ಇದು ಉತ್ತರ ಪ್ರದೇಶ, ಮಹಿಳಾ ಪೊಲೀಸರಿಂದ ದೇಶದಲ್ಲೇ ಮೊದಲ ಎನ್‌ಕೌಂಟರ್

Published : Sep 23, 2025, 03:34 PM IST
UP Woman Police

ಸಾರಾಂಶ

ಇದು ಉತ್ತರ ಪ್ರದೇಶದ,ಮಹಿಳಾ ಪೊಲೀಸರಿಂದ ದೇಶದಲ್ಲೇ ಮೊದಲ ಎನ್‌ಕೌಂಟರ್, ಕುಖ್ಯಾತ ಕ್ರಿಮಿನಲ್ ವಿರುದ್ಧ ಮಹಿಳಾ ಪೊಲೀಸರು ಗುಂಡಿನ ಚಕಮಕಿ ನಡೆಸಿದ್ದಾರೆ. ಈ ಮೂಲಕ ಯುಪಿ ಮಹಿಳಾ ಪೊಲೀಸರು ಹೊಸ ಇತಿಹಾಸ ರಚಿಸಿದ್ದಾರೆ.

ಘಾಝಿಯಾಬಾದ್ (ಸೆ.23) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಅತೀ ಹೆಚ್ಚು ಎನ್‌ಕೌಂಟರ್ ನಡೆದಿದೆ. ಗ್ಯಾಂಗ್‌ಸ್ಟರ್, ರೌಡಿಗಳು ಸೇರಿದಂತೆ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಯೋಗಿ ಸರ್ಕಾರ ಶೂನ್ಯ ಸಹಿಷ್ಣುತೆ ತೋರಿದ್ದಾರೆ. ಕ್ರಿಮಿನಲ್ ಅದೆಷ್ಟೇ ವೀರನಾಗಿದ್ದರೂ ಯುಪಿ ಪೊಲೀಸರು ಬುಲೆಟ್ ಗುರಿಯಿಟ್ಟು ಕತೆ ಮುಗಿಸಿದ್ದಾರೆ. ಇದೀಗ ಇದೇ ಉತ್ತರ ಪ್ರದೇಶದಲ್ಲಿ ಮಹಿಳಾ ಪೊಲೀಸರ ತಂಡ ದೇಶದಲ್ಲೇ ಮೊದಲ ಎನ್‌ಕೌಂಟರ್ ನಡೆಸಿದೆ. ಈ ಮೂಲಕ ಕ್ರಿಮಿನಲ್‌ನ ಬಂಧಿಸಿದ ಘಟನೆ ನಡೆದಿದೆ.

ಪೊಲೀಸರ ಮೇಲೆ ಗುಂಡು ಹಾರಿಸಿದ ಕ್ರಿಮಿನಲ್

ಯುಪಿಯ ಘಾಝಿಯಾಬಾದ್‌ನಲ್ಲಿ ಮಹಿಳಾ ಪೊಲೀಸರ ತಂಡ ಎನ್‌ಕೌಂಟರ್ ನಡೆಸಿದೆ. ಚೆಕ್ ಪಾಯಿಂಟ್‌ನಲ್ಲಿದ್ದ ಮಹಿಳಾ ಪೊಲೀಸರಿಗೆ ಇದೇ ಚೆಕ್ ಪಾಯಿಂಟ್ ಮೂಲಕ ಕ್ರಿಮಿನಲ್ ಜಿತೇಂದ್ರ ಸಾಗುತ್ತಿರುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಹಿಳಾ ಪೊಲೀಸರ ತಂಡ ಜಿತೇಂದ್ರನ ಹಿಡಿಯಲು ಸಜ್ಜಾಗಿದ್ದರು. ಚೆಕ್ ಪೋಸ್ಟ್ ಬಳಿ ಜಿತೇಂದ್ರ ಸ್ಕೂಟರ್ ಮೂಲಕ ಬರುತ್ತಿದ್ದಂತೆ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಜಿತೇಂದ್ರ ಸ್ಕೂಟರ್ ನಿಲ್ಲಿಸದೆ ತೆರಳುವ ಪ್ರಯತ್ನ ಮಾಡಿದ್ದಾನೆ. ಬ್ಯಾರಿಕೇಡ್ ಹಾಕುತ್ತಿದ್ದಂತೆ ಸ್ಕೂಟರ್‌ಗೆ ಬಡಿದಿದೆ. ಇತ್ತ ನಿಯಂತ್ರಣ ಕಳೆದುಕೊಂಡ ಕ್ರಿಮಿನಲ್ ಜಿತೇಂದ್ರ ನೆಲಕ್ಕೆ ಬಿದ್ದಿದ್ದಾನೆ.

ಸರೆಂಡರ್ ಆಗಲೂ ಸೂಚಿಸಿದ ಪೊಲೀಸ್

ಜಿತೇಂದ್ರ ಸ್ಥಳದಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆದರೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೆನ್ನಲ್ಲೇ ಪೊಲೀಸರು ಶರಣಾಗಲು ಸೂಚಿಸಿದ್ದಾರೆ. ಶರಣಾದರೆ ಒಳಿತು, ಇನ್ನು ತಪ್ಪಿಸಿಕೊಳ್ಳುವ ಯಾವುದೇ ಪ್ರಯತ್ನ ಉತ್ತಮವಲ್ಲ ಎಂದು ಮಹಿಳಾ ಪೊಲೀಸರು ಸೂಚಿಸಿದ್ದಾರೆ. ಆದರೆ ಆರಂಭದಲ್ಲಿ ತೀವ್ರವಾಗಿ ಗಾಯಗೊಂಡಂತೆ ನಟಿಸಿದ ಕ್ರಿಮಿನಲ್ ಜಿತೇಂದ್ರ, ಕೆಲ ಹೊತ್ತು ರಸ್ತೆಯಲ್ಲೇ ಮಲಗಿದ್ದಾನೆ. ಪೊಲೀಸರು ಸುತ್ತುವರಿಯಲು ಹೋಗುತ್ತಿದ್ದಂತೆ ಗುಂಡಿನ ದಾಳಿಗೆ ಮುಂದಾಗಿದ್ದಾನೆ.

ಪೊಲೀಸರ ಮೇಲೆ ಗುಂಡಿನ ದಾಳಿ

ನೆಲಕ್ಕೆ ಬಿದ್ದ ಜಿತೇಂದ್ರ ಪೊಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಮೊದಲೆ ಎಲ್ಲಾ ಪರಿಸ್ಥಿತಿಗೂ ಸಜ್ಜಾಗಿದ್ದ ಮಹಿಳಾ ಪೊಲೀಸರು ತಕ್ಷಣವೇ ಪ್ರತಿದಾಳಿ ನಡೆಸಿದ್ದಾರೆ. ನೆಲಕ್ಕೆ ಬಿದ್ದ ಬೆನ್ನಲ್ಲೇ ರಿವಾಲ್ವರ್ ತೆಗೆದು ದಾಳಿ ಆರಂಭಿಸಿದ ಜಿತೇಂದ್ರನ ಮೇಲೆ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಜಿತೇಂದ್ರನ ಮೊಣಕಾಲಿನ ಕೆಳಗೆ ಗುಂಡಿನ ದಾಳಿ ನಡೆಸಿದ್ದಾರೆ. ಎರಡೂ ಕಾಲಿಗೆ ಗುಂಡಿನ ಮಳೆ ಸುರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಜಿತೇಂದ್ರನಿ ಕುಸಿದು ಬಿದ್ದಿದ್ದಾನೆ. ಮಹಿಳಾ ಪೊಲೀಸರ ತಂಡ, ಜಿತೇಂದ್ರನಿಂದ ರಿವಾಲ್ವರ್ ಕಸಿದು, ಬಂಧಿಸಿದ್ದಾರೆ.

ಜಿತೇಂದ್ರನ ಬಳಿಯಿಂದ ಪಿಸ್ತೂಲ್, ಸ್ಕೂಟರ್‌ನಲ್ಲಿ ಇಟ್ಟಿದ್ದು ಟ್ಯಾಬ್, ಸ್ಮಾರ್ಟ್‌ಫೋನ್ ವಶಕ್ಕೆ ಪಡೆಯಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..