ನೂರಾರು ವಿಸ್ತಾರ ವಿಮಾನಗಳ ಸಂಚಾರ ಏಕಾಏಕಿ ರದ್ದು, ಪ್ರಯಾಣಿಕರು ಕಂಗಾಲು

Published : Apr 03, 2024, 06:23 AM IST
ನೂರಾರು ವಿಸ್ತಾರ ವಿಮಾನಗಳ ಸಂಚಾರ ಏಕಾಏಕಿ ರದ್ದು, ಪ್ರಯಾಣಿಕರು ಕಂಗಾಲು

ಸಾರಾಂಶ

ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳ ಪೈಕಿ ಒಂದಾದ ವಿಸ್ತಾರ ಸೋಮವಾರ ಮತ್ತು ಮಂಗಳವಾರ ಏಕಾಏಕಿ ನೂರಾರು ವಿಮಾನಗಳ ಸಂಚಾರ ರದ್ದುಗೊಳಿಸಿದ ಪರಿಣಾಮ ಬೆಂಗಳೂರು ಸೇರಿ ದೇಶವ್ಯಾಪಿ ಸಾವಿರಾರು ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. 

ನವದೆಹಲಿ (ಏ.03): ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳ ಪೈಕಿ ಒಂದಾದ ವಿಸ್ತಾರ ಸೋಮವಾರ ಮತ್ತು ಮಂಗಳವಾರ ಏಕಾಏಕಿ ನೂರಾರು ವಿಮಾನಗಳ ಸಂಚಾರ ರದ್ದುಗೊಳಿಸಿದ ಪರಿಣಾಮ ಬೆಂಗಳೂರು ಸೇರಿ ದೇಶವ್ಯಾಪಿ ಸಾವಿರಾರು ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರ ರದ್ದು ಮತ್ತು ಸಂಚಾರ ವ್ಯತ್ಯಯದ ಕುರಿತು ದೈನಂದಿನ ವರದಿ ಸಲ್ಲಿಸುವಂತೆ ಸಂಸ್ಥೆಗೆ ನಾಗರಿಕ ವಿಮಾನಯಾನ ಪ್ರಾಧಿಕಾರ ಸೂಚಿಸಿದೆ.

ಬಿಕ್ಕಟ್ಟು ಏಕೆ?: ವಿಸ್ತಾರ ಏರ್‌ಲೈನ್ಸ್‌ ಅನ್ನು ತನ್ನದೇ ಆದ ಏರ್‌ಇಂಡಿಯಾದಲ್ಲಿ ವಿಲೀನ ಮಾಡಲು ಟಾಟಾ ಸಮೂಹ ನಿರ್ಧರಿಸಿದೆ. ಅದಕ್ಕೂ ಮುನ್ನ ತನ್ನ ಸಮೂಹದಲ್ಲಿನ ಇತರೆ ಪೈಲಟ್‌ಗಳ ವೇತನ ಮತ್ತು ಭತ್ಯೆಯನ್ನು ವಿಸ್ತಾರಕ್ಕೆ ಜಾರಿಗೊಳಿಸಲು ಮುಂದಾಗಿದೆ. ಅದರೆ ಇದರಿಂದ ತಮಗೆ ಭಾರೀ ನಷ್ಟವಾಗಲಿದೆ ಎಂಬ ಕಾರಣಕ್ಕೆ ಏಕಾಏಕಿ ಪೈಲಟ್‌ಗಳು ಅನಾರೋಗ್ಯ ರಜೆ ಪಡೆದುಕೊಂಡಿದ್ದಾರೆ. ಇತೆ ಹಲವು ಹಿರಿಯ ಉದ್ಯೋಗಿಗಳು ಕೂಡಾ ಇದೇ ತಂತ್ರಕ್ಕೆ ಮೊರೆ ಹೋಗಿದ್ದಾರೆ.

Lok Sabha Election 2024: ರಾಹುಲ್ ಗಾಂಧಿ ವಿರುದ್ಧ ಮೋದಿ ‘ಬೆಂಕಿ’ ದಾಳಿ!

ಹೀಗಾಗಿ ಅಗತ್ಯ ಸಿಬ್ಬಂದಿ ಇಲ್ಲದೇ ಸೋಮವಾರ 50ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದ್ದರೆ, 150ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.ನ ಈ ಕುರಿತು ಕ್ಷಮೆ ಯಾಚಿಸಿರುವ ಕಂಪನಿ ಕೆಲವು ಸ್ಥಳಗಳಿಗೆ ದೊಡ್ಡ ವಿಮಾನಗಳ ನಿಯೋಜನೆ ಮೂಲಕ ಪ್ರಯಾಣಿಕರ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ, ಕೆಲವೆಡೆ ಬೇರೆ ವಿಮಾನಗಳ ಮೂಲಕ ಸಂಚಾರದ ವ್ಯವಸ್ಥೆ ನೀಡಲಾಗಿದೆ. ಜೊತೆಗೆ ಕೆಲವು ಕಡೆ ಹಣ ಮರಳಿಸಲಾಗಿದೆ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?