ಆಪರೇಷನ್ ಸೊಳ್ಳೆ ಫೇಲ್; ರಾಜಮೌಳಿ 'ಈಗ'ಕ್ಕೆ ಬೇಕು ರೋಬೋಟ್ ಚಿಟ್ಟಿ; ವೈರಲ್ ವಿಡಿಯೋ ನೋಡಿ

Published : May 17, 2025, 11:45 AM IST
ಆಪರೇಷನ್ ಸೊಳ್ಳೆ ಫೇಲ್; ರಾಜಮೌಳಿ 'ಈಗ'ಕ್ಕೆ ಬೇಕು ರೋಬೋಟ್ ಚಿಟ್ಟಿ; ವೈರಲ್ ವಿಡಿಯೋ ನೋಡಿ

ಸಾರಾಂಶ

ವ್ಯಕ್ತಿಯೊಬ್ಬರು ಸೊಳ್ಳೆ ಕೊಲ್ಲಲು ಹೋಗಿ ದುಬಾರಿ ಬೆಲೆಯ ಟಿವಿ ಹಾಳು ಮಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬೆಂಗಳೂರು: ಮಳೆಗಾಲ ಶುರುವಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಸಹ ಹೆಚ್ಚಾಗುತ್ತದೆ. ನೀವು ವಾಸಿಸುವ ಪ್ರದೇಶದ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹಾಗೆಯೇ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಒಂದು ವೇಳೆ ಸೊಳ್ಳೆ ಉಂಟಾದ್ರೆ, ಅವುಗಳ ನಿವಾರಣೆಗಾಗಿ ಮಾರುಕಟ್ಟೆಯಲ್ಲಿ ಅನೇಕ ಉತ್ಪನ್ನಗಳು ಸಿಗುತ್ತವೆ. ಇನ್ನು ಕೆಲವರು ಸಂಜೆಯಾಗುತ್ತಿದ್ದಂತೆ ಬಾಗಿಲು, ಕಿಟಕಿ ಬಾಗಿಲು ಹಾಕಿಕೊಳ್ಳುತ್ತಾರೆ. ಸೊಳ್ಳೆ ನಿವಾರಣೆಗಾಗಿ ವಿದ್ಯುತ್ ಚಾಲಿತ ಬ್ಯಾಟ್‌ಗಳನ್ನು ಬಳಸಲಾಗುತ್ತದೆ. ಈ ಬ್ಯಾಟ್‌ನ ತಂತಿಗಳ ಮೇಲೆ ಸೊಳ್ಳೆ ಕುಳಿತರೆ ವಿದ್ಯುತ್ ಶಾಕ್‌ನಿಂದ ಅದು ಸಾಯುತ್ತದೆ. ಕೆಲವರು ಸಂಜೆಯಾಗುತ್ತಿದ್ದಂತೆ ಪಕ್ಕದಲ್ಲಿ ಬ್ಯಾಟ್‌ ಇರಿಸಿಕೊಂಡು ಕುಳಿತುಕೊಳ್ಳುತ್ತಾರೆ. ವ್ಯಕ್ತಿಯೊಬ್ಬರು ಸೊಳ್ಳೆ ಕೊಲ್ಲಲು ಹೋಗಿ ದುಬಾರಿ ಬೆಲೆಯ ಟಿವಿ ಹಾಳು ಮಾಡಿಕೊಂಡಿದ್ದಾರೆ.

ಮಳೆಗಾಲದಲ್ಲಿ ನೀರು ನಿಂತರೆ ಸೊಳ್ಳಗಳು ಜಾಸ್ತಿಯಾಗುತ್ತದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ಹಿಂಡು ಹಿಂಡಾಗಿ ಬರುತ್ತವೆ. ಡೆಂಗ್ಯೂ ಜ್ವರದ ಭಯ ಶುರುವಾಗುತ್ತದೆ. ಅದರಲ್ಲಿ ಮಕ್ಕಳಿರೋ ಮನೆಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವ್ಯಕ್ತಿಯೊಬ್ಬ ಸೊಳ್ಳೆಯಿಂದಾಗಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್‌ಟಿವಿ ಹಾಳು ಮಾಡಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ? 
ಬಾಲಕನೋರ್ವ ಟಿವಿ ನೋಡುತ್ತಾ ಕುಳಿತಿರುತ್ತಾನೆ. ಓರ್ವ ವ್ಯಕ್ತಿ ಕೈಯಲ್ಲಿ ವಿದ್ಯುತ್ ಚಾಲಿತ ಮಸ್ಕಿಟೋ ಬ್ಯಾಟ್‌ ಹಿಡಿದುಕೊಂಡು ಸೊಳ್ಳೆಯನ್ನು ಕೊಲ್ಲಲು ಪ್ರಯತ್ನಿಸುತ್ತಿರೋದನ್ನು ಕಾಣಬಹುದು. ಸೊಳ್ಳೆ ಟಿವಿ ಸ್ಕ್ರೀನ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಮಸ್ಕಿಟೋ ಬ್ಯಾಟ್‌ನಿಂದ ಬಾರಿಸುತ್ತಾನೆ. ಸೊಳ್ಳೆ ಸತ್ತಿದೆಯೋ ಗೊತ್ತಿಲ್ಲ, ಜೋರಾಗಿ ಬ್ಯಾಟ್‌ನಿಂದ ಹೊಡೆದಿದ್ದರಿಂದ ಟಿವಿ ಸ್ಕ್ರೀನ್ ಮೇಲೆ ಗ್ರೀನ್ ಲೈನ್ ಕಾಣಿಸಿಕೊಂಡು ಡಿಸ್‌ಪ್ಲೇ ಡ್ಯಾಮೇಜ್ ಆಗಿದೆ. 

