
Viral News: ಫಿಲ್ಟರ್ ಕಾಫಿ ಅಂದ್ರೆ ನಿಮಗಿಷ್ಟಾನಾ? ಒಂದು ಕಪ್ ಬಿಸಿಯಾದ, ಹಬೆಯಾಡುವ ಫಿಲ್ಟರ್ ಕಾಫಿಯನ್ನು ಸವಿಯಬೇಕು ಅಂತ ನಿಮಗನಿಸುತ್ತಾ? ಯಸ್! ಗಂಟೆಗಟ್ಟಲೇ ಕೆಲಸದ ನಂತರ, ಸಖತ್ ಪರಿಮಳ ಬೀರುವ ಬೆಚ್ಚಗಿನ ಫಿಲ್ಟರ್ ಕಾಫಿ ಸವಿಯುತ್ತಾ ವಿಶ್ರಾಂತಿ ಪಡೆಯಲು ಹಲವರು ಇಷ್ಟಪಡುತ್ತಾರೆ. ನಾವು ನಿಮಗೆ ಫಿಲ್ಟರ್ ಕಾಫಿಯನ್ನಂತೂ ಕೊಡಲು ಸಾಧ್ಯವಿಲ್ಲ, ಆದರೆ ನಿಮ್ಮನ್ನು ಬೆರಗುಗೊಳಿಸುವ ಈ ಫಿಲ್ಟರ್ ಕಾಫಿಯ ಚಿತ್ರವೊಂದನ್ನು ಖಂಡಿತವಾಗಿ ತೋರಿಸಬಹುದು.
ಚೆನ್ನೈ ಮೂಲದ ಕಲಾವಿದರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ಫಿಲ್ಟರ್ ಕಾಫಿಯ ಚಿತ್ರ ನಿಜವಾದ ಫೋಟೋ ಎಂದು ನೀವು ನಂಬುವಂತೆ ಮಾಡುತ್ತದೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದ್ದು, ನಿಜವಾಗಿಯೂ ಇದು ಕಲಾಕೃತಿಯೇ ಅಥವಾ ಕಾಫಿ ಕಪ್ಪಿನ ಫೋಟೋ ಕ್ಲಿಕ್ಕಿಸಿದ್ದಾರೆಯೇ ಎಂದು ನೆಟ್ಟಿಗರು ಫುಲ್ ಕನ್ಫ್ಯೂಸ್ ಆಗಿದ್ದಾರೆ. ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಕ್ಕೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಸ್ ಬಂದಿವೆ.
ಆದರೆ ಇದು ಕ್ಯಾಮೆರಾದಿಂದ ಕ್ಲಿಕ್ಕಿಸಿದ ಫೋಟೋ ಅಲ್ಲ, ಬದಲಿಗೆ ಚೆನ್ನೈ ಮೂಲದ ಕಲಾವಿದೆಯೊಬ್ಬರ ಕುಂಚದಿಂದ ಮೂಡಿಬಂದ, ಅದ್ಭುತವಾಗಿ ಸ್ಕೆಚ್ ಮಾಡಲಾಗಿರುವ ಪೇಂಟಿಂಗ್. ಇದನ್ನು ನೀವು ಖಚಿತಪಡಿಸಿಕೊಳ್ಳಲು ಈ ಚಿತ್ರವನ್ನು ಹಲವು ಬಾರಿ ಝೂಮ್ ಮಾಡಬೇಕಾಗಬಹುದು.
ಈ ಚಿತ್ರ ನೋಡಿ ನೀವೂ ಸ್ವಲ್ಪ ಕನ್ಫ್ಯೂಸ್ ಆಗಿರಬಹುದು. ಆದರೆ ಇದೊಂದು ಪೇಟಿಂಗ್ ಆಗಿದ್ದು ಕಲಾವಿದೆ ತನ್ನ ಡ್ರಾಯಿಂಗ್ ಅವಧಿಯ ಟೈಮ್‌ಲ್ಯಾಪ್ಸ್ ವೀಡಿಯೊವನ್ನು ಸಹ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಚೆನ್ನೈ ಮೂಲದ ಕಲಾವಿದೆಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡ ಈ ಫಿಲ್ಟರ್ ಕಾಫಿಯ ಚಿತ್ರ 56 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಮತ್ತು ಸಾವಿವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ
ಈ ಚಿತ್ರವನ್ನು ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದು ಇದನ್ನು ಸೃಷ್ಟಿಸಿದ ಕಲಾವಿದೆಯ ಬಗ್ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಇದು ನಿಜವಾಗಿಯೂ ಒಂದು ಸ್ಕೆಚ್ ಎಂದು ಖಚಿತಪಡಿಸಿಕೊಳ್ಳಲು ಒಂದಕ್ಕಿಂತ ಹೆಚ್ಚು ಬಾರಿ ಚಿತ್ರವನ್ನು ನೋಡಬೇಕು ಎಂದು ಹಲವರು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