ಸ್ಮಶಾನದ ಪೊದೆಯಲ್ಲಿ ಕಾರ್; ಜನರನ್ನ ನೋಡ್ತಿದ್ದಂತೆ ಚಡ್ಡಿ ಸರಿ ಮಾಡಿಕೊಳ್ಳುತ್ತಾ ಬಂದ BJP ನಾಯಕ

Published : Jul 12, 2025, 06:57 PM ISTUpdated : Jul 12, 2025, 08:35 PM IST
Rahul Valmiki BJP Leader

ಸಾರಾಂಶ

ಬಿಜೆಪಿ ಮುಖಂಡ ರಾಹುಲ್ ವಾಲ್ಮೀಕಿ ವಿವಾಹಿತ ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ವಿಡಿಯೋ ವೈರಲ್ ಆಗಿದೆ.  ಕ್ಷಮೆ ಕೇಳಿರುವ ವಿಡಿಯೋ ಕೂಡ ಹರಿದಾಡುತ್ತಿದೆ. ಇದೇ ರೀತಿಯ ಘಟನೆಗಳು ಮಧ್ಯಪ್ರದೇಶದಲ್ಲೂ ವರದಿಯಾಗಿವೆ.

ಲಕ್ನೋ: ಉತ್ತರ ಪ್ರದೇಶದಿಂದ ನಾಚಿಕೆಗೇಡಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಲ್ ಅಗುತ್ತಿದೆ. ಈ ವಿಡಿಯೋದಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ವಿವಾಹಿತ ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರೋದನ್ನು ಕಾಣಬಹುದು. ಈ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಶಿಕಾರ್‌ಪುರ ಕೊತ್ವಾಲಿ ಪ್ರದೇಶದ ಕೈಲವನ್ ಗ್ರಾಮದ್ದು ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ. ಬಿಜೆಪಿ ನಾಯಕನನ್ನು ರಾಹುಲ್ ವಾಲ್ಮೀಕಿ ಎಂದು ಗುರುತಿಸಲಾಗಿದೆ.

ಜುಲೈ 11ರ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಇಂದು ಜನರ ಬಳಿ ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾ ಸಚಿವ ರಾಹುಲ್ ವಾಲ್ಮೀಕಿ ಕ್ಷಮೆ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಒಳ ಉಡುಪು ಸರಿ ಮಾಡಿಕೊಳ್ಳುತ್ತಾ ಕಾರಿನಿಂದ ಹೊರ ಬರುವ ವ್ಯಕ್ತಿ, ಅಲ್ಲಿಂದ ಜನರ ಕಾಲುಗಳನ್ನು ಮುಟ್ಟಿ ನಮಸ್ಕರಿಸಲು ಮುಂದಾಗೋದನ್ನು ವಿಡಿಯೋದಲ್ಲಿ ಕಾಣಬಹುದು. ಆ ವ್ಯಕ್ತಿ ಕಾಲಿಗೆ ನಮಸ್ಕರಿ ಕ್ಷಮೆ ಕೇಳುತ್ತಾನೆ. ಕ್ಷಮೆ ಕೇಳುತ್ತಿರುವ ವಿಡಿಯೋದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆಗಿದ್ದೇನು? ಬಿಜೆಪಿ ನಾಯಕ ರಾಹುಲ್ ವಾಲ್ಮೀಕಿ ತಗ್ಲಾಕೊಂಡಿದ್ದೇಗೆ?

ಕೈಲವನ್ ಗ್ರಾಮದ ಹೊರವಲಯದ ಸ್ಮಶಾನದ ಬಳಿ ಅನುಮಾನಸ್ಪದ ಕಾರ್ ನಿಂತಿತ್ತು. ಕಾರ್ ನೋಡಿದ ಗ್ರಾಮಸ್ಥರು ಅಲ್ಲಿ ಏನೋ ನಡೆಯುತ್ತಿದೆ ಎಂದು ನೋಡಲು ತೆರಳಿದ್ದಾರೆ. ಈ ವೇಳೆ ಮಹಿಳೆ ಜೊತೆ ರಾಹುಲ್ ವಾಲ್ಮೀಕಿ ಆಕ್ಷೇಪಾರ್ಹ ಸ್ಥಿತಿಯಲ್ಲಿರೋದನ್ನು ನೋಡಿ ವಿಡಿಯೋ ಮಾಡಿಕೊಂಡಿದ್ದರು. ಜನರನ್ನು ನೋಡಿ ಗಾಬರಿಯಾದ ರಾಹುಲ್ ವಾಲ್ಮೀಕಿ, ಅವಸರವಾಗಿ ಬಟ್ಟೆ ಧರಿಸಿಕೊಂಡು ಹೊರ ಬಂದು ವಿಡಿಯೋ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

