ಎಂಪಿ: 2 ಮಕ್ಕಳ ನೀತಿಗೆ ಬೇಡಿಕೆ; 80 ಶಾಸಕರಿಗೆ 3ಕ್ಕಿಂತ ಹೆಚ್ಚು ಮಕ್ಕಳು!

By Kannadaprabha NewsFirst Published Jul 22, 2021, 10:03 AM IST
Highlights

* ಉತ್ತರ ಪ್ರದೇಶದ ರೀತಿಯಲ್ಲಿ ಮಧ್ಯಪ್ರದೇಶದಲ್ಲಿಯೂ ಜನಸಂಖ್ಯಾ ನಿಯಂತ್ರಣಕ್ಕೆ ಬೇಡಿಕೆ

* ಹೊಸ ಕಾನೂನಿಗೆ ಬಿಜೆಪಿಯಲ್ಲಿಯೇ ಅಪಸ್ವರ

* ಮುಸ್ಲಿಮರ ವಿರುದ್ಧ ಪರೋಕ್ಷ ಅಸಮಾಧಾನ 

ಭೋಪಾಲ್‌(ಜು.22): ಉತ್ತರ ಪ್ರದೇಶದ ರೀತಿಯಲ್ಲಿ ಮಧ್ಯಪ್ರದೇಶದಲ್ಲಿಯೂ ಜನಸಂಖ್ಯಾ ನಿಯಂತ್ರಣಕ್ಕೆ ‘ನಾವಿಬ್ಬರು, ನಮಗಿಬ್ಬರು’ ಎಂಬ ನೀತಿ ಜಾರಿ ಮಾಡಬೇಕು ಎಂದು ಬಿಜೆಪಿಯ ಕೆಲವು ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಆದರೆ, ಇದಕ್ಕೆ ಬಿಜೆಪಿಯಲ್ಲಿಯೇ ಅಪಸ್ವರ ಕೇಳಿಬಂದಿದೆ.

9 ಮಕ್ಕಳ ತಂದೆಯಾದ ಬಿಜೆಪಿ ಶಾಸಕ ರಾಮ್‌ ಲಲ್ಲು ವೈಶ್ಯಾ ಅವರು, ನಾವಿಬ್ಬರು, ನಮಗಿಬ್ಬರು ಎಂಬುದು ನಮ್ಮ ನೀತಿಯಾಗಿದೆ. ಆದರೆ ಇದು ಯಶಸ್ವಿಯಾಗಿದೆಯೇ? ಹಿಂದುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಕೋರಲಾಯಿತು. ಆದರೆ ಇತರರನ್ನು ಇದರಿಂದ ಮುಕ್ತಗೊಳಿಸಲಾಯಿತು ಎಂದು ಮುಸ್ಲಿಮರ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ರಾಜ್ಯದ 80 ಶಾಸಕರು 3ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ. ಇದರಲ್ಲಿ ಬಿಜೆಪಿಯ 49 ಶಾಸಕರಿಗೆ ಸಹ 3ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಸಂಪುಟದ 31 ಸದಸ್ಯರ ಪೈಕಿ 13 ಸಚಿವರಿಗೂ 3ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ. ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದೆ.

click me!