Jyotiraditya Scindia ಹಾಗೂ ರೊಮೇನಿಯಾ ಮೇಯರ್ ನಡುವೆ ವಾಕ್ಸಮರಕ್ಕೆ ಇದು ಕಾರಣ!

By Suvarna NewsFirst Published Mar 4, 2022, 12:34 AM IST
Highlights

ರೊಮೇನಿಯಾ ಮೇಯರ್ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಮಾತಿನ ಚಕಮಕಿ

ಆಪರೇಷನ್ ಗಂಗಾ ಕಾರ್ಯಾಚರಣೆಯ ಸಲುವಾಗಿ ರೊಮೇನಿಯಾದಲ್ಲಿರುವ ಸಿಂಧಿಯಾ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ

ಬೆಂಗಳೂರು (ಮಾ.3): ಉಕ್ರೇನ್ (Ukraine) ದೇಶದ ವಿವಿಧ ಭಾಗಗಳಲ್ಲಿ ರಷ್ಯಾ ಸೇನೆಯ (Russia Army) ಆಕ್ರಮಣ ಇನ್ನಷ್ಟು ತೀವ್ರವಾಗಿರುವ ನಡುವೆ, ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮತ್ತಷ್ಟು ವೇಗ ನೀಡಿದೆ. ಅದರಲ್ಲೂ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪ ರಷ್ಯಾ ಸೇನೆಯ ದಾಳಿಯಿಂದಾಗಿ ದುರ್ಮರಣಕ್ಕೆ ಈಡಾದ ಬೆನ್ನಲ್ಲಿಯೇ ಉಕ್ರೇನ್ ನಲ್ಲಿರುವ ಭಾರತೀಯರಿಗೆ ಭಯ ಕಾಡತೊಡಗಿದೆ. ಇದರ ನಡುವೆ ರೊಮೇನಿಯಾದಲ್ಲಿ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿರುವ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಹಾಗೂ ಅಲ್ಲಿನ ಮೇಯರ್ (Mayor of Romania) ನಡುವಿನ ವಾಕ್ಸಮರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ರೊಮೇನಿಯನ್ ನಗರದ ಮೇಯರ್ ಅವರು ಪರಿಹಾರ ಶಿಬಿರದಲ್ಲಿ ನಿಂದಿಸಿದ ವೀಡಿಯೊವನ್ನು ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಸಾಮಾಜಿಕ ಜಾಲತಾಣದಲ್ಲಿರುವ ಕೆಲ ವ್ಯಕ್ತಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಈ ವಿಡಿಯೋದಲ್ಲಿ ಸಿಂಧಿಯಾ ಜೊತೆ ಮಾತನಾಡುತ್ತಿರುವ ರೊಮೇನಿಯಾದ ಮೇಯರ್ ಒಬ್ಬ, "ಇಲ್ಲಿರುವ ವಿದ್ಯಾರ್ಥಿಗಳಿಗೆ ಅವರು ಯಾವಾಗ ತವರಿಗೆ ತೆರಳುತ್ತಾರೆ ಎನ್ನುವುದನ್ನು ವಿವರಿಸಿ. ನಾನು ಇವರಿಗೆ ವಸತಿ ನೀಡಿದ್ದೇನೆ. ಅವರಿಗೆ ನಾನು ಸಹಾಯ ಮಾಡಿ ಆಹಾರವನ್ನೂ ನೀಡಿದ್ದೇನೆ' ಎಂದು ಹೇಳುತ್ತಿದ್ದಾರೆ. ಇದರ ಬೆನ್ನಲ್ಲಿಯೇ ಮಾತನಾಡುವ ಸಿಂಧಿಯಾ, ನಾನೇನು ಮಾತನಾಡಬೇಕು ಎನ್ನುವುದನ್ನು ನಾನು ನಿರ್ಧರಿಸುತ್ತೇನೆ ಎಂದು ರೊಮೆನಿಯಾದ ಮೇಯರ್ ಗೆ ಹೇಳಿದ್ದಾರೆ. ರೊಮೇನಿಯನ್ ಮೇಯರ್ ಅವರ ಹೇಳಿಕೆಗೆ ಕೆಲವು ಭಾರತೀಯ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

Jumlas can work in India, but not on foreign soil. See how Romanian Mayor schooled the Civil Aviation Minister Jyotiraditya ScIndia at a relief camp.

- Explain to them when they will leave home. I provided them shelter & food, not you!

