ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ, ಯೋಗಿ ನಾಡಿನಲ್ಲಿ ಹೊಸ ನಿಯಮ!

By Suvarna News  |  First Published May 13, 2022, 9:55 AM IST

* ಮದರಸಾಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುವುದು ಕಡ್ಡಾಯ

* ಉತ್ತರ ಪ್ರದೇಶದಲ್ಲಿ ಹೊಸ ನಿಯಮ

* ನಿನ್ನೆಯಿಂದಲೇ ರಾಜ್ಯಾದ್ಯಂತ ಆದೇಶ ಜಾರಿ


ಲಖನೌ(ಮೇ.13): ಉತ್ತರಪ್ರದೇಶದ ಎಲ್ಲ ಮದರಸಾಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುವುದನ್ನು ಗುರುವಾರದಿಂದಲೇ ಜಾರಿಗೆ ಬರುವಂತೆ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಉತ್ತರಪ್ರದೇಶದ ಮದರಸಾ ಶಿಕ್ಷಣ ಮಂಡಳಿಯ ನೋಂದಣಾಧಿಕಾರಿ ಎಸ್‌.ಎನ್‌. ಪಾಂಡೆ ಅವರು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಗಳಿಗೆ ಮೇ 9ರಂದು ಆದೇಶ ಹೊರಡಿಸಿದ್ದು, ಅದು ಗುರುವಾರದಿಂದ ಜಾರಿಗೆ ಬಂದಿದೆ.

ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸುವ ಬಗ್ಗೆ ಮಾ.24ರಂದು ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಮದರಸಾಗಳಲ್ಲಿ ಮೇ 12ರಿಂದ ತರಗತಿಗಳು ಆರಂಭವಾಗಿದ್ದು, ಆ ಪ್ರಕಾರ ಗುರುವಾರದಿಂದಲೇ ರಾಷ್ಟ್ರಗೀತೆ ಕಡ್ಡಾಯವಾಗಿದೆ.

Tap to resize

Latest Videos

ಈವರೆಗೆ ಮದರಸಾಗಳಲ್ಲಿ ಹಮ್‌್ದ ಹಾಗೂ ಸಲಾಂ ಪ್ರಾರ್ಥನೆಗಳನ್ನು ತರಗತಿ ಆರಂಭಕ್ಕೂ ಮುನ್ನ ಮಾಡಲಾಗುತ್ತಿತ್ತು. ಕೆಲವು ಕಡೆ ರಾಷ್ಟ್ರಗೀತೆಯನ್ನೂ ಹಾಡಲಾಗುತ್ತಿತ್ತು. ಆದರೆ ಅದು ಕಡ್ಡಾಯವಾಗಿರಲಿಲ್ಲ. ಈಗ ಕಡ್ಡಾಯವಾಗಿದೆ ಎಂದು ಮದರಿಸ್‌ ಅರೇಬಿಯಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದಿವಾನ್‌ ಸಾಹಬ್‌ ಜಮಾನ್‌ ಖಾನ್‌ ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ 16,461 ಮದರಸಾಗಳಿದ್ದು, ಆ ಪೈಕಿ 560 ಮದರಸಾಗಳು ಸರ್ಕಾರದ ಅನುದಾನ ಪಡೆಯುತ್ತಿವೆ.

ಹಲಸಿನ ಎಲೆಯಲ್ಲಿ ರಾಷ್ಟ್ರಗೀತೆ ಬರೆದು ದಾಖಲೆ

ಲೀಪ್‌ ಕಲೆಯ ಮೂಲಕ ಎಂಟು ಹಲಸಿನ ಎಲೆಗಳಲ್ಲಿ ಒಂದೇ ದಿನದಲ್ಲಿ ರಾಷ್ಟ್ರ ಗೀತೆಯನ್ನು ಹಿಂದಿಯಲ್ಲಿ ಬರೆದು ಇಂಡಿಯಾ ಬುಕ್‌ ಆಫ್‌ ರೇಕಾರ್ಡ್‌ನಲ್ಲಿ ದಾಖಲೆ ಮಾಡಿದ್ದಾಳೆ. ತಾಲೂಕಿನ ಬಿಳಗಿ ಪಂಚಾಯತ್‌ನ ಹೊಸ ಮಂಜು ಗ್ರಾಮದ ತೃಪ್ತಿ ಮಂಜುನಾಥ ನಾಯ್ಕ.

ಮಂಜುನಾಥ ಎಚ್‌. ನಾಯ್ಕ ಅವರ ಪುತ್ರಿ ಸುಮಾರು ಎರಡು ವರ್ಷಗಳಿಂದ ಲೀಪ್‌ ಆರ್ಚ್‌ನ್ನು ಮಾಡುತ್ತಿದ್ದಾರೆ. ಪ್ರಸ್ತುತ ಕಾರವಾರ ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಬಿಎಡ್‌ ಓದುತ್ತಿದ್ದಾರೆ. ಮೊದಲು ಅನೇಕ ರೀತಿಯ ಪ್ರಾಣಿ, ಪಕ್ಷಿ, ಹೂಗಳ ಲೀಪ್‌ ಆರ್ಚ್‌ನ್ನು ಮಾಡುತ್ತಿದ್ದು, ಪ್ರಸ್ತುತ ನಮ್ಮ ದೇಶದ ರಾಷ್ಟ್ರಗೀತೆಯನ್ನು ಹಿಂದಿ ಭಾಷೆಯಲ್ಲಿ ಲೀಪ್‌ ಆರ್ಚ್‌ನ್ನು ಮಾಡಿದ್ದರೆ ಇವರ ದಾಖಲೆ 19 ಮಾಚ್‌ರ್‍ 2022ರಂದು ದಾಖಲಾಗಿದೆ.

ಮುಂದಿನ ದಿನಗಳಲ್ಲಿ ನಾನು ಶಿಕ್ಷಾಕಿಯಾಗಬೆಕೆಂದು ಗುರಿ ಹೊಂದಿದ್ದು ಹಾಗೆಯೇ ಕಲಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬುದು ನನ್ನ ಆಶಯ. ಎನ್ನುತ್ತಾರೆ ತೃಪ್ತಿ ಮಂಜುನಾಥ ನಾಯ್ಕ.

click me!