ರಾಹುಲ್ ವಾಲ್ಮೀಕಿ ತಂದೆ ಪ್ರತಿಕ್ರಿಯೆ

ಈ ಘಟನೆ ಕುರಿತು ರಾಹುಲ್ ವಾಲ್ಮೀಕಿಯವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್ ಅಗಿರುಬವ ವಿಡಿಯೋ ಸುಮಾರು 5-6 ತಿಂಗಳ ಹಿಂದಿನಷ್ಟು ಹಳೆಯದ್ದು, ಇದು ರಾಜಕೀಯ ಪಿತೂರಿ ಎಂದು ಆರೋಪಿಸಿದ್ದಾರೆ. ಬುಲಂದ್‌ಶಹರ್ ಎಸ್‌ಪಿ (ಗ್ರಾಮೀಣ) ಡಾ. ತೇಜ್‌ವೀರ್ ಸಿಂಗ್, ವೈರಲ್ ವಿಡಿಯೋ ನಮ್ಮ ಗಮನಕ್ಕೂ ಬಂದಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ಆದರೆ ಇಲ್ಲಿಯವರೆಗೆ ಯಾವ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ. ವಿಡಿಯೋದಲ್ಲಿರೋದು ರಾಹುಲ್ ವಾಲ್ಮೀಕಿ ಅವರೇ ಎಂದು ಗುರುತಿಸಲು ಪೊಲೀಸರು ವಿಫಲವಾಗಿದ್ದಾರೆ.

 

 

ಮಧ್ಯಪ್ರದೇಶದಲ್ಲಿಯೂ ವಿಡಿಯೋ ವೈರಲ್

ಇದೇ ವರ್ಷ ಮಧ್ಯಪ್ರದೇಶದ ಸಿವ್ವಿ ಮಾಲ್ವಾದ ಹಿರಿಯ ಬಿಜೆಪಿ ನಾಯಕ ಕಮಲ್ ರಘುವಂಶಿ ಅವರದ್ದು ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಏಪ್ರಿಲ್ 29ರಂದು ನಡೆದ ಮದುವೆಯಲ್ಲಿ ನರ್ತಕಿ ಜೊತೆ ಕಮಲ್ ರಘುವಂಶಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ್ದರು. ಮದುವೆಯಲ್ಲಿ ಭಾಗಿಯಾಗಿದ್ದ ಜನರು ಕಮಲ್ ರಘುವಂಶಿಯ ವರ್ತನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಈ ಮದುವೆ ಕಾರ್ಯಕ್ರಮದಲ್ಲಿ ಸ್ಥಳೀಯ ರಾಜಕೀಯ ಮುಖಂಡರು, ಬಿಜೆಪಿಯ ಮಹಿಳಾ ನಾಯಕಿಯರು ಸಹ ಉಪಸ್ಥಿತಿಯಲ್ಲಿರೋದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಪಕ್ಷದ ನಾಯಕ ಕಮಲ್ ರಘುವಂಶಿ ನಡೆಯನ್ನು ಅಲ್ಲಿದ್ದ ಯಾವ ಮಹಿಳಾ ನಾಯಕಿಯೂ ಖಂಡಿಸಿರಲಿಲ್ಲ. ನರ್ತಕಿಯನ್ನು ತಬ್ಬಿಕೊಂಡಿದ್ದ ಕಮಲ್ ರಘುವಂತಿಯನ್ನು ಯುವತಿಯನ್ನು ಚುಂಬಿಸಿದ್ದರು.

 

 

ಕಾಂಗ್ರೆಸ್ ವಾಗ್ದಾಳಿ

ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ, ಬಿಜೆಪಿ ನಾಯಕರ ಅಮಾನವೀಯ ಕೃತ್ಯಗಳಿಂದ ದೇಶ ದಿಗ್ಭ್ರಮೆಗೊಂಡಿದೆ. ಈ ಮೊದಲು ಉತ್ತರ ಪ್ರದೇಶದ ಬಬನ್ ಸಿಂಗ್ ರಘುವಂಶಿ, ನಂತರ ಸಂಸದ ಮನೋಹರ್‌ ಲಾಲ್ ಧಾಕಡ್, ಇದೀಗ ನರ್ಮದಾಪುರಂನ ಕಮಲ್ ರಘುವಂಶಿ. ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸುವ ಪುರುಷರು ಇವರೇನಾ ಎಂದು ಸುಪ್ರಿಯಾ ಪ್ರಶ್ನೆ ಮಾಡಿ ಆಕ್ರೋಶ ಹೊರ ಹಾಕಿದ್ದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!