Viral Video: ಹಳೇ ಡೈರಿಯಿಂದ ಬಯಲಾಯ್ತು 1965ರ ಮದುವೆ ಬಜೆಟ್; ನೀವು ಊಹಿಸಲೂ ಸಾಧ್ಯವಿಲ್ಲದಷ್ಟು ಅಗ್ಗ!

Published : Sep 13, 2025, 10:21 PM IST
1965 wedding cost Dairy

ಸಾರಾಂಶ

Viral Video: This 1965 Wedding Cost Just Rs 1500 ಇತ್ತೀಚಿನ ದಿನಗಳಲ್ಲಿ, ನಾವು ಮದುವೆಗೆ ಹೋದಾಗ, ಅಲ್ಲಿನ ಅಲಂಕಾರಗಳು, ಮೆಹಂದಿ, ಅರಿಶಿನ, ಸಂಗೀತ್‌, ವಿವಾಹ ಸಮಾರಂಭಗಳು ಮತ್ತು ಈ ಎಲ್ಲಾ ವಿಭಿನ್ನ ಕಾರ್ಯಕ್ರಮಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತೇವೆ. 

ಬೆಂಗಳೂರು (ಸೆ.13): ಮದುವೆ.. ಎರಡು ಮನಸ್ಸುಗಳು ಮತ್ತು ಎರಡು ಕುಟುಂಬಗಳು ಒಂದಾಗುವ ಸಂಭ್ರಮ.ಪ್ರತಿಯೊಬ್ಬರಿಗೂ ತಮ್ಮ ಮದುವೆಯ ಬಗ್ಗೆ ಕೆಲವು ಕನಸುಗಳು ಮತ್ತು ಆಸೆಗಳು ಇರುತ್ತವೆ. ಪ್ರತಿಯೊಬ್ಬರೂ ಅಂತಹ ಮದುವೆಯನ್ನು ಮಾಡಿಕೊಳ್ಳಲು, ತಮ್ಮ ಮದುವೆ ವಿಶೇಷವಾಗಿರುವಂತೆ ಮಾಡಲು ಕೆಲವು ಯೋಜನೆಗಳನ್ನು ಹೊಂದಿರುತ್ತಾರೆ. ಇಂದಿನ ಯುಗದಲ್ಲಿ, ನಾವು ಮದುವೆಗೆ ಹೋದಾಗ, ಅಲಂಕಾರಗಳು, ಮೆಹಂದಿ, ಅರಿಶಿನ, ಸಂಗೀತ್‌, ವಿವಾಹ ಸಮಾರಂಭಗಳು ಮತ್ತು ಈ ಎಲ್ಲಾ ವಿಭಿನ್ನ ಕಾರ್ಯಕ್ರಮಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತೇವೆ. ನಾವು ಎಲ್ಲಾ ಅಲಂಕಾರಗಳನ್ನು ಮೆಚ್ಚುತ್ತೇವೆ, ಆದರೆ ಇಷ್ಟೆಲ್ಲಾ ಗದ್ದಲದ ನಂತರ, ಮದುವೆಯ ವೆಚ್ಚ ಎಷ್ಟು ಎಂಬ ಪ್ರಶ್ನೆಯೂ ನಮ್ಮ ಮನಸ್ಸಿಗೆ ಬಂದೇ ಬರುತ್ತದೆ.