.. students clap! 👏 pic.twitter.com/Shu4wUFtpA

— Salman Nizami (@SalmanNizami_)


ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಾಂಗ್ರೆಸ್ ನಾಯಕರು ಕೂಡ ಇದನ್ನು ಶೇರ್ ಮಾಡುತ್ತಿದ್ದಾರೆ. ಸಿಂಧಿಯಾ ತಮ್ಮ ಮಾತಿನ ಕೊನೆಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ ರೊಮೇನಿಯನ್ ಸರ್ಕಾರಕ್ಕೂ ತಮ್ಮ ಧನ್ಯವಾದ ಸಲ್ಲಿಸಿದ್ದಾರೆ.

Ukrainian Striker ಬದಲಿ ಆಟಗಾರನಾಗಿ ಬಂದ ಉಕ್ರೇನ್ ಸ್ಟೈಕರ್‌ಗೆ ಎದ್ದು ನಿಂತು ಗೌರವಿಸಿದ ಫ್ಯಾನ್ಸ್, ಭಾವುಕರಾದ ರೋಮನ್!
ಆಪರೇಷನ್ ಗಂಗಾ (Operation Ganga) ಕಾರ್ಯಾಚರಣೆಯ ಭಾಗವಾಗಿ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾದ (Romania) ಬುಚಾರೆಸ್ಟ್ ನಲ್ಲಿದ್ದರೆ (bucharest), ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹಂಗೆರಿಯ ಬುಡಾಪೆಸ್ಟ್ ನಲ್ಲಿದ್ದಾರೆ (Budapest). ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiran Rijiju) ಸ್ಲೋವಾಕಿಯಾದಲ್ಲಿ (Slovakia) ಕಾರ್ಯಾಚರಣೆಯಲ್ಲಿ ಭಾಗವಾಗಿದ್ದು, ವಿಕೆ ಸಿಂಗ್ (VK Singh) ಪೋಲೆಂಡ್ ನಲ್ಲಿನ (Poland) ಕಾರ್ಯಾಚರಣೆಯ ಭಾಗವಾಗಿದ್ದಾರೆ.

Viral Video: ಹಾರ ಹಾಕುವಾಗಲೇ ವಧುವಿನ ಕಪಾಳಕ್ಕೆ ಬಾರಿಸಿದ ವರ!
ಬುಚಾರೆಸ್ಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (bucharest International AirPort) ತೆರಳಿದ ಬಳಿಕ ಮಾತನಾಡಿದ ಜ್ಯೋತಿರಾದಿತ್ಯ ಸಿಂಧಿಯಾ, "ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಪರವಾಗಿ ನಾನು ಇಲ್ಲಿ ಬಂದಿದ್ದೇನೆ. ನಿಮ್ಮಲ್ಲರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸುವ ಜವಾಬ್ದಾರಿ ನನ್ನದು" ಎಂದು ಹೇಳಿದ್ದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದ ಸಿಂಧಿಯಾ, ಒಬ್ಬ ವಿದ್ಯಾರ್ಥಿ ತನ್ನ ರಾಜ್ಯ ಮಹಾರಾಷ್ಟ್ರ (Maharashtra)ಎಂದಾಗ, ಮರಾಠಿಯಲ್ಲೇ (Marati) ಮಾತನಾಡು ಎಂದಿದ್ದಾರೆ. ಬಳಿಕ ಮರಾಠಿಯಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ವಿದ್ಯಾರ್ಥಿ ಜೊತೆ ಮಾತನಾಡಿದ್ದಾರೆ. ಇನ್ನು ಮತ್ತೊರ್ವ ವಿದ್ಯಾರ್ಥಿ ಕೇರಳದ (Kerala) ಕಣ್ಣೂರು ಜಿಲ್ಲೆ ಎಂದಾಗ, ಕಣ್ಣೂರಿನ ಕುರಿತು ಹಲವು ವಿಚಾರವನ್ನು ಸಿಂಧಿಯಾ ಹೇಳಿದ್ದಾರೆ. ಕಣ್ಣೂರಿನಲ್ಲಿ ಹೆಚ್ಚು ಕಾಳು ಮೆಣಸು ಬೆಳೆಯುತ್ತಾರೆ. ನಾನು ವಾಣಿಜ್ಯ ಸಚಿವನಾಗಿದ್ದ ವೇಳೆ ಕಣ್ಣೂರಿಗೆ ಬೇಟಿ ನೀಡಿದ್ದೇನೆ ಎಂದು ವಿದ್ಯಾರ್ಥಿಗೆ ಹೇಳಿದ್ದಾರೆ.

Latest Videos

click me!