
ಹರ್ಯಾಣ(ಅ.26): ಆಂಬುಲೆನ್ಸ್ ಮೇಲೆ ಲಂಕಾಧಿಪತಿ ರಾವಣನ ಪ್ರತಿಮೆಯೊಂದು ಇರಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವರಲ್ ಆಗಿದೆ. ಈ ವಿಡಿಯೋ ಹರ್ಯಾಣದ್ದೆನ್ನಲಾಗಿದೆ. ಇನ್ನು ಈ ವಿಡಿಯೋ ನೋಡಿ ಪ್ರತಿಯೊಬ್ಬರೂ 'ರಾವಣನಿಗೂ ಕೊರೋನಾ ತಗುಲಿದೆ ಎಂದು ತಮಾಷೆ ಮಾಡಲಾರಂಭಿಸಿದ್ದಾರೆ.
ಐಎಎಸ್ ಆಫೀಸರ್ ಅವನೀಶ್ ಶರಣ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಅವರ ಈ ವಿಡಿಯೋ ಭಾರರೀ ವೈರಲ್ ಆಗಿದೆ. ವಿಜಯ ದಶಮಿಗೂ ಮುನ್ನ ಕಂಡು ಬಂದ ಈ ದೃಶ್ಯ ಸದ್ಯ ಎಲ್ಲರನ್ನೂ ಆಕರ್ಷಿಸಿದೆ.
ಇನ್ನು ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬ ರಾವಣನನ್ನು ದಹಿಸುವ ವೇಳೆ ಅದರಿಂದ ದೂರವಿರಿ ಎಂದು ಯಾಕೆ ಹೇಳುತ್ತಾರೆಂದು ಅರ್ಥವಾಯ್ತು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