್ನು ಹ್ಯಾಂಡಲ್ ಮೇಲಿಂತ ತೆಗೆದಿದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ಹಾಡು ಕೂಡ ಪ್ಲೇ ಆಗಿದೆ. ಇದನ್ನು ಶೇರ್ ಮಾಡಿಕೊಂಡಿರುವ ಆಕೆ, ಈಗ ನಾನು ಹೆಮ್ಮೆಯಿಂದ ನನ್ನ ಕಾಶ್ಮೀರ ಬದಲಾಗಿದೆ ಎಂದು ಹೇಳಿಕೊಳ್ಳಬಲ್ಲೆ. ಕೇವಲ ಹುಡುಗರಿಗಾಗಿ ಮಾತ್ರವಲ್ಲ, ಹುಡುಗಿಯರಿಗೂ ಕಾಶ್ಮೀರ ಬದಲಾಗಿದೆ. ಕಾಶ್ಮೀರದಲ್ಲಿದ್ದ 35ಎ ಹಾಗೂ ಆರ್ಟಿಕಲ್ 370 ವಿಧಿಯನ್ನು ತೆಗೆದ ಕೇಂದ್ರ ಸರ್ಕಾರಕ್ಕೆ ಬಹಳ ಥ್ಯಾಕ್ಸ್ ಎಂದು ಬರೆದಿದ್ದಾರೆ.
Today I proudly wanna to say that my has changed a lot not only for the boys but also for Us. It was not possible before abrogation of 370 & 35A. Thank you GOI. pic.twitter.com/5zU9vgUAoL
— Nusrat Fatima (@knusrata)ಸಹಜ ಸುಂದರಿ ಸಾಯಿ ಪಲ್ಲವಿ ಸನ್ಯಾಸಿ ಆಗ್ತಾರಾ? ಅಧ್ಯಾತ್ಮದ ಹಾದಿ ಹಿಡಿದ ಪ್ರೇಮಂ ನಟಿ!
ಫಾತಿಮಾ ಶೇರ್ ಮಾಡಿರುವ ವಿಡಿಯೋದಲ್ಲಿ ಕೆಲವರು ಟ್ರಾಫಿಕ್ ಪೊಲೀಸರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ಹುಡುಗಿಗೆ ಇನ್ನೂ ಬೈಕ್ ಓಡಿಸಲು ಬಿಡಲಾಗಿದೆಯೇ? ಎಲ್ಲವೂ ಸರಿಯಾಗಿದೆ ಆದರೆ ಹೆಲ್ಮೆಟ್ ಧರಿಸುವುದು ಬಹಳ ಮುಖ್ಯ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಟ್ವಿಟರ್ ಬಳಕೆದಾರ, ನಿಮ್ಮನ್ನು ಈ ರೀತಿಯಲ್ಲಿ ತುಂಬಾ ಸಂತೋಷವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ, ಆದರೆ ನಿಮ್ಮ ಸಂತೋಷವನ್ನು ವ್ಯಕ್ತಪಡಿಸಲು ನೀವು ಅಳವಡಿಸಿಕೊಂಡ ವಿಧಾನವು ನಿಮ್ಮ ಜೀವನವನ್ನು ಅಪಾಯಕ್ಕೆ ತಳ್ಳಬಹುದು ಎಂದಿದ್ದಾರೆ.
ಆರ್ಟಿಕಲ್ 370 ರದ್ದು ವಿರೋಧಿಸಿ ಆ.5ರಂದು ಜಾಗೃತವಾಗಲಿದೆ ಪಾಕಿಸ್ತಾನದ ಟೂಲ್‌ಕಿಟ್ ಗ್ಯಾಂಗ್!