ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಜೋಶೀಮಠದ ಬಳಿ ಸಿಡಿದ ಹಿಮಗಡ್ಡೆ| ಉಕ್ಕಿ ಹರಿಯುತ್ತಿರುವ ನೀರು| ಋಷಿ ಗಂಗಾ ಅಣೆಕಟ್ಟು ಧ್ವಂಸ|
ಡೆಹ್ರಾಡೂನ್(ಫೆ.07): ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಜೋಶೀಮಠದ ಬಳಿ ಭಾನುವಾರ ಬೆಳಗ್ಗೆ ಹಿಮಗಡ್ಡೆ ಸಿಡಿದ ಪರಿಣಾಮ ಜಲಪ್ರಳಯ ಎದುರಾಗಿದೆ. ನೀರು ಉಕ್ಕಿ ಹರಿಯುತ್ತಿದ್ದು ಋಷಿ ಗಂಗಾ ಅಣೆಕಟ್ಟು ಧ್ವಂಸಗೊಂಡಿದೆ. ನೀರು ರಭಸವಾಗಿ ಹರಿಯುತ್ತಿದ್ದು, ಹರಿದ್ವಾರ, ಕೇದಾರನಾಥ ಹಾಗೂ ಬದ್ರೀನಾಥದವರೆಗೆ ಅಲರ್ಟ್ ಜಾರಿಗೊಳಿಸಲಾಗಿದೆ. ನೀರಿನ ರಭಸಕ್ಕೆ 'ವಿಷ್ಣು ಪ್ರಯಾಗ್' ಹೈಡ್ರೋ ಪವರ್ ಯೂನಿಟ್‌ಗೆ ಹಾನಿಯುಂಟಾಗಿದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.
undefined
ನದಿ ತಟದಲ್ಲಿರುವ ಜನರನ್ನು ಸುರಕ್ಷಿತ ತಾಣಗಳಿಗೆ ರವಾನಿಸಲಾಗುತ್ತಿದೆ. ಈ ಘಟನೆ ಬೆಳಗ್ಗೆ ಸುಮಾರು 10.30ಗಂಟೆಗೆ ಸಂಭವಿಸಿದೆ. ಈಗಾಗಲೇ ಎಲ್ಲಾ ಕಡೆ ಎಚ್ಚರಿಕೆ ರವಾನಿಸಲಾಗಿದ್ದು, ಶ್ರೀನಗರ ಜಲವಿದ್ಯುತ್ ಯೋಜನೆಯ ಸರೋವರದ ನೀರಿನ ಮಟ್ಟ ಇಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ಅಲಕಾನಂದ ನದಿಯ ನೀರಿನ ಮಟ್ಟ ಹೆಚ್ಚಿದರೆ ನೀರು ಬಿಡಲು ಯಾವುದೇ ಸಮಸ್ಯೆಯಾಗದಿರಲಿ ಎಂಬ ನಿಟ್ಟಿನಲ್ಲಿ ಈ ಸೂಚನೆ ನಿಡಲಾಗಿದೆ.
ವದಂತಿಗಳಿಂದ ದೂರವಿರಿ ಎಂದ ಸಿಎಂ
ಈ ನಡುವೆ ಉತ್ತರಾಖಂಡ್‌ನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಟ್‌ವೀಟ್ ಮಾಡುತ್ತಾ ಜನರು ಯಾವುದೇ ವದಂತಿಗಳಿಗಗೆ ಕಿವಿಗೊಡಬೇಡಿ. ಆಡಳಿತಾಧಿಕಾರಿಗಳಿಗೆ ಎಲ್ಲಾ ರೀತಿಯ ಸೂಚನೆ ರವಾನಿಸಲಾಗಿದೆ ಎಂದಿದ್ದಾರೆ. ಈ ನೀರು ಸುಮಾರು 250 ಕಿ. ಮೀ ದೂದವರೆಗೆ ಹರಿಯುವ ನಿರೀಕ್ಷೆ ಇದೆ. ಇದರಿಂದ ಎಷ್ಟು ನಷ್ಟ ಸಂಭವಿಸಬಹುದೆಂದು ಅಂದಾಜಿಸಲು ಒಈಗ ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.