UP Elections: ಮೊದಲ ಹಂತದ ಚುನಾವಣೆಯಲ್ಲಿ ಮಹತ್ವದ ಸಂದೇಶ ಕೊಟ್ಟ ವೃದ್ಧರು, ವಿಕಲಚೇತನರು!

Published : Feb 10, 2022, 02:10 PM IST
UP Elections: ಮೊದಲ ಹಂತದ ಚುನಾವಣೆಯಲ್ಲಿ ಮಹತ್ವದ ಸಂದೇಶ ಕೊಟ್ಟ ವೃದ್ಧರು, ವಿಕಲಚೇತನರು!

ಸಾರಾಂಶ

* ಯುಪಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ  * ಮತದಾನದ ಮಹತ್ವ ಸಾರಿದ ವೃದ್ಧರು, ವಿಕಲಚೇತನರು * ಮತದಾನ ಮಾಡಿ, ನಿಮ್ಮ ನಗರ ಮತ್ತು ದೇಶದ ಅಭಿವೃದ್ಧಿಗೆ ನಿಮ್ಮ ಜವಾಬ್ದಾರಿಯನ್ನು ಪೂರೈಸಿ

ಲಕ್ನೋ(ಫೆ.10): ಯುಪಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಂದುವರೆಯುತ್ತಿದ್ದು, ಮತದಾನದ ಬಗ್ಗೆ ಜನರಲ್ಲಿ ಹೆಚ್ಚಿನ ಉತ್ಸಾಹವಿದೆ. ಯುವಕರು, ಮಹಿಳೆಯರು ಸೇರಿದಂತೆ ವೃದ್ಧರು, ವಿಕಲಚೇತನರು ಬಹಳ ಉತ್ಸಾಹದಿಂದ ಈ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಲು ಮುಂದಾಗುತ್ತಿರುವುದು ಕಂಡು ಬಂದಿದೆ. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ದಟ್ಟ ಮಂಜು, ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಜನ ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇನ್ನೂ ಮನೆಯಲ್ಲಿರುವವರು ಹೊರಗೆ ಬನ್ನಿ ಎಂಬ ಸಂದೇಶವನ್ನು ಇತರ ಮತದಾರರಿಗೆ ನೀಡುತ್ತಿದ್ದಾರೆ. ಮತದಾನ ಮಾಡಿ, ನಿಮ್ಮ ನಗರ ಮತ್ತು ದೇಶದ ಅಭಿವೃದ್ಧಿಗೆ ನಿಮ್ಮ ಜವಾಬ್ದಾರಿಯನ್ನು ಪೂರೈಸಿ ಎಂದಿದ್ದಾರೆ.

ಆಗ್ರಾದ ಎತ್ಮಾದ್‌ಪುರದ ಜನತಾ ಇಂಟರ್ ಕಾಲೇಜಿನಲ್ಲಿರುವ ಮತಗಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ಚಳಿಯಲ್ಲೇ ವಿಕಲಚೇತನರು ಮತದಾನ ಮಾಡಿದರು.

ವಿಕಲಚೇತನ ಬಾಲಕಿ ಆಮ್ನಾ ಫತೇಪುರ್ ಸಿಕ್ರಿಯಲ್ಲಿ ಮತದಾನ ಮಾಡಿದರು. ಈಕೆ ತನ್ನ ಕುಟುಂಬದೊಂದಿಗೆ ಆಗಮಿಸಿದ್ದಳು.

95 ವರ್ಷದ ಹೆಟ್ರಾಮ್ ಅವರು ಆಗ್ರಾದ ನಾಗ್ಲಾ ಅಜಿತಾ ಮಹಾದೇವಿ ಇಂಟರ್ ಕಾಲೇಜಿನಲ್ಲಿ ಮತದಾನ ಮಾಡಿದರು. ನಡೆಯಲು ಸಾಧ್ಯವಾಗದ ಅವರನ್ನು ಸಂಬಂಧಿಕರು ಎತ್ತಿಕೊಂಡ ಬಂದಿದ್ದರು.

ಆಗ್ರಾದ ಬಲಕೇಶ್ವರ ನಿವಾಸಿ ಪದ್ಮಾ ದೇವಿ (70) ಅವರು ಗಾಲಿಕುರ್ಚಿಯಲ್ಲಿ ಮತಗಟ್ಟೆಗೆ ಬಂದರು. ಬಲಕೇಶ್ವರದ ಸಿಎಫ್ ಆಂಡ್ರ್ಯೂಸ್ ಶಾಲೆಯಲ್ಲಿ ಮತ ಚಲಾಯಿಸಿದರು.

95 ವರ್ಷದ ತ್ರಿವೇಣಿ ದೇವಿ ಕೂಡ ಮತ ಚಲಾಯಿಸಲು ಎತ್ಮಾದ್‌ಪುರದ ರಹಾನ್ ಕಲಾ ಗ್ರಾಮಕ್ಕೆ ಆಗಮಿಸಿದ್ದರು. ಅವರನ್ನೂ ಹೊತ್ತುಕೊಮಡು ಕುಟುಂಬಸ್ಥರು ಮತಗಟ್ಟೆ ತಲುಪಿದರು.

ವಿಕಲಚೇತನ ನೆಕ್ರಮ್ ಅವರು ಆಗ್ರಾದ ಕಂಟೋನ್ಮೆಂಟ್ ಅಸೆಂಬ್ಲಿಯಲ್ಲಿರುವ ಕೌನ್ಸಿಲ್ ಶಾಲೆಯ ಬೂತ್‌ನಲ್ಲಿ ಮತ ಚಲಾಯಿಸಿದರು. ಅವರಿಗೆ ಕಾಲಿಲ್ಲ.

ವಿಕಲಚೇತನ ದೇವೇಂದ್ರ ವೋಟ್ ಅವರು ಆಗ್ರಾದ ಎತ್ಮಾದ್‌ಪುರದ ಸಂಯುಕ್ತ ಪೂರ್ವ ಮಾಧ್ಯಮಿಕ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

ಮೊದಲ ಹಂತದಲ್ಲಿ ಈ ಕ್ಷೇತ್ರಗಳಲ್ಲಿ ಮತದಾನ

ಕೈರಾನಾ, ಥಾನಾ ಭವನ, ಶಾಮ್ಲಿ, ಬುಧಾನಾ, ಚಾರ್ತ್ವಾಲ್