Viral video: ಗಂಡಿನ ಹಣೆಗೆ ಕುಂಕಮವಿಟ್ಟು ಸಂಪ್ರದಾಯ ಮುರಿದ ವಧು

By Suvarna NewsFirst Published Dec 14, 2021, 7:55 PM IST
Highlights
  • ವರನ ಹಣೆಗೆ ಸಿಂಧೂರವಿಟ್ಟ ವಧು
  • ಮದುವೆಯ ವೇಳೆ ವರ ವಧುವಿನ ಹಣೆಗೆ ಸಿಂಧೂರ ಇಡುವುದು ಸಂಪ್ರದಾಯ
  • ಕೋಲ್ಕತ್ತಾದ ಈ ಮದುವೆ ವಿಡಿಯೋ ಫುಲ್‌ ವೈರಲ್‌

ಕೋಲ್ಕತ್ತಾ: ಮದುವೆ ಒಂದು ಸುಂದರ ಅನುಬಂಧ. ಇತ್ತೀಚೆಗೆ ಮದುವೆಯ ವೀಡಿಯೋಗಳು ಯಾಕೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಇದಕ್ಕೆ ಕಾರಣ ಅಲ್ಲಿ ನಡೆಯುವ ಕೆಲವು ವಿಭಿನ್ನ ಸಂಭ್ರಮಾಚರಣೆಗಳು ವಿಚಿತ್ರ ಎನಿಸುವ ಘಟನೆಗಳು. ಮದುವೆಯ ಮೂಲ ಸಂಪ್ರದಾಯದ ಪ್ರಕಾರ ವಧುವಿನ ಹಣೆಗೆ ವರ ಸಿಂಧೂರ ಇಡುವುದು ಸಾಮಾನ್ಯ. ಆದರೆ ಇಲ್ಲಿ ನಡೆದ ಮದುವೆಯೊಂದರಲ್ಲಿ ವಧುವೇ ವರನ ಹಣೆಗೆ ಸಿಂಧೂರವಿಟ್ಟು ಸಂಪ್ರದಾಯವನ್ನು ಮುರಿದಿದ್ದಾರೆ. ಕೋಲ್ಕತ್ತಾ(Kolkata)ದಲ್ಲಿ ನಡೆದ ಮದುವೆಯೊಂದರ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೊದಲೆಲ್ಲಾ ಮದುವೆಯ ವಿಡಿಯೋಗಳನ್ನು ಕೇವಲ ಕುಟುಂಬದವರು ನೆಂಟರಿಷ್ಟರು ನೋಡಿ ಸಂಭ್ರಮಿಸುತ್ತಿದ್ದರು. ಆದರೆ ಈಗ ಹಾಗಿಲ್ಲ. ಹಲವು ಮನೋರಂಜನೆ ನೀಡುವ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಟ್ವಿಟ್ಟರ್‌, ಶೇರ್‌ಚಾಟ್‌ ಮುಂತಾದವುಗಳಲ್ಲಿ ನವದಂಪತಿಗಳು ತಮ್ಮ ಮದುವೆಯ ಭಿನ್ನ ವಿಭಿನ್ನ ಕ್ಷಣಗಳನ್ನು ಹಾಕಿ ನೆಟ್ಟಿಜನ್‌ಗಳಿಗೆ ಮನೋರಂಜನೆ ನೀಡುತ್ತಿದ್ದಾರೆ. ಇಲ್ಲೂ ಅಷ್ಟೇ ಕೋಲ್ಕತ್ತಾ ಮೂಲದ ವಧುವೊಬ್ಬರು ಸಿಂಧೂರವನ್ನು ತನ್ನ ಗಂಡನ ಹಣೆಗೆ ಇಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸಂಪ್ರದಾಯದ ಪ್ರಕಾರ ಉತ್ತರ ಭಾರತದ ಮದುವೆಗಳಲ್ಲಿ ವರ ವಧೂವಿನ ಹಣೆಗೆ ಸಿಂಧೂರವಿಟ್ಟರೆ ಮದುವೆಯಾದಂತೆ. ಇದು ಎಲ್ಲಾ ಮದುವೆಗಳಲ್ಲಿ ಸಾಮಾನ್ಯವಾಗಿ ನಡೆದು ಬಂದ ಸಂಪ್ರದಾಯ.  

Viral Video: ಮದುವೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ನವ ದಂಪತಿ
 
ಶಾಲಿನಿ ಸೇನ್‌(shalini sen) ಎಂಬ ವಧು ತನ್ನ ಗಂಡನಾಗುವ ಅಂಕನ್‌ ಮಜುಮ್ದಾರ್‌(Ankan Majumdar) ಹಣೆಗೆ ಕುಂಕುಮ ಇರಿಸಿದ್ದಾರೆ. ಡಿಸೆಂಬರ್‌ 2ರಂದು ಶಾಲಿನಿ ಸೇನ್‌ ಹಾಗೂ ಅಂಕನ್‌ ಮಜುಮ್ದಾರ್‌ ವಿವಾಹ ನಡೆದಿದೆ. ತನ್ನ ಗಂಡನ ಹಣೆಗೆ ಕುಂಕುಮವಿಟ್ಟು ವಧು ನಗುತ್ತಿರುವ ಚಿತ್ರಣ ವಿಡಿಯೋದಲ್ಲಿದೆ. ಇದನ್ನು ನೋಡಿ ಮದುವೆಗೆ ಬಂದ ಅತಿಥಿಗಳು ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದ್ದಾರೆ. ಈ ಮದುವೆಯ ವಿಧಿ ವಿಧಾನವನ್ನು ಮೂವರು ಪುರೋಹಿತರು ನಡೆಸಿದ್ದು, ಕೇವಲ ಸಂಸ್ಕೃತದಲ್ಲಿ ಮಾತ್ರವಲ್ಲದೇ ಬೆಂಗಾಲಿ ಭಾಷೆಯಲ್ಲೂ ಮಂತ್ರೋಚ್ಛಾರ ಮಾಡಲಾಯಿತು. 