60 ವರ್ಷಗಳ ಹಿಂದೆ ಮದುವೆಗೆ ಆದ ಖರ್ಚು

ನಿಮ್ಮ ಕುಟುಂಬದಲ್ಲಿ ಯಾರಾದರೂ ಮದುವೆಯ ಬಗ್ಗೆ ಯೋಚನೆ ಮಾಡುತ್ತಿರಬಹುದು. ಇತ್ತೀಚಿನ ದಿನಗಳಲ್ಲಿ ಮದುವೆಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಅನ್ನೋದನ್ನು ತಿಳಿದರೆ ನಿಮಗೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ. ಆದರೆ 30, 40 ಅಥವಾ 50 ವರ್ಷಗಳ ಹಿಂದೆ ಮದುವೆಗಳು ಎಷ್ಟು ಅದ್ದೂರಿಯಾಗಿ ನಡೆಯುತ್ತಿದ್ದವು ಮತ್ತು ಎಷ್ಟು ಹಣ ಖರ್ಚು ಮಾಡಲಾಗುತ್ತಿತ್ತು ಎಂದು ಯಾರಾದರೂ ಹೇಳಿದಾಗ ನಿಮಗೆ ಅಚ್ಚರಿಯಾಗೋದು ಖಂಡಿತ. ಪ್ರಸ್ತುತ, ಇದೇ ರೀತಿಯ ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ನಿಖರವಾಗಿ ಅರವತ್ತು ವರ್ಷಗಳ ಹಿಂದೆ, ಅಂದರೆ 1965 ರಲ್ಲಿ ನಡೆದ ವಿವಾಹದ ಬಗ್ಗೆ ಬರೆಯಲಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಆ ವ್ಯಕ್ತಿ 1965 ರಲ್ಲಿ ನಡೆದ ಮದುವೆಯ ಖರ್ಚುಗಳನ್ನು ಬರೆದ ಹಳೆಯ ಡೈರಿಯನ್ನು ತೋರಿಸಿದ್ದಾನೆ. ಮದುವೆ 1965 ಫೆಬ್ರವರಿ 10 ರಂದು ನಡೆಯಿತು. ಆ ಕಾಲದ ಮದುವೆಗಳಲ್ಲಿ ಎಷ್ಟು ಉಡುಗೊರೆ ನೀಡಲಾಗುತ್ತಿತ್ತು ಎನ್ನುವುದನ್ನೂ ಕೂಡ ಆ ವ್ಯಕ್ತಿ ತೋರಿಸುತ್ತಾನೆ. ಅನೇಕರು ತಲಾ ಒಂದು ರೂಪಾಯಿಯನ್ನು ಮುಯ್ಯಿ ರೂಪದಲ್ಲಿ ನೀಡಿದ್ದರು. ಮದುವೆಯಲ್ಲಿ ಮುಯ್ಯಿ ರೂಪದಲ್ಲಿಯೇ ವ್ಯಕ್ತಿ, 50 ರೂಪಾಯಿ ಪಡೆದಿದ್ದರು.

ಮದುವೆಯ ಒಟ್ಟು ಖರ್ಚು 1504 ರೂಪಾಯಿ 64 ಪೈಸೆ!

ನಂತರ ಆ ವ್ಯಕ್ತಿ ಅಡುಗೆಯವರ, ಕ್ಷೌರಿಕರ, ಇತ್ಯಾದಿಗಳ ಖರ್ಚುಗಳನ್ನು ಕೂಡ ತೋರಿಸಿದ್ದಾನೆ. ಅಂತಿಮವಾಗಿ ಆ ಸಮಯದಲ್ಲಿ ಇಡೀ ಮದುವೆಯನ್ನು 1504 ರೂಪಾಯಿ 64 ಪೈಸೆಗೆ ಮಾಡಲಾಗಿತ್ತು ಎನ್ನುವುದು ಗೊತ್ತಾಗಿದೆ. ಅನೇಕರು ಇದನ್ನು ನೋಡಿ ಆಶ್ಚರ್ಯಚಕಿತರಾದರು ಏಕೆಂದರೆ ಇತ್ತೀಚಿನ ದಿನಗಳಲ್ಲಿ 1500 ರೂಪಾಯಿಗಳು ನಾವು ಹೋಟೆಲ್‌ನಲ್ಲಿ ಒಂದೇ ಊಟಕ್ಕೆ ಖರ್ಚು ಮಾಡಬಹುದಾದ ಹಣ ಎಂದಿದ್ದಾರೆ.

 

ನೀವು ಈಗಷ್ಟೇ ವೀಕ್ಷಿಸಿದ ವೀಡಿಯೊವನ್ನು ಘಂಟಾ ಎಂಬ ಖಾತೆಯು Instagram ನಲ್ಲಿ ಪೋಸ್ಟ್ ಮಾಡಿದೆ. 'ಆ ದಿನಗಳು ಎಷ್ಟು ಅಗ್ಗವಾಗಿದ್ದವು.' ಎಂಬ ಶೀರ್ಷಿಕೆ 'ಕಿತ್ನೆ ಸಸ್ತೇ ದಿನ್ ಥೇ' ಎಂದು ಬರೆಯಲಾಗಿದೆ. ಈ ವೀಡಿಯೊಗೆ 32 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ ಮತ್ತು ಅನೇಕರು ಹೇರಳವಾಗಿ ಕಾಮೆಂಟ್ ಮಾಡಿದ್ದಾರೆ. ಆ ಸಮಯದಲ್ಲಿ ಸಂಬಳ 50 ರೂ. ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ತಮಾಷೆಯಾಗಿ 'ಹೇ, ಯಾರಾದರೂ ಟೈಮ್ ಮೆಷಿನ್ ಮಾಡಿ..' ಎಂದು ಬರೆದಿದ್ದಾರೆ. ಅನೇಕರು ಈ ವೀಡಿಯೊವನ್ನು ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಅನೇಕರು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?