
ಚೆನ್ನೈ: ತಮಿಳುನಾಡಿನ ಹುಲಿ ಸಂರಕ್ಷಿತಾರಣ್ಯ ಪ್ರದೇಶವಾದ ಸತ್ಯಮಂಗಲಂ ಅರಣ್ಯದಲ್ಲಿ ತಮ್ಮಪ್ಪ ಭಾರೀ ಪ್ರಮಾಣದ ನಿಧಿ ಅಡಗಿಸಿಟ್ಟಿದ್ದಾನೆ ಎಂದು ಕಾಡುಗಳ್ಳ ವೀರಪ್ಪನ್ ಪುತ್ರಿ ವಿಜಯಲಕ್ಷ್ಮೇ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತಾವು ಅಭಿನಯಿಸಿದ ರನ್ ಪಿಳ್ಳೈ ಸಿನಿಮಾ ಬಗ್ಗೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯಲಕ್ಷ್ಮೇ ಅವರು, ನಮ್ಮ ತಂದೆ ವಾಸಿಸುತ್ತಿದ್ದ ಸತ್ಯಮಂಗಲಂ ಕಾಡಿನಲ್ಲಿ ಬೃಹತ್ ಫಂಡ್ ಡಂಪ್ ಇದೆ. ಇದನ್ನು ಪತ್ತೆ ಹಚ್ಚುವ ಅಗತ್ಯವಿದೆ. ಆದರೆ ಈ ಬಗ್ಗೆ ಮಾಹಿತಿ ಇರುವ ಅವರ ಯಾರೊಬ್ಬ ಅನುಯಾಯಿಗಳು ಬದುಕುಳಿದಿಲ್ಲ. ಹೀಗಾಗಿ ಈ ನಿಧಿ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.
ದಂತಚೋರ ವೀರಪ್ಪನ್ ಮತ್ತು ಅವರ ಪತ್ನಿ ಲಕ್ಷ್ಮೇ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಈ ಪೈಕಿ ಬಿಜೆಪಿ ಸೇರ್ಪಡೆಯಾಗಿರುವ ವಿದ್ಯಾರಾಣಿ ಅವರು ಪಕ್ಷದ ಯುವ ಘಟಕದ ನಾಯಕಿಯಾಗಿದ್ದಾರೆ. ಮತ್ತೋರ್ವ ಪುತ್ರಿಯಾದ ವಿಜಯಲಕ್ಷ್ಮೇ ಅವರು ಸಿನಿಮಾ ಜಗತ್ತಿನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಸತ್ಯಮಂಗಲಂ ಅರಣ್ಯವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದ ದಂತಚೋರ ವೀರಪ್ಪನ್ ಶ್ರೀಗಂಧದ ಮರಗಳು, ಆನೆ ದಂತಗಳು ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ. ಅಲ್ಲದೆ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದ ವೀರಪ್ಪನ್ ದೇಶಾದ್ಯಂತ ಸುದ್ದಿಯಾಗಿದ್ದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