ನವದೆಹಲಿ(ಡಿ. 27): ಕೋವಿಡ್‌ನಿಂದ ಲಾಕ್‌ಡೌನ್ ಆದ ಪರಿಣಾಮ ಪ್ರತಿಯೊಬ್ಬರು ಇಂಟರ್‌ನೆಟ್‌ನಲ್ಲೇ ಮುಳುಗುವಂತಾಗಿದ್ದು, ಅನೇಕರು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ನೋಡಿ ತಮ್ಮ ಕ್ರಿಯೇಟಿವಿಯನ್ನು ತೋರಿಸುತ್ತಿದ್ದಾರೆ. ಜೊತೆಗೆ ಅಡುಗೆ ಸೇರಿದಂತೆ ಹಲವು ಹೊಸ ರುಚಿಗಳನ್ನು ತಯಾರಿಸುತ್ತಿದ್ದಾರೆ. ಈಗ ಬಿಜೆಪಿ ಸಂಸದ ವರುಣ್ ಗಾಂಧಿ ಪುಟ್ಟ ಮಗಳ ಸರದಿ. ಈಕೆ ರುಚಿಯಾದ ಬಿಸ್ಕೆಟ್‌ಗಳನ್ನು ತಯಾರಿಸಿದ್ದು, ಈ ಬಿಸ್ಕೆಟ್‌ಗಳ ಫೋಟೋವನ್ನು ಅಪ್ಪ ವರುಣ್ ಗಾಂಧಿ (Varun Gandhi) ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪುತ್ರಿ ಅನಸುಯಾ(Anasuyaa) ತಾನು ಮೊದಲ ಬಾರಿಗೆ ತಯಾರಿಸಿದ ಬಿಸ್ಕೆಟ್‌ಗಳನ್ನು ಬಟ್ಟಲುಗಳಲ್ಲಿ ಹಾಕಿ ಹಿಡಿದಿರುವ ಫೋಟೋಗಳನ್ನು ವರುಣ್ ಗಾಂಧಿ ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ಪ್ರಸ್ತುತ ಮಕ್ಕಳ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪೋಷಕರು ಖುಷಿ ಹಂಚಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದಕ್ಕೆ ಫಿಲಿಬಿತ್ ಕ್ಷೇತ್ರದ ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಹೊರತಾಗಿಲ್ಲ. ವರುಣ್ ಪುತ್ರಿಯ ಬಗ್ಗೆ ಮಾಡಿದ ಪೋಸ್ಟ್‌ಗೆ ನೆಟ್ಟಿಗರು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.
My daughter Anasuyaa after baking her first ever batch of cookies… pic.twitter.com/pnCkztXyGH
— Varun Gandhi (@varungandhi80)
ನನ್ನ ಮಗಳು ಅನುಸುಯಾ ಆಕೆ ಮೊದಲ ಬಾರಿಗೆ ಮಾಡಿದ ಬಿಸ್ಕೆಟ್‌ಗಳೊಂದಿಗೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಪೋಸ್ಟ್‌ಗೆ 28,000 ಸಾವಿರ ಲೈಕ್ಸ್ ಬಂದಿದ್ದು, ಸಾವಿರಾರು ಜನ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇದು ತುಂಬಾ ಮುದ್ದಾಗಿದೆ. ನನ್ನ ಪ್ರೀತಿಯನ್ನು ಅನುಸೂಯಾಗೆ ತಿಳಿಸಿ. ಜೊತೆಗೆ ಬಿಸ್ಕೆಟ್‌ಗಳು ಬಾಯಲ್ಲಿ ನೀರೂರಿಸುವಂತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ನಾನು ಬಿಜೆಪಿ ತೊರೆವ ದಿನ, ನನ್ನ ರಾಜಕೀಯದ ಕೊನೆ: ವರುಣ್ ಗಾಂಧಿ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ತಮ್ಮ ವೈಯಕ್ತಿಕ ವಿಷಯಗಳನ್ನು ಫ್ಯಾನ್ಸ್‌ಗಳೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇದಕ್ಕೂ ಮೊದಲು ಕೆಲ ದಿನಗಳ ಹಿಂದಷ್ಟೇ ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಮ್ಮ ಪುತ್ರಿಯ ವಿವಾಹ ನಿಶ್ಚತಾರ್ಥದ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದರು. ತಮ್ಮ ಪುತ್ರಿಯ ವಿವಾಹ ನಿಶ್ಚಿತಾರ್ಥದ ಫೋಟೊಗಳನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡುವ ಮೂಲಕ ನವ ಜೋಡಿಗೆ ಶುಭ ಹಾರೈಸಿದ್ದರು. ಸ್ಮೃತಿ ಇರಾನಿ ಪುತ್ರಿ ಶಾನೆಲ್(Shanelle) ಅವರು ಅರ್ಜುನ್ ಭಲ್ಲಾ (Arjun Bhalla) ಎಂಬುವವರ ಕೈ ಹಿಡಿಯುತ್ತಿದ್ದಾರೆ. ಇವರಿಬ್ಬರ ಸುಂದರವಾದ ಫೋಟೋವನ್ನು ಡಿಸೆಂಬರ್ 25ರಂದು ಸ್ಮೃತಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.