 

ಮದುವೆಯಲ್ಲಿ ಕನ್ಯಾದಾನವೂ ಪ್ರಮುಖವಾದ ಸಂಪ್ರದಾಯ ಆದರೆ ಇಲ್ಲಿ ಕನ್ಯಾದಾನ ಸಂಪ್ರದಾಯವನ್ನು ಕೈ ಬಿಡಲಾಯಿತು. 11 ಸೆಕೆಂಡ್ ಗಳ ವಿಡಿಯೋ  ಇದಾಗಿದ್ದು, ಫೇಸ್ ಬುಕ್‌ನಲ್ಲಿ ವಿಡಿಯೋ ವೈರಲ್ ಆಗಿದೆ. ಇದನ್ನು 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು ಮತ್ತು 4,500 ಕ್ಕೂ ಹೆಚ್ಚು ಜನರು ಇದಕ್ಕೆ ಲೈಕ್‌ ಮಾಡಿದ್ದಾರೆ. ಅಲ್ಲದೇ ಈ ವಿಡಿಯೋ ನೋಡಿದ ನೆಟಿಜನ್‌ಗಳು ದಂಪತಿಯನ್ನು ಅಭಿನಂದಿಸಿ ಅವರ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದ್ದಾರೆ. ಮದುವೆಯ ಮಾಮೂಲಿ ಸಂಪ್ರದಾಯವನ್ನು ಮುರಿದಿದ್ದಕ್ಕಾಗಿ ಅನೇಕರು ಅವರನ್ನು ಹೊಗಳಿದರೆ ಮತ್ತೆ ಕೆಲವರು ಸಂಪ್ರದಾಯವನ್ನು ಗೇಲಿ ಮಾಡಿದ್ದಾರೆ ಎಂದು ಈ  ದಂಪತಿಗಳನ್ನು ಟೀಕಿಸಿದರು. ಈ ವಿಡಿಯೋವನ್ನು ವಧುವಿನ ಸಹೋದರಿ ಕೃತಿಕಾ (kruthika) ಅವರು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. 

Viral Video: ಕುಸಿದು ಬಿತ್ತು ವಧುವರರಿದ್ದ ಎಲವೇಟೆಡ್‌ ಮದುವೆ ಮಂಟಪ

ಬಾಲಿವುಡ್‌ ನಟ ರಾಜ್‌ಕುಮಾರ್‌ ರಾವ್‌ (Rajkumar Rao) ಅವರ ಮದುವೆಯನ್ನೇ ಈ ಹೊಸ ಮದುವೆಯೂ ಹೋಲುತ್ತಿದೆ. ನಟ ರಾಜ್‌ಕುಮಾರ್‌ ಹಾಗೂ ಪತ್ರಲೇಖಾ (Patralekha) ಅವರ ವಿವಾಹವೂ ಕಳೆದ ತಿಂಗಳು ನಡೆದಿತ್ತು. ಇವರ ವಿವಾಹದ ವೇಳೆ ರಾಜ್‌ಕುಮಾರ್‌ ತನಗೂ ಸಿಂಧೂರವಿಡುವಂತೆ ಪತ್ನಿ ಪತ್ರಲೇಖಾರನ್ನು ಕೇಳುತ್ತಾರೆ. ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್‌(Instagram) ಖಾತೆಯಲ್ಲಿ ಹಾಕಿದ್ದರು. ವಿಡಿಯೋದಲ್ಲಿ ನಟ ರಾಜ್‌ಕುಮಾರ್‌ ತು ಭಿ ಲಗಾ ದೇ( ನೀನೂ ಹಾಕು) ಎಂದು ಹೇಳುತ್ತಿರುವುದು ಕೇಳಿಸುತ್ತಿದೆ.

ಉತ್ತರ ಭಾರತದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ, ವರನು ವಧುವಿನ ಹಣೆಯ ಮೇಲೆ ಸಿಂಧೂರವನ್ನು ಅವರ ವಿವಾಹದ ಪವಿತ್ರ ಬಂಧನದ ಸಂಕೇತವಾಗಿ ಇಡುತ್ತಾನೆ. ವಿವಾಹಿತ ಮಹಿಳೆಯರು ತಮ್ಮ ಕೂದಲಿನ ರೇಖೆಯ ಮಧ್ಯದಲ್ಲಿ ಸಿಂಧೂರವನ್ನು ಇಡುತ್ತಾರೆ. 

click me!