ಮಗನ ಜೊತೆ ಸೇರಿ ಬಿಜೆಪಿಗೆ ಶಾಕ್ ಕೊಟ್ಟ ಸಚಿವ, ಸಿಎಂ ಓಲೈಕೆಗೂ ಡೋಂಟ್‌ ಕೇರ್!

Published : Oct 11, 2021, 02:33 PM ISTUpdated : Oct 11, 2021, 02:34 PM IST
ಮಗನ ಜೊತೆ ಸೇರಿ ಬಿಜೆಪಿಗೆ ಶಾಕ್ ಕೊಟ್ಟ ಸಚಿವ, ಸಿಎಂ ಓಲೈಕೆಗೂ ಡೋಂಟ್‌ ಕೇರ್!

ಸಾರಾಂಶ

* ಉತ್ತರಾಖಂಡ್ ಚುನಾವಣೆಗೂ ಮುನ್ನ ಬಿಜೆಪಿಗೆ ಬಿಗ್ ಶಾಕ್ * ತನ್ನ ಪುತ್ರನೊಂದಿಗೆ ಕಾಂಗ್ರೆಸ್‌ ಸೇರ್ಪಡೆಯಾದ ಸಚಿವ * ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಸೇರಿದ್ದ ಯಶ್‌ಪಾಲ್ ಆರ್ಯ

ಡೆಹ್ರಾಡೂನಗ್(ಆ.11) ಲೋಕಸಭೆ ಅಥವಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ರಾಜಕೀಯ ಪಕ್ಷಗಳು ಇತರ ಪಕ್ಷದ ನಾಯಕರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿರುತ್ತಾರೆ. ಇನ್ನು ಇತ್ತ ಪಕ್ಷದ ಬಗ್ಗೆ ಅಸಮಾಧಾನ ಹೊಂದಿರುವ ನಾಯಕರು ಈ ಅವಕಾಶ ಬಳಸಿ, ರಾಜೀನಾಮೆ ನೀಡಿ ಬೇರೆ ಪಕ್ಷದ ಹಾದಿ ಹಿಡಿಯುತ್ತಾರೆ. ಸದ್ಯಕ್ಕೀಗ ಉತ್ತರಾಖಂಡ ವಿಧಾನಸಭೆ ಚುನಾವಣೆಗೂ(Uttarakhand Assembly Elections) ಮುನ್ನ ಬಿಜೆಪಿಗೆ ಬಹುದೊಡ್ಡ ಆಘಾತಕಾರಿ ಸುದ್ದಿ ಸಿಕ್ಕಿದೆ. ಹೌದು ಇಲ್ಲಿನ ರಾಜ್ಯ ಸಾರಿಗೆ ಸಚಿವ ಯಶಪಾಲ್ ಆರ್ಯ(Yashpal Arya) ಮತ್ತು ಪುತ್ರ ಸಂಜೀವ್ ಆರ್ಯ(Sanjeev Arya) ದೆಹಲಿಯಲ್ಲಿ(Delhi) ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಚುನಾವಣೆಗೂ ಮುನ್ನ ಪಕ್ಷ ಬದಲಾವಣೆಯಿಂದ ಆಶ್ಚರ್ಯ

ವಾಸ್ತವವಾಗಿ, ಉತ್ತರಾಖಂಡ್ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿದ್ದ ಯಶಪಾಲ್ ಆರ್ಯ ಕಾಂಗ್ರೆಸ್ ಸೇರುವ ಮುನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಬಳಿಕ ತಂದೆ ಮತ್ತು ಮಗ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ(Randeep Surjewala) ಮತ್ತು ರಾಜ್ಯ ಉಸ್ತುವಾರಿ ದೇವೇಂದ್ರ ಯಾದವ್(Devendra yadav) ಅವರ ಸಮ್ಮುಖದಲ್ಲಿ 11 ಗಂಟೆಗೆ ದೆಹಲಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ವೇಳೆ ಉತ್ತರಾಖಂಡ್‌ನ ರಾಜ್ಯದ ಮಾಜಿ ಸಿಎಂ ಹರೀಶ್ ರಾವತ್ ಕೂಡ ಹಾಜರಿದ್ದರು.