ಪ್ರೀತಿಯ ನಾಯಿಯೊಂದಿಗೆ ಪುಟ್ಟ ಬಾಲಕಿಯ ಸಾಹಸ... ನೋಡಿ viral video
ಇವರು ಪೋಸ್ಟ್ ಮಾಡಿದ ಮೊದಲ ಫೋಟೋದಲ್ಲಿ ಅರ್ಜುನ್ ಭಲ್ಲಾ ಅವರು ಸ್ಮೃತಿ ಇರಾನಿ ಪುತ್ರಿ ಶಾನೆಲ್ ಅವರಿಗೆ ಪ್ರೇಮ ನಿವೇದನೆ ಮಾಡುತ್ತಿರುವ ಫೋಟೋ ಇದೆ. ಈ ಫೋಟೋದಲ್ಲಿ ಅರ್ಜುನ್ ಹಾಗೂ ಶಾನೆಲ್ ಇಬ್ಬರು ನಗುತ್ತಾ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ನಮ್ಮ ಹೃದಯವನ್ನು ಗೆದ್ದಿರುವ ಅರ್ಜುನ್ ಭಲ್ಲಾ ಅವರಿಗೆ ನಮ್ಮ ಹುಚ್ಚು ಕುಟುಂಬಕ್ಕೆ(madcap family) ಸ್ವಾಗತ. ನಿಮಗೆ ನಾವು ಆಶೀರ್ವಾದಿಸುತ್ತಿದ್ದೇವೆ. ನೀವು ಹುಚ್ಚು ಮನುಷ್ಯನಂತ (crazy man) ಮಾವನೊಂದಿಗೆ ಹಾಗೂ ಅದಕ್ಕಿಂತಲೂ ಕೆಟ್ಟ ಅತ್ತೆಯ ಜೊತೆ ವ್ಯವಹರಿಸಬೇಕಾಗುತ್ತದೆ. ಈ ಬಗ್ಗೆ ನಾನು ಅಧಿಕೃತವಾಗಿ ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ದೇವರು ಒಳ್ಳೆದು ಮಾಡಲಿ ಎಂದು ತಮಾಷೆಯಾಗಿ ಬರೆದು ಮಗಳು ಆಳಿಯನಿಗೆ ಆಶೀರ್ವಾದ ಮಾಡಿದ್ದರು.
ಇಷ್ಟೇ ಅಲ್ಲದೇ ಇನ್ಸ್ಟಾಗ್ರಾಮ್‌ನಲ್ಲಿ ಸದಾ ಆಕ್ಟಿವ್ ಆಗಿರುವ ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ತಮಾಷೆಯಾದ ಫೋಟೋವೊಂದನ್ನು ಶೇರ್ ಮಾಡಿದ್ದರು. ಇದನ್ನು ಅವರ ತಾಯಿ ಅವರಿಗೆ ಕಳುಹಿಸಿದ್ದರೆಂದು ಸ್ಮೃತಿ ಇರಾನಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.. 1980ರ ದಶಕದ ಮಕ್ಕಳು ಆಗಿನ ಕಾಲದಲ್ಲಿ ಹೇಗೆ ಬೆಳೆಯುತ್ತಿದ್ದರು. ಆಗ ಕುಟುಂಬದ ವಾತಾವರಣ ಹೇಗಿತ್ತು, ಅಮ್ಮಂದಿರು ಹೇಗಿದ್ದರು ಎಂಬುದನ್ನು ಈ ಒಂದು ಫೋಟೋದಲ್ಲಿ ಕಂಡು ಕೊಳ್ಳಬಹುದು. ಸ್ಮೃತಿ ಇರಾನಿ ಶೇರ್ ಮಾಡಿದ ಈ ಫೋಟೋ ನೋಡಿ ತುಂಬಾ ಜನ ಇನ್ಸ್ಟಾಗ್ರಾಮ್ (Instagram) ಬಳಕೆದಾರರು ತಾವು ಕೂಡ ಇಂತಹ ಸ್ಥಿತಿ ಅನುಭವಿಸಿದ್ದಾಗಿ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ನಮ್ಮ ಅಮ್ಮನೂ ಹೀಗೆ ಎಂದು ಗತಕಾಲದ ನೆನಪಿಗೆ ಇಳಿದು ಬಂದಿದ್ದರು.