ವಧು ವರರ ಮೆರವಣಿಗೆಯನ್ನು ಸ್ಮರಣೀಯವಾಗಿಸಲು ಕುದುರೆ, ವಿಂಟೇಜ್ ಸೇರಿದಂತೆ ವಿಶೇಷ ವಾಹನಗಳ ಬಳಕೆ ಮಾಡುತ್ತಾರೆ. ಇಲ್ಲೊಬ್ಬ ಮಧುಮಗ ಮಂಟಪಕ್ಕೆ ಆಗಮಿಸಲು ಕುರುಕುರೆ ಚಿಪ್ಸ್ ಪ್ಯಾಕೆಟ್ ಮೂಲಕ ಅಲಂಕರಿಸಿದ ಕಾರಿನಲ್ಲಿ ಆಗಮಿಸಿದ್ದಾನೆ. ಈ ವಿಡಿಯೋ ದೇಶಾದ್ಯಂತ ಸಂಚಲನ ಮೂಡಿಸಿದೆ.
ಮದುವೆ ಸಮಾರಂಭವನ್ನು ಅದ್ಧೂರಿಯಾಗಿ, ಸರಳವಾಗಿ, ವಿಶೇಷವಾಗಿ ಆಯೋಜಿಸಲಾಗುತ್ತದೆ. ಮದುವೆ ಪ್ರತಿ ಕಾರ್ಯಕ್ರಮಗಳನ್ನು ಸ್ಮರಣೀಯವಾಗಿಸಲು ಅತ್ಯಂತ ಶ್ರಮವಹಿಸಲಾಗುತ್ತದೆ. ಈ ಪೈಕಿ ವಧು ವರರು ಮಂಟಪಕ್ಕೆ ಆಗಮಿಸುವಾಗ ಅದ್ಧೂರಿ ಮೆರವಣಿಗೆ, ವಿಶೇಷ ವಾಹನ ಬಳಕೆ ಮಾಡುತ್ತಾರೆ. ಕುದುರೆ ಮೂಲಕ, ಬುಲೆಟ್ ಬೈಕ್, ಜೆಸಿಬಿ ಸೇರಿದಂತೆ ಹಲವು ಪ್ರಯೋಗಗಳು ಈಗಾಗಲೇ ನಡೆದಿದೆ. ಇದೀಗ ಇವೆಲ್ಲವನ್ನೂ ಮೀರಿಸಿದ ವಿಡಿಯೋ ವೈರಲ್ ಆಗಿದೆ. ಕುರುಕುರೆ ಚಿಪ್ಸ್ ಪ್ಯಾಕೆಟ್ ಮೂಲಕ ಅಲಂಕರಿಸಿದ ಕಾರಿನ ಮೂಲಕ ಮಧುಮಗ ಮಂಟಪಕ್ಕೆ ಆಗಮಿಸಿ ಇದೀಗ ಎಲ್ಲಾ ದಾಖಲೆ ಪುಡಿ ಮಾಡಿದ್ದಾನೆ.
ಎಸ್ ಸತ್ಪಾಲ್ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವರ ಮಂಟಪಕ್ಕೆ ಆಗಮಿಸಲು ಮಾರುತಿ ಎರ್ಟಿಗಾ ಕಾರನ್ನು ಅಲಂಕರಿಸಿದ್ದಾರೆ. ಆದರೆ ಕಾರನ್ನು ಸಾಮಾನ್ಯ ಹೂವು, ರಿಬ್ಬನ್‌ಗಳಿಂದ ಅಲಂಕಾರಾ ಮಾಡಿಲ್ಲ. ಸ್ಮರಣೀಯವಾಗಿರಲಿ ಎಂದು ಕುರುಕುರೆ ಚಿಪ್ಸ್ ಪ್ಯಾಕೆಟ್ ಮಮೂಲಕ ಅಲಂಕರಿಸಿದ್ದಾರೆ. ಕಾರಿನ ಬಹತುಕೇ ಭಾಗವನ್ನು ಚಿಪ್ಸ್ ಪ್ಯಾಕೆಟ್ ಮೂಲಕ ಅಲಂಕರಿಸಲಾಗಿದೆ.
