ವಿಕಾಸ್ ದುಬೆಯನ್ನು ಎನ್‌ಕೌಂಟರ್ ಮಾಡಲಾಯ್ತು. ಹಾಗಾದರೆ ಆತನನ್ನು ರಕ್ಷಿಸಿದ ಪೊಲೀಸರ ಕಥೆ ಏನು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.
ದೆಹಲಿ(ಜು.10): ವಿಕಾಸ್ ದುಬೆಯನ್ನು ಎನ್‌ಕೌಂಟರ್ ಮಾಡಲಾಯ್ತು. ಹಾಗಾದರೆ ಆತನನ್ನು ರಕ್ಷಿಸಿದ ಪೊಲೀಸರ ಕಥೆ ಏನು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.
ಗ್ಯಾಂಗ್‌ಸ್ಟರ್ ರೌಡಿ ವಿಕಾಸ್ ದುಬೆ ಎನ್‌ಕೌಂಟರ್ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸರ್ಜೇವಾಲ ಈ ಬಗ್ಗೆ ಪ್ರಶ್ನಿಸಿ, ಪೊಲೀಸರಿಗೆ ಶರಣಾದ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ್ದೇಕೆ ಎಂದಿದ್ದಾರೆ.
8 ಪೊಲೀಸರ ಹತ್ಯೆಗೈದಿದ್ದ ವಿಕಾಸ್ ದುಬೆ ಎನ್‌ಕೌಂಟರ್‌ಗೆ ಬಲಿ!
ಕ್ರಿಮಿನಲ್‌ಗಳು ಯಾವ ರಹಸ್ಯ ಕಾಪಾಡುತ್ತಿದ್ದಾರೆ..? ದುಬೆ ಎನ್‌ಕೌಂಟರ್ ಆಗಿರದಿದ್ದರೆ ಸರ್ಕಾರದ ಯಾವ ರಹಸ್ಯ ಬಯಲಾಗುತ್ತಿದ್ದು ಎಂದು ಪ್ರಶ್ನಿಸಿದ್ದಾರೆ. ವಿಕಾಸ್ ದುಬೆಯ ಕಳೆದ 10 ದಿನಗಳ ಫೋನ್ ಕಾಲ್ ಡೀಟೇಲ್ಸ್ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ವಕ್ತಾರ ಒತ್ತಾಯಿಸಿದ್ದಾರೆ.
ವಿಕಾಸ್ ದುಬೆ ಎನ್‌ಕೌಂಟರ್ ಹಿಂದೆ ರಾಜಕೀಯ ಉದ್ದೇಶ..?
ಸಮಾಜವಾದಿ ಪಕ್ಷ ಮುಖಂಡ ಅಖಿಲೇಶ್ ಯಾದವ್ ಉತ್ತರ ಪ್ರದೇಶ ಸರ್ಕಾರದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಕಾರು ಉರುಳಿಉದ್ದಲ್ಲ, ಸರ್ಕಾರ ಉರುಳದೆ ಉಳಿಯಿತು ಎಂದು ವ್ಯಂಗ್ಯ ಮಾಡಿದ್ದಾರೆ. ಇಂದು ಬೆಳಗ್ಗೆ ದುಬೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ನಿನ್ನೆಯಷ್ಟೇ ವಿಕಾಸ್ ದುಬೆಯನ್ನು ಬಂಧಿಸಲಾಗಿತ್ತು.