2006ರ ಮಾರ್ಚ್ 7 ರಂದು, ವಾರಣಾಸಿಯ ಸಂಕಟಮೋಚನ ದೇವಸ್ಥಾನ ಮತ್ತು ರೈಲ್ವೆ ಕ್ಯಾಂಟ್‌ನಲ್ಲಿ ಭೀಕರ ಬಾಂಬ್ ಸ್ಫೋಟಗಳು ಸಂಭವಿಸಿದವು. 16 ವರ್ಷಗಳ ನಡೆದ ವಿಚಾರಣೆಯ ಬಳಿಕ, ಇಂದು ಗಾಜಿಯಾಬಾದ್‌ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಭಯೋತ್ಪಾದಕ ವಲಿಯುಲ್ಲಾನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ವಾರಣಾಸಿ (ಜೂನ್ 6): ವಾರಣಾಸಿಯಲ್ಲಿ(Varanasi) ನಡೆದ ಸರಣಿ ಬಾಂಬ್ ಸ್ಫೋಟ (Serial Bomb Blasts) ಪ್ರಕರಣದಲ್ಲಿ ಭಯೋತ್ಪಾದಕ ವಲೀಯುಲ್ಲಾ ಖಾನ್ ಗೆ (Waliullah Khan) ಗಾಜಿಯಾಬಾದ್‌ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (Ghaziabad court) ಗಲ್ಲು ಶಿಕ್ಷೆ ವಿಧಿಸಿದೆ. ಗಾಜಿಯಾಬಾದ್‌ನ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಮೂರ್ತಿ ಜೀತೇಂದ್ರ ಕುಮಾರ್, ಜೂನ್ 4 ರಂದು ಪ್ರಕರಣದ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ್ದರು.
ಸರಣಿ ಸ್ಫೋಟದ ಆರೋಪಿ ವಲಿಯುಲ್ಲಾ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.. ಜಿಲ್ಲಾ ನ್ಯಾಯಾಧೀಶ ಜಿತೇಂದ್ರ ಕುಮಾರ್ ಸಿನ್ಹಾ ಈ ತೀರ್ಪು ನೀಡಿದ್ದಾರೆ. 7 ಮಾರ್ಚ್ 2006 ರಂದು, ವಾರಣಾಸಿಯ ಸಂಕಟಮೋಚನ ಮಂದಿರ ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಸರಣಿ ಸ್ಫೋಟ ಸಂಭವಿಸಿತ್ತು. ವಲೀಯುಲ್ಲಾ ಇದರ ರೂವಾರಿಯಾಗಿದ್ದ. ಈ ಪ್ರಕರಣದಲ್ಲಿ 16 ವರ್ಷಗಳ ನಂತರ ತೀರ್ಪು ಬಂದಿದೆ.
ಇದಕ್ಕೂ ಮುನ್ನ ಮೇ 23 ರಂದು ವಾರಣಾಸಿ ಬಾಂಬ್ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿತೇಂದ್ರ ಕುಮಾರ್ ಸಿನ್ಹಾ ಅವರ ನ್ಯಾಯಾಲಯದಲ್ಲಿ ನಡೆಸಲಾಗಿತ್ತು. ವಿಚಾರಣೆ ಆರಂಭಕ್ಕೂ ಮುನ್ನ ಆರೋಪಿ ವಲಿಯುಲ್ಲಾನನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ಜೂನ್ 4 ರಂದು ವಿಚಾರಣೆಯನ್ನು ಅಂತ್ಯ ಮಾಡಿ ತೀರ್ಪು ಕಾಯ್ದಿರಿಸಲಾಗಿತ್ತು.
ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಜಿತೇಂದ್ರ ಕುಮಾರ್ ಸಿನ್ಹಾ ಅವರು ಕೊಲೆ, ಕೊಲೆ ಯತ್ನ ಮತ್ತು ವಿರೂಪಗೊಳಿಸುವ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಸ್ಫೋಟಕ ಕಾಯ್ದೆಯಡಿಯಲ್ಲಿ ದಾಖಲಿಸಲಾದ ಎರಡು ಪ್ರಕರಣಗಳಲ್ಲಿ ವಲಿಯುಲ್ಲಾನನ್ನು ದೋಷಿ ಎಂದು ಘೋಷಿಸಿದ್ದರು ಎಂದು ಜಿಲ್ಲಾ ಸರ್ಕಾರಿ ವಕೀಲ ರಾಜೇಶ್ ಶರ್ಮಾ ತಿಳಿಸಿದ್ದಾರೆ.. ಒಂದು ಪ್ರಕರಣದಲ್ಲಿ ಅಸಮರ್ಪಕ ಸಾಕ್ಷ್ಯಾಧಾರಗಳಿಂದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ ಎಂದು ತಿಳಿಸಿದ್ದರು.
