ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2025 ರ ಕರಡು ಪ್ರತಿಯನ್ನು ಹರಿದು ಓವೈಸಿ ಪ್ರತಿಭಟಿಸಿದ್ದಾರೆ. ಈ ಮಸೂದೆಯು ಮುಸ್ಲಿಮರ ವಿರುದ್ಧವಾಗಿದ್ದು, ಅವರ ನಂಬಿಕೆಯ ಮೇಲೆ ದಾಳಿ ಎಂದು ಅವರು ಟೀಕಿಸಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆ 2025: ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಬುಧವಾರ ರಾತ್ರಿ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2025 ರ ಕರಡಿನ ಪ್ರತಿಯನ್ನು ಹರಿದು ಪ್ರತಿಭಟಿಸಿದರು ಘಟನೆ ನಡೆದಿದೆ.
ಸದನದಲ್ಲಿ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಓವೈಸಿ, ಇದು 'ಭಾರತದ ನಂಬಿಕೆಯ ಮೇಲಿನ ದಾಳಿ'ಯಾಗಿದ್ದು, ಮುಸ್ಲಿಮರನ್ನು ಅವಮಾನಿಸಲು ಇದನ್ನು ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಈ ಮಸೂದೆಯನ್ನು ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಗುಂಪಿನ ವಿರುದ್ಧ ಯುದ್ಧ ಘೋಷಿಸಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Waqf Amendment Bill passed: ಮೋದಿ ಸರ್ಕಾರದ ಬ್ರಹ್ಮಾಸ್ತ್ರ, ಒಂದೇ ಏಟಿಗೆ ಹಲವು ಗುರಿಗಳು ಫಿನಿಶ್!
ಈ ಬಗ್ಗೆ ದೆಹಲಿ ಎಐಎಂಐಎಂ ಅಧ್ಯಕ್ಷ ಶೋಯೆಬ್ ಜಮೈ ಅವರು ಓವೈಸಿಯ ಭಾಷಣದ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ತಾಣ 'X' ನಲ್ಲಿ ಹಂಚಿಕೊಂಡು ಬೆಂಬಲ ವ್ಯಕ್ತಪಡಿಸಿದ್ದು, 'ಹೇಡಿಗಳ ಗುಂಪಿಗೆ ಒಬ್ಬ ವ್ಯಕ್ತಿ ಸಾಕು' ಎಂದು ಬರೆದ ಅವರು, ಓವೈಸಿ ಸಂಸತ್ತಿನಲ್ಲಿ ಈ ಹಿಂದೆ ಸಿಎಎ ಕಾನೂನು ಮಸೂದೆಯನ್ನು ಸಹ ಹರಿದಿದ್ದರು ಎಂದು ನೆನಪಿಸಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಹಲವು ರೀತಿ ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ.
ಜಂಟಿ ಸಂಸದೀಯ ಸಮಿತಿಯ ಪಾತ್ರ
ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಮೊದಲು ಜಂಟಿ ಸಂಸದೀಯ ಸಮಿತಿಗೆ (JPC) ಉಲ್ಲೇಖಿಸಲಾಗಿತ್ತು. ವಿರೋಧ ಪಕ್ಷದ ಸಂಸದರ ಪ್ರತಿಭಟನೆಯ ನಂತರ, ಸಮಿತಿಯು ಐದು ತಿಂಗಳಲ್ಲಿ 38 ಸಭೆಗಳನ್ನು ನಡೆಸಿ ತನ್ನ ಸಲಹೆಗಳನ್ನು ಸಲ್ಲಿಸಿತು. ಈ ಸಲಹೆಗಳನ್ನು ಒಳಗೊಂಡಂತೆ ವಕ್ಫ್ (ತಿದ್ದುಪಡಿ) ಮಸೂದೆ, 2025 ರೂಪ ದಲ್ಲಿ ಲೋಕಸಭೆಯಲ್ಲಿ ಮಂಡಿಸಲಾಯಿತು.
ಲೋಕಸಭೆಯಲ್ಲಿ ಮತದಾನ ಬೆಂಬಲ ಮತ್ತು ವಿರೋಧ
ಎನ್‌ಡಿಎ ಒಕ್ಕೂಟದ ಬಿಜೆಪಿ ಮಿತ್ರಪಕ್ಷಗಳಾದ ಜೆಡಿ(ಯು), ತೆಲುಗು ದೇಶಂ ಪಕ್ಷ (ಟಿಡಿಪಿ), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಜನಸೇನಾ ಮತ್ತು ಜನತಾ ದಳ (ಜಾತ್ಯತೀತ) ಮಸೂದೆಗೆ ಬೆಂಬಲ ನೀಡಿದವು. ಜಾರ್ಖಂಡ್‌ನಲ್ಲಿ ಬಿಜೆಪಿಯ ಮಿತ್ರಪಕ್ಷ ಎಜೆಎಸ್‌ಯು ಕೂಡ ಮಸೂದೆಯನ್ನು ಸಮರ್ಥಿಸಿತು. ಆದರೆ, ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ ಸೇರಿದಂತೆ ಇತರ ವಿರೋಧ ಪಕ್ಷಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದವು. ಇದು ಸಂವಿಧಾನಬಾಹಿರವಾಗಿದ್ದು, ಮುಸ್ಲಿಮರ ಭೂಮಿಯನ್ನು ಕಸಿದುಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: 11 ಗಂಟೆಗಳ ಕಾಲ ಬಿರುಸಿನ ಚರ್ಚೆ ಬಳಿಕ ವಕ್ಫ್ ಬಿಲ್ ಪಾಸ್; ಇಂದೇ ರಾಜ್ಯಸಭೇಲಿ ಅಂಗೀಕಾರ?
ಒಟ್ಟಾರೆ ವಕ್ಫ್ (ತಿದ್ದುಪಡಿ) ಮಸೂದೆ, 2025 ಲೋಕಸಭೆಯಲ್ಲಿ ಅಂಗೀಕಾರಗೊಂಡರೂ, ಇದು ರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿ ಉಳಿದಿದೆ. ಓವೈಸಿ ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯು ಈ ಮಸೂದೆಯ ಸಂಭಾವ್ಯ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ಕಾನೂನಿನ ಅನುಷ್ಠಾನ ಮತ್ತು ಅದರ ಸಾಮಾಜಿಕ ಪರಿಣಾಮಗಳು ಗಮನಾರ್ಹವಾಗಿರಲಿವೆ.
एक अकेला ही बुजदिलों की भीड़ के लिए काफी है।✊👏
राष्ट्रीय अध्यक्ष बैरिस्टर असदुद्दीन ओवैसी साहब ने विरोध दर्ज करने के लिए वक़्फ़ बिल की कॉपी को संसद में भाषण के दौरान फाड़ डाला।
याद कीजिए, उन्होंने CAA कानून के बिल को भी संसद में फाड़ दिया था। pic.twitter.com/XkDeyGmgnN