ಸಿಎಂ ಓಲೈಕೆಗೂ ಮಣಿಯಲಿಲ್ಲ

ಮಾಧ್ಯಮ ವರದಿಗಳ ಪ್ರಕಾರ, ಯಶಪಾಲ್ ಆರ್ಯ ಭಾರತೀಯ ಜನತಾ ಪಕ್ಷದ ನಾಯಕರ ಮೇಲೆ ಕೋಪಗೊಂಡಿದ್ದಾರೆನ್ನಲಾಗಿದೆ. ಇಲ್ಲದೇ, ಕೆಲವು ದಿನಗಳ ಹಿಂದೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ(Pushkar Singh Dhami) ಆರ್ಯರನ್ನು ಭೇಟಿಯಾಗಿ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಸಿಎಂ ಅವರ ಈ ಕಠಿಣ ಪರಿಶ್ರಮವೂ ಕೆಲಸ ಮಾಡಲಿಲ್ಲ.

ಕಾಂಗ್ರೆಸ್‌ಗೆ ಮರಳಿದ ಸಚಿವ ಹಾಗೂ ಅವರ ಪುತ್ರ

ಯಶಪಾಲ್ ಆರ್ಯ ಮತ್ತು ಅವರ ಪುತ್ರ ಸಂಜೀವ್ ಆರ್ಯ ಅವರು ನಾಲ್ಕು ವರ್ಷಗಳ ಹಿಂದೆ 2017 ರಲ್ಲಿ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು ಎಂಬುವುದು ಉಲ್ಲೇಖನೀಯ. ಇತ್ತೀಚೆಗೆ, ಪುಷ್ಕರ್ ಸಿಂಗ್ ಧಾಮಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದಾಗ, ಯಶಪಾಲ್ ಆರ್ಯ ಅವರನ್ನು ಕ್ಯಾಬಿನೆಟ್ ಮಂತ್ರಿಯನ್ನಾಗಿ ಮಾಡಲಾಗಿತ್ತು ಆದರೆ ಈಗ ನಾಲ್ಕು ತಿಂಗಳ ನಂತರ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದಕ್ಕೂ ಮುನ್ನ, ಅವರು ಕಾಂಗ್ರೆಸ್ ಸೇರುವ ಮೂಲಕ ಘರ್‌ ವಾಪ್ಸಿ ಮಾಡಿದ್ದಾರೆ

6 ಇಲಾಖೆಗಳನ್ನು ನಿರ್ವಹಿಸಿ ಬಳಿಕವೂ ಪಕ್ಷವನ್ನು ತೊರೆದರು

ಯಶಪಾಲ್ ಆರ್ಯ ಅವರು ಉತ್ತರಾಖಂಡ ಸರ್ಕಾರದಲ್ಲಿ ಸಚಿವರಾಗಿದ್ದಾಗ ಆರು ಇಲಾಖೆಗಳ ಜವಾಬ್ದಾರಿಯನ್ನು ಹೊಂದಿದ್ದರು. ಅವರು ಸಾರಿಗೆ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ವಿದ್ಯಾರ್ಥಿಗಳ ಕಲ್ಯಾಣ, ಚುನಾವಣೆ ಮತ್ತು ಅಬಕಾರಿ ಇಲಾಖೆಯನ್ನು ನಿರ್ವಹಿಸುತ್ತಿದ್ದರು. ಅವರು ಬಾಜಪುರ ವಿಧಾನಸಭೆಯಿಂದ ಶಾಸಕರಾಗಿದ್ದರೆ, ಅವರ ಮಗ ನೈನಿತಾಲ್ ಕ್ಷೇತ್ರದಿಂದ ಶಾಸಕರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