ಕಂಕುಳಲ್ಲಿ ಮಗು ಹೊತ್ತು ಟ್ರಾಫಿಕ್‌ ನಿಯಂತ್ರಣ: ವಿಡಿಯೋ ವೈರಲ್‌!

By Kannadaprabha NewsFirst Published Mar 8, 2021, 7:38 AM IST
Highlights

ಮಹಿಳಾ ಪೊಲೀಸರೊಬ್ಬರು ಮಗುವನ್ನು ಕಂಕುಳಲ್ಲಿ ಹೊತ್ತು ಟ್ರಾಫಿಕ್‌ ನಿಯಂತ್ರಣ ಕೆಲಸ| ಮಹಿಳೆಯ ಕರ್ತವ್ಯ ಪ್ರಜ್ಞೆ ಮತ್ತು ಮಗುವಿನ ಬಗ್ಗೆ ಆ ತಾಯಿಗಿರುವ ಕಾಳಜಿಗೆ ಶ್ಲಾಘನೆ

ಚಂಡೀಗಢ(ಮಾ.08): ಮಹಿಳಾ ಪೊಲೀಸರೊಬ್ಬರು ಮಗುವನ್ನು ಕಂಕುಳಲ್ಲಿ ಹೊತ್ತು ಟ್ರಾಫಿಕ್‌ ನಿಯಂತ್ರಣ ಕೆಲಸ ಮಾಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ.

ದಾರಿಹೋಕರು ಈ ಮಹಿಳಾ ಪೊಲೀಸ್‌ ಅಧಿಕಾರಿ ಕರ್ತವ್ಯ ಪ್ರಜ್ಞೆ ಕಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದೀಗ ವೈರಲ್‌ ಆಗಿದೆ. ಆದರೆ ಕೆಲ ನೆಟ್ಟಗರು ಮಹಿಳೆಯ ಕರ್ತವ್ಯ ಪ್ರಜ್ಞೆ ಮತ್ತು ಮಗುವಿನ ಬಗ್ಗೆ ಆ ತಾಯಿಗಿರುವ ಕಾಳಜಿಯನ್ನು ಶ್ಲಾಘಿಸಿದ್ದಾರೆ.

ममत्व और कर्तव्य का संगम !!❤️ pic.twitter.com/mQo4ODujgt

— SACHIN KAUSHIK (@upcopsachin)

ಹೀಗಿದ್ದರೂ ಇನ್ನೂ ಕೆಲವರು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನನಿಬಿಡವಾಗಿರುವ, ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಕ್ಕೆ ಮಗುವನ್ನು ಕರೆತಂದು ಕೆಲಸ ಮಾಡುವುದು ಸೂಕ್ತ ಅಲ್ಲ. ಇದಕ್ಕೆ ಪ್ರೋತ್ಸಾಹ ನೀಡುವುದು ಸರಿಯಲ್ಲ ಎಂದು ದೂರಿದ್ದಾರೆ.

click me!