ವಕ್ಫ್ ಆಸ್ತಿ ಕಬಳಿಕೆ: ದೇಶದಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ!

By Web DeskFirst Published Nov 22, 2019, 4:55 PM IST
Highlights

ವಕ್ಫ್ ಆಸ್ತಿ ಕಬಳಿಕೆ: ದೇಶದಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ| ಮೊದಲನೇ ಸ್ಥಾನದಲ್ಲಿ ಪಂಜಾಬ್‌| ಐದನೇ ಸ್ಥಾನದಲ್ಲಿ ಕರ್ನಾಟಕ| ಸಂಸತ್‌ಗೆ ಸಚಿವ ನಖ್ವಿ ಮಾಹಿತಿ

ನವದೆಹಲಿ[ನ.22]: ವಕ್ಫ್ ಆಸ್ತಿ ಕಬಳಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಐದನೇ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರ ಹಾಗೂ ವಕ್ಫ್ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಗುರುವಾರ ಸದನಕ್ಕೆ ಮಾಹಿತಿ ನೀಡಿದ್ದಾರೆ.

ಬಿಜೆಪಿ ಸದಸ್ಯ ಅಜಯ್‌ ನಿಶಾದ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ದೇಶಾದ್ಯಂತ ಸುಮಾರು 17000 ವಕ್ಫ್ ಆಸ್ತಿಗಳನ್ನು ಕಬಳಿಸಲಾಗಿದ್ದು, 5610 ಆಸ್ತಿಗಳನ್ನು ಕಬಳಿಸುವ ಮೂಲಕ ಪಂಜಾಬ್‌ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಅನಂತರ ಸ್ಥಾನದಲ್ಲಿ ಮಧ್ಯಪ್ರದೇಶ (3240), ಪಶ್ಚಿಮ ಬಂಗಾಳ (3082), ತಮಿಳುನಾಡು (1335) ಇದ್ದು, 862 ವಕ್ಫ್ ಆಸ್ತಿಗಳನ್ನು ಅತಿಕ್ರಮಣ ಮಾಡುವ ಮೂಲಕ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ಒಟ್ಟು 373 ವಕ್ಫ್ ಆಸ್ತಿಗಳನ್ನು ಅತಿಕ್ರಮಣ ಮಾಡಲಾಗಿದೆ.

ಸಿಖ್ಖರ ಬಹುಕಾಲದ ಬೇಡಿಕೆ ಸಾಕಾರ; ಇಂಡೋ-ಪಾಕ್‌ನ ಸಂಬಂಧ ಸೇತುವಾಗುತ್ತಾ ಕಾರಿಡಾರ್‌?

ವಕ್ಫ್ ಆಸ್ತಿಗಳ ರಕ್ಷಣೆಗೆ ಆನ್ಲೈನ್‌ ‘ವಕ್ಫ್ ಆಸ್ತಿ ನಿರ್ವಹಣಾ ವ್ಯವಸ್ಥೆ (ವಂಸಿ)’ ರೂಪಿಸಲಾಗಿದ್ದು, ಈ ವರೆಗೆ 5,94,139 ವಕ್ಫ್ ಸ್ಥಿರಾಸ್ತಿಗಳ ನೋಂದಣಿಯಾಗಿದೆ. ವಕ್ಫ್ ಆಸ್ತಿಗಳ ದಾಖಲೆಗಳ ಕಂಪ್ಯೂಟರೀಕರಣಕ್ಕೆ ಜುಲೈನಿಂದ ಅಕ್ಟೋಬರ್‌ ವರೆಗೆ ಆಂದೋಲನ ನಡೆಸಲಾಗಿದ್ದು, ಇದರಿಂದ ಶೇ. 98.99 ಆಸ್ತಿಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

click me!