Vande Bharat Goods Train: ವಂದೇ ಭಾರತ ಗೂಡ್ಸ್‌ ರೈಲು ಆರಂಭಕ್ಕೆ ರೈಲ್ವೆ ನಿರ್ಧಾರ

By Kannadaprabha News  |  First Published Oct 14, 2022, 8:27 AM IST

Vande Bharat Goods Train: ಸೆಮಿ ಹೈಸ್ಪೀಡ್‌ ವಂದೇಭಾರತ್‌ ಪ್ರಯಾಣಿಕ ರೈಲು ಯಶಸ್ಸಿನ ಬೆನ್ನಲ್ಲೇ ವಂದೇಭಾರತ್‌ ಗೂಡ್ಸ್ ರೈಲು ಆರಂಭಿಸಲೂ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ


ನವದೆಹಲಿ (ಅ. 14): ಸೆಮಿ ಹೈಸ್ಪೀಡ್‌ ವಂದೇಭಾರತ್‌ ಪ್ರಯಾಣಿಕ ರೈಲು ಯಶಸ್ಸಿನ ಬೆನ್ನಲ್ಲೇ ವಂದೇಭಾರತ್‌ ಗೂಡ್ಸ್ ರೈಲು (Vande Bharat Goods Train) ಆರಂಭಿಸಲೂ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ತ್ವರಿತ ಸರಕು ಸಾಗಣೆ ಉದ್ದೇಶದಿಂದ ರೈಲನ್ನು ಆರಂಭಿಸಲಾಗುತ್ತಿದ್ದು, ಮೊಟ್ಟಮೊದಲ ಗೂಡ್ಸ್‌ ರೈಲು ದೆಹಲಿ-ಎನ್‌ಸಿಆರ್‌ನಿಂದ (Delhi NCR) ಮತ್ತು ಮುಂಬೈ (Mumbai) ನಡುವೆ ಸಂಚರಿಸಲಿದೆ. ವರ್ಷಾಂತ್ಯಕ್ಕೆ ಸೇವೆ ಆರಂಭದ ನಿರೀಕ್ಷೆಯಿದೆ.

‘ಮೌಲ್ಯಯುತವಾದ ಹಾಗೂ ಅಲ್ಪಾವಧಿಯಲ್ಲಿ ಸಾಗಿಸಬೇಕಾಗುವ ಸರಕುಗಳ ಸಾಗಾಣಿಕೆಗೆ ಈ ರೈಲುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರೇಲ್ವೆ ಮಂಡಳಿಯು ಅ.11 ರಂದು ವಲಯ ರೇಲ್ವೆಗಳ ವ್ಯವಸ್ಥಾಪಕರಿಗೆ ಬರೆದ ಪತ್ರದಲ್ಲಿ ತಿಳಿಸಿದೆ. ವಂದೇ ಭಾರತ ಗೂಡ್‌್ಸ ರೈಲು, ಸರಕುಗಳನ್ನು ಪ್ರತಿ ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಾಗಿಸಲಿದೆ. 264 ಟನ್‌ ತೂಕದ ಸರಕಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಗೂಡ್‌್ಸ ರೈಲು ಡಿಸೆಂಬರ್‌ನಿಂದ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ’ಎಂದು ಮೂಲಗಳು ತಿಳಿಸಿವೆ.

Tap to resize

Latest Videos

4ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮೋದಿ ಚಾಲನೆ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಬುಧವಾರ ನಾಲ್ಕನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ಹಿಮಾಚಲ ಪ್ರದೇಶದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.  ಹಿಮಾಚಲ ಪ್ರದೇಶದ ಅಂಬ್‌ ಅಂಡೌರಾದಿಂದ ದೆಹಲಿಗೆ ವಂದೇ ಭಾರತ್‌ ರೈಲು ಪ್ರಯಾಣಿಸಲಿದೆ. ಇದು ಮೊದಲ ಮೂರು ರೈಲಿಗಿಂತ ಉನ್ನತ ಗುಣಮಟ್ಟದ್ದಾಗಿರಲಿದ್ದು, ಗಂಟೆಗೆ 100 ಕಿ.ಮಿ ವೇಗದಲ್ಲಿ ಚಲಿಸಲಿದೆ. ಚಂಡೀಗಢ ಮಾರ್ಗವಾಗಿ ಸಂಚರಿಸುವ ಈ ರೈಲಿನಿಂದ ಚಂಡೀಗಢ-ದಿಲ್ಲಿ ಪ್ರಯಾಣದ ಅವಧಿ 3 ತಾಸಿಗಿಂತ ಕಮ್ಮಿ ಆಗಲಿದೆ.

ಮಾರ್ಚ್‌ಗೆ ಧಾರವಾಡ-ಬೆಂಗ್ಳೂರು ವಂದೇ ಭಾರತ್‌ ರೈಲು: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌

ಅಲ್ಲದೇ ಮೋದಿ, 1900 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಔಷಧ ಪಾರ್ಕ್ನ ಅಡಿಗಲ್ಲು ಸಮಾರಂಭ ನೆರವೇರಿಸಿದರು. ಇದರಿಂದ 20000 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ನಂತರ ಛಂಬಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕ 270 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಬಲ್ಲ 48 ಮೆಗಾ ವ್ಯಾಟ್‌ನ ಚಾಂಜು ಹೈಡ್ರೋ ಎಲೆಕ್ಟ್ರಿಕಲ್‌ ಯೋಜನೆ ಹಾಗೂ 30 ಮೆಗಾವ್ಯಾಟ್‌ನ ಡಿಯೋಥಾಲ್‌ ಚಾಂಜು ಹೈಡ್ರೋ ಎಲೆಕ್ಟ್ರಿಕಲ್‌ ಯೋಜನೆಗೆ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು. ಈ ಯೋಜನೆಗಳಿಂದ ಹಿಮಾಚಲ ಪ್ರದೇಶ ವಾರ್ಷಿಕ 110 ಕೋಟಿ ಆದಾಯ ಗಳಿಸಲಿದೆ. ನಂತರ ಮೋದಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೊಜನೆಯನ್ನು ಉದ್ಘಾಟಿಸಿದರು. ಈ ವರ್ಷದ ಕೊನೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

click me!