ಇದನ್ನೂ ಓದಿ: ಮೊಮ್ಮಗನ ನಾಚಿಸಿದ ಹರಿಯಾಣದ ಸೂಪರ್ ತಾತ: ಫೋರ್ಡ್ ಮುಸ್ತಾಂಗ್‌ ಸ್ಪಿನ್ ಮಾಡಿ ವೈರಲ್!

'ನೀವು ಸೊಳ್ಳೆಗೆ ಗುರಿ ಇಟ್ಟಿದ್ದೀರಿ. ಆದರೆ ನಿಮ್ಮ ಟಿವಿಯನ್ನೂ ಸ್ವರ್ಗಕ್ಕೆ ಕಳುಹಿಸಿದ್ದೀರಿ. ಮಿಷನ್ ವಿಫಲ. ಆದರೆ ಸೊಳ್ಳೆ ಬದುಕಿರಬಹುದು' ಎಂದು ಭಾಲ ಸ್ಟುಡಿಯೋಸ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದೆ. ಅನೇಕ ಜನರು ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ. ಮಸ್ಕಿಟೋ ಬ್ಯಾಟ್‌ನ ಹೈ ವೋಲ್ಟೇಜ್ ಟಿವಿ ಪರದೆಗೆ ನೇರವಾಗಿ ವಿದ್ಯುತ್ ಪ್ರವಾಹ ಹರಿಸಿ ಸರ್ಕ್ಯೂಟ್ ಹಾಳು ಮಾಡಿದೆ ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು ಸ್ಪ್ರೇ ಹೊಡೆಯಲು ಸಲಹೆ ನೀಡಿದ್ದಾರೆ. ಆದರೆ ಅದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಇತರರು ಎಚ್ಚರಿಸಿದ್ದಾರೆ. ಸೊಳ್ಳೆಗಳನ್ನು ಮೂಲದಲ್ಲೇ ನಾಶಮಾಡಬೇಕು ಎಂದು ಕೆಲವರು ಹೇಳಿದ್ದಾರೆ. 'ಸೊಳ್ಳೆ ಅದು ಸೂಪರ್‌ಮ್ಯಾನ್' ಎಂದು ಒಬ್ಬರು ಬರೆದಿದ್ದಾರೆ.

ಈ ವಿಡಿಯೋವನ್ನು bhala_studios ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ 13 ಸಾವಿರಕ್ಕೂ ಅಧಿಕ ಲೈಕ್ಸ್, ನೂರಾರು ಕಮೆಂಟ್‌ಗಳು ಬಂದಿವೆ. ಇದು ಬಹುಶಃ, ರಾಜಮೌಳಿ ಅವರ ಸೊಳ್ಳೆಯಾಗಿರಬಹುದು. ಹಾಗಾಗಿ ನಿಮ್ಮ ಟಿವಿಯನ್ನು ಹಾಳು ಮಾಡಿದ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಆದ್ರೆ  ಈ ಘಟನೆ ನಡೆದಿದ್ದು ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. 

ಇದನ್ನೂ ಓದಿ: ಇದಕ್ಕಿದ್ದಂತೆ ರಿವರ್ಸ್ ಬಂದ ಲಾರಿ: ಸಾವಿನ ದವಡೆಯಿಂದ ಯುವತಿ ಜಸ್ಟ್ ಮಿಸ್

ನಿಮ್ಮ ದುಬಾರಿ ಬೆಲೆಯ ಟಿವಿಯಂತೂ ಹಾಳಾಗಿದೆ. ಆ ಸೊಳ್ಳೆಯನ್ನು ಮಾತ್ರ ಬಿಡಬೇಡಿ ಎಂದು ಕಮೆಂಟ್ ಮಾಡಿದ್ದಾರೆ. ಸತ್ತ ಸೊಳ್ಳೆಯನ್ನು ಹುಷಾರಾಗಿ ಎತ್ತಿಡಿ, ಅದರ ಬೆಲೆ 2 ಲಕ್ಷ ರೂಪಾಯಿ ಆಗಿದೆ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ರೊಬೋಟ್ ಚಿಟ್ಟಿಯನ್ನು ಕರೆದುಕೊಂಡು ಬರುವಂತೆ ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್