ಲಸಿಕೆ ಪಡೆದವರಿಗೆ ನೆಮ್ಮದಿಯ ಸುದ್ದಿ ಕೊಟ್ಟ ಕೇಂದ್ರ!

By Suvarna NewsFirst Published Jun 19, 2021, 8:38 AM IST
Highlights

* ಲಸಿಕೆ ಪಡೆದವರಿಗೆ ಅಪಾಯ ಕಮ್ಮಿ

* ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.80ರಷ್ಟುಕಡಿಮೆ

* ಕೇವಲ ಶೇ.8 ಜನರಿಗೆ ಆಕ್ಸಿಜನ್‌ ಅಗತ್ಯ

* ಕೊರೋನಾ ವಿರುದ್ಧ ಲಸಿಕೆಯಿಂದ ಶೇ.94ರಷ್ಟು ರಕ್ಷಣೆ

ನವದೆಹಲಿ(ಜೂ.19): ಕೊರೋನಾ ವೈರಸ್‌ ವಿರುದ್ಧ ಲಸಿಕೆಗಳು ಶೇ.94ರಷ್ಟುರಕ್ಷಣೆ ನೀಡಲಿವೆ. ಲಸಿಕೆ ಪಡೆದವರಿಗೆ ಕೊರೋನಾ ಬಂದರೂ ಅವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.75ರಿಂದ 80ರಷ್ಟುಕಡಿಮೆ ಎಂಬುದು ಸಾಬೀತಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಶುಕ್ರವಾರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ.ಪೌಲ್‌ ಈ ಮಾಹಿತಿ ನೀಡಿದರು. ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆಯ ಪರಿಣಾಮವನ್ನು ಅಧ್ಯಯನ ನಡೆಸಿದ ವೇಳೆ ಲಸಿಕೆ ಪಡೆದವರ ಪೈಕಿ ಶೇ.8ರಷ್ಟುಮಂದಿಗೆ ಮಾತ್ರ ಆಮ್ಲಜನಕದ ಅಗತ್ಯತೆ ಉಂಟಾಗಬಹುದಾದ ಮತ್ತು ಶೇ.8ರಷ್ಟುಮಂದಿಗೆ ಶೇ.6ರಷ್ಟುಮಂದಿ ಐಸಿಯುಗೆ ದಾಖಲಾಗಬಹುದಾದ ಸಾಧ್ಯತೆ ಕಂಡುಬಂದಿದೆ ಎಂದು ಹೇಳಿದರು.

Latest Videos

ಇದೇ ವೇಳೆ, 2ನೇ ಅಲೆಯ ಶೇ.85ರಷ್ಟುಪ್ರಕರಣಗಳು ಮೇ 7ರಂದೇ ತುತ್ತತುದಿಯನ್ನು ತಲುಪಿದ್ದು, ದೈನಂದಿನ ಪ್ರಕರಣಗಳು ಕಳೆದ ವಾರದಲ್ಲಿ ಸರಾಸರಿ ಶೇ.30ರಷ್ಟುಇಳಿಕೆ ಆಗಿದೆ. 513 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಮ್ಮಿ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

click me!