2006ರ ಮಾರ್ಚ್ 7 ರಂದು ವಾರಣಾಸಿಯ ಸಂಕಟಮೋಚನ ದೇವಾಲಯ, ರೈಲ್ವೇ ಕ್ಯಾಂಟೀನ್ ನಲ್ಲಿ ಸ್ಪೋಟಗಳು ಸಂಭವಿಸಿದ್ದವು. ಇದರಲ್ಲಿ ಒಟ್ಟು 28 ಮಂದಿ ಸಾವಿಗೀಡಾಗಿದ್ದರೆ 101 ಮಂದಿ ಗಾಯಾಳುವಾಗಿದ್ದರು. ಇದಲ್ಲದೆ, ದಶಾಶ್ವಮೇಧ ಘಾಟ್ ನಲ್ಲಿ ಕುಕ್ಕರ್ ಬಾಂಬ್ ಕೂಡ ಪತ್ತೆಯಾಗಿತ್ತು. ಹೈಕೋರ್ಟ್‌ನ ಆದೇಶದ ಮೇರೆಗೆ ಪ್ರಕರಣವನ್ನು ವಿಚಾರಣೆಗಾಗಿ ಗಾಜಿಯಾಬಾದ್‌ಗೆ ವರ್ಗಾಯಿಸಲಾಯಿತು.
ಸರಣಿ ಸ್ಫೋಟ ದಿನ ಏನೇನಾಗಿತ್ತು: 2006ರ ಮಾರ್ಚ್ 7ರ ಸಂಜೆ 6.15ಕ್ಕೆ ಲಂಕಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಸಂಕಟಮೋಚನ ದೇವಸ್ಥಾನದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದಾದ 15 ನಿಮಿಷದ ಬಳಿಕ, ವಾರಣಾಸಿ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ವಿಶ್ರಾಂತಿ ಗೃಹದಲ್ಲಿ ಸ್ಪೋಟ ಸಂಭವಿಸಿತ್ತು. ದಶಾಶ್ವಮೇಧ ಘಾಟ್ ನ ಹಳಿಯ ಬಳಿಯೂ ಕುಕ್ಕರ್ ಬಾಂಬ್ ಪತ್ತೆಯಾಗಿತ್ತು.
ಗ್ಯಾನವಾಪಿ ಮಸೀದಿ ಪ್ರಕರಣ,ವಿಚಾರಣೆ ಮುಂದೂಡಿದ ವಾರಣಾಸಿ ಕೋರ್ಟ್!
ಪ್ರಕರಣದಲ್ಲಿ ದೋಷಿಯ ಪರವಾಗಿ ವಾದಮಾಡಲು ವಾರಣಾಸಿ ಕೋರ್ಟ್ ನ ವಕೀಲರು ನಿರಾಕರಿಸಿದ್ದರು. ಕೊನೆಗೆ ಅಲಹಬಾದ್ ಹೈಕೋರ್ಟ್ ಪ್ರಕರಣರವನ್ನು ಗಾಜಿಯಾಬಾದ್ ಜಿಲ್ಲಾ ಕೋರ್ಟ್ ಗೆ ವರ್ಗಾವಣೆ ಮಾಡಿತ್ತು. ಒಟ್ಟಾರೆ 121 ಸಾಕ್ಷಿಗಳ ವಿಚಾರಣೆ ನಡೆಸಿ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಜ್ಞಾನವ್ಯಾಪಿ ಮ್ಯಾಪ್ ಬದಲಾಯಿಸಲು ಸ್ಕೂಲ್ ಮನವಿ: ಸ್ಪಷ್ಟನೆ ನೀಡಿದ ಶಾಲೆ
ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ 'ಹರ್ಕತ್-ಉಲ್-ಜೆಹಾದ್ ಅಲ್ ಇಸ್ಲಾಮಿ'ಯ ಸದಸ್ಯ ವಲೀಯುಲ್ಲಾ ಖಾನ್: ಏಪ್ರಿಲ್ 2006 ರಲ್ಲಿ, ಸ್ಫೋಟಗಳ ತನಿಖೆ ನಡೆಸುತ್ತಿದ್ದ ವಿಶೇಷ ಕಾರ್ಯಪಡೆ, ಪ್ರಮುಖ ಆರೋಪಿ ವಲಿಯುಲ್ಲಾ ಖಾನ್ ರನ್ನು ಬಂಧಿಸಿತ್ತು. ಈತ ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ 'ಹರ್ಕತ್-ಉಲ್-ಜೆಹಾದ್ ಅಲ್ ಇಸ್ಲಾಮಿ' ನೊಂದಿಗೆ ಸಂಪರ್ಕ ಹೊಂದಿದ್ದಾನೆ ಮತ್ತು ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ಎಂದೂ ತಿಳಿಸಿತ್ತು.