ವರ್ಷಕ್ಕೆ 4 ಲಕ್ಷ ಸಂಬಳ ಪಡೆಯುವ 37ರ ಯುವತಿಯ ಮದುವೆಯ ಡಿಮಾಂಡ್ ನೋಡಿದ್ರಾ!
ಬಣ್ಣ ಬಣ್ಣದ ಚಿಪ್ಸ್ ಪ್ಯಾಕೆಟ್ ಮೂಲಕ ಕಾರು ಅಲಂಕರಿಸಿದ್ದಾರೆ. ಈ ಕಾರಿನಲ್ಲಿ ಕುಳಿತ ವರ ಮಂಟಪಕ್ಕೆ ಆಗಮಿಸಿದ್ದಾರೆ. ಈ ಕಾರು ಮಂಟಪಕ್ಕೆ ಹತ್ತಿರ ಬರುತ್ತಿದ್ದಂತೆ ನೆರೆದಿದ್ದ ಕುಟುಂಬಸ್ಥರು, ಆಪ್ತರು ಅಚ್ಚರಿಗೊಂಡಿದ್ದಾರೆ. ಇಷ್ಟೇ ಅಲ್ಲ ಎಲ್ಲರೂ ನಕ್ಕು ನೀರಾಗಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಜೊತೆಗೆ ಅಷ್ಟೇ ಕಮೆಂಟ್ ಕೂಡ ವ್ಯಕ್ತವಾಗಿದೆ.
ಹುಡುಗನಿಗೆ ಚಿಪ್ಸ್ ಅಂಗಡಿ ಇರಬೇಕು, ಇಲ್ಲಾ ಚಿಪ್ಸ್ ಡೀಲರ್ ಆಗಿರಬೇಕು ಎಂದು ಕಮೆಂಟ್ ಮಾಡಿದ್ದಾರೆ. ಚಿಪ್ಸ್ ಪ್ಯಾಕೆಟ್ ಮೂಲಕ ಕಾರು ಅಲಂಕರಿಸಬಹುದು ಅನ್ನೋದು ತೋರಿಸಿಕೊಟ್ಟ ಪುಣ್ಯಾತ್ಮ, ಇನ್ಮುಂದೆ ಮದುವೆ ಸೀಸನ್‌ಗಳಲ್ಲಿ ಚಿಪ್ಸ್ ಬೇಡಿಕೆ ಹೆಚ್ಚಾಗಲಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಒಳ್ಳೆ ಐಡಿಯಾ ಕೊಟ್ಟಿದ್ದೀರಿ, ಮುಂದಿನ ಮದುವೆಗಳಲ್ಲಿ ಈ ರೀತಿ ಅಲಂಕಾರ ಮಾಡುತ್ತೇವೆ ಎಂದು ಕೆಲವರು ಸೂಚಿಸಿದ್ದಾರೆ.
ಮದುವೆ ಸಮಾರಂಭದಲ್ಲಿ ಚಿತ್ರ ವಿಚಿತ್ರ ಮೆರವಣಿಗೆ, ಅಲಂಕಾರಗಳು ಎಲ್ಲರ ಗಮನಸೆಳೆಯುತ್ತಿದೆ. ಅದ್ಧೂರಿಯಾಗಿ ಅಲ್ಲದಿದ್ದರೂ ಕ್ರಿಯಾತ್ಮಕವಾಗಿ ಅಲಂಕಾರ ಮಾಡಿ ಇದೀಗ ಚಿಪ್ಸ್ ಪ್ಯಾಕೆಟ್ ಮೆರವಣಿಗೆ ಕಾರು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಸರ್ಕಾರದ ಸಾಮೂಹಿಕ ವಿವಾಹ ಯೋಜನೆ ಹಣ ಪಡೆಯಲು ಸಹೋದರನ ಜೊತೆ ಮದುವೆ!