
ಲಖನೌ(ಮೇ.31) ಕಾನೂನು ನಿರ್ವಹಣೆ, ಬುಲ್ಡೋಜರ್, ಗ್ಯಾಂಗ್‌ಸ್ಟರ್‌ಗೆ ಅದೇ ಭಾಷೆಯಲ್ಲಿ ಉತ್ತರ ನೀಡುವ ಮೂಲಕ ಭಾರಿ ಸದ್ದು ಮಾಡುತ್ತಿದ್ದ ಉತ್ತರ ಪ್ರದೇಶದಲ್ಲಿ ಇದೀಗ ಕಾಮಕಾಂಡ ಕೋಲಾಹಲ ಸೃಷ್ಟಿಸಿದೆ. ಮಣಿಪುರಿ ಜಿಲ್ಲೆಯ ಮಹಿಳಾ ಬಿಜೆಪಿ ಅಧ್ಯಕ್ಷೆ ಸೀಮಾ ಗುಪ್ತಾ ಪುತ್ರ ಶುಭಂ ಗುಪ್ತಾ ಅಶ್ಲೀಲ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬರೋಬ್ಬರಿ 130 ವಿಡಿಯೋಗಳು ವೈರಲ್ ಆಗಿದೆ. ಹಲವು ಯುವತಿಯರ ಜೊತೆಗಿನ ಈ ವಿಡಿಯೋ ಉತ್ತರ ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ.
ಪತಿಯ ಕಾಮಕಾಂಡ ಬಯಲು
ಶುಭಂ ಗುಪ್ತಾ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಆದರೆ ಸಂಬಂಧ ಹಳಸಿತ್ತು. ಪತ್ನಿ ಜೊತೆ ಸದಾ ಜಗಳವಾಡುತ್ತಿದ್ದ ಶುಭಂ ಗುಪ್ತ ಕಾಟ ತಾಳಲಾರದೇ ಇದೀಗ ಪತ್ನಿಯೇ ಪತಿ ಶುಭಂ ವಿರುದ್ದ ತಿರುಗಿ ಬಿದ್ದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪತ್ನಿ ಮೇಲೆ ಹಲ್ಲೆ, ಕಿರುಕುಳ ನೀಡುತ್ತಿದ್ದ ಶುಭಂ ಗುಪ್ತ, ಇತ್ತೀಚೆಗೆ ಪತ್ನಿಗೆ ಸಿಗರೇಟಿನಿಂದ ಸುಟ್ಟಿದ್ದ. ಈ ಕುರಿತು ಪತ್ನಿ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಳು. ಆದರೆ ಬಿಜೆಪಿ ನಾಯಕಿ ಪುತ್ರನಾಗಿದ್ದ ಕಾರಣ ಈ ವಿಚಾರ ಎಲ್ಲೂ ಬಹಿರಂಗವಾಲೇ ಇಲ್ಲ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಅನ್ನೋ ಮಾಹಿತಿಯೂ ಬಯಲಾಗಿದೆ.
ಪತ್ನಿಗೆ ಬಲವಂತವಾಗಿ ವಿಡಿಯೋ ತೋರಿಸಿದ್ದ ಶುಭಂ ಗುಪ್ತ
ಕಳೆದ ಹಲವು ದಿನಗಳಿಂದ ಪತ್ನಿಗೆ ತನ್ನ ಸಾಹಸ ಪ್ರದರ್ಶನದ ವಿಡಿಯೋನ್ನು ಬಲವಂತವಾಗಿ ಪತ್ನಿಗೆ ತೋರಿಸಿದ್ದ ಎಂದು ಪತ್ನಿ ಆರೋಪಿಸಿದ್ದಾಳೆ. ಮಾನಸಿಕ ಕಿರುಕುಳ ನೀಡಲು ಈ ಅಶ್ಲೀಲ ವಿಡಿಯೋಗಳನ್ನು ಬಲವಂತವಾಗಿ ತೋರಿಸುತ್ತಿದ್ದ. ಈ ಮೂಲಕ ಆತನಿಂದ ದೂರವಾಗಲು ಹಾಗೂ ಮಾಸಸಿಕ ಹಿಂಸ ಅನುಭವಿಸುವಂತೆ ಮಾಡಿದ್ದ. ಪತಿಗೆ ರಾಜಕೀಯ ಹಿನ್ನಲೆ ಇರುವ ಕಾರಣ ನನ್ನ ಹೋರಾಟ, ದೂರು ಯಾವುದು ಮಾನ್ಯವಾಗಲಿಲ್ಲ ಎಂದು ಪತ್ನಿ ಆರೋಪಿಸಿದ್ದಾಳೆ.
ಪತ್ನಿ ಹಾಗೂ ಪತಿ ನಡವಿನ ಗಲಾಟೆ ಬಹಿರಂಗವಾದ ಬೆನ್ನಲ್ಲೇ ಈತನ 130 ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಪತಿ ಬೇರೊಬ್ಬಳ ಜೊತೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದ ಎಂದು ದೂರಿದ್ದಾಳೆ. ಗರ್ಲ್‌ಫ್ರೆಂಡ್ ಜೊತೆಗಿರುವ ವಿಡಿಯೋಗಳನ್ನು ಪತ್ನಿಗೆ ತೋರಿಸಿ ಕಿರುಕುಳ ನೀಡಿದ್ದ. ಇದೀಗ ದಿಢೀರ್ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಹೇಗೆ ಅನ್ನೋ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಶುಭಂ ಗುಪ್ತ ಹೊಸ ಗರ್ಲ್‌ಫ್ರೆಂಡ್ ಈ ವಿಡಿಯೋ ಹರಿಬಿಟ್ಟಿದ್ದಾಳೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಮಹಿಳಾ ನಾಯಕಿ ನಾಟ್ ರೀಚೆಬಲ್
ಬಿಜೆಪಿ ಜಿಲ್ಲಾ ಅಧ್ಯೆಕ್ಷೆ ಸೀಮಾ ಗುಪ್ತ ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ನಾಟ್ ರೀಚೆಬಲ್ ಆಗಿದ್ದಾರೆ. ಫೋನ್‌ಗೆ ಸಿಗುತ್ತಿಲ್ಲ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇತ್ತ ಶುಭಂ ಗುಪ್ತ ನಾಪತ್ತೆಯಾಗಿದ್ದಾನೆ. ಇದೀಗ ಶುಭಂ ಗುಪ್ತ ಪತ್ನಿ ಮಾಧ್ಯಮಕ್ಕೆ ತನ್ನ ಅಳಲು ತೋಡಿಕೊಂಡಿದ್ದಾಳೆ.
ರಾಜಕೀಯ ಸಂಚಲನ ಸೃಷ್ಟಿಸಿದ ವಿಡಿಯೋ
ಈ ಘಟನೆ ಸಂಬಂಧ ಮಣಿಪುರಿ ಜಿಲ್ಲಾ ಬಿಜೆಪಿ ಮೌನಕ್ಕೆ ಜಾರಿದೆ. ಆದರೆ ಸಮಾಜವಾದಿ ಪಾರ್ಟಿ, ಕಾಂಗ್ರೆಸ್, ಬಹುಜನ್ ಸಮಾಜ್ ಪಾರ್ಟಿ ಸೇರಿದಂತೆ ವಿಪಕ್ಷಗಳ ಆಡಳಿತ ಪಕ್ಷವನ್ನು ಟಾರ್ಗೆಟ್ ಮಾಡಿದೆ. ಬಿಜೆಪಿ ನಾಯಕರ ಮುಖವಾಡ ಕಳಚುತ್ತಿದೆ. ಇದು ಸಭ್ಯ, ಶಿಸ್ತಿನ ನಾಯಕರ ಅಸಲಿ ಮುಖ ಎಂದು ಸಮಾಜವಾದಿ ಪಾರ್ಟಿ ಜಿಲ್ಲಾಧ್ಯಕ್ಷ ಅಲೋಕ್ ಶಾಖ್ಯ ಪ್ರತಿಕ್ರಿಯಿಸಿದ್ದಾರೆ. ಇದೀಗ ರಾಜಕೀಯ ಹೋರಾಟಕ್ಕೂ ವೇದಿಕೆಯಾಗಿದೆ. ಬಿಜೆಪಿ ವಿರುದ್ದ ವಿಪಕ್ಷ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ನಾಯಕರು ಅಧಿಕಾರ ಬಳಸಿ ಹೆಣ್ಣುಮಕ್ಕಳ ಶೋಷಣೆ ಮಾಡುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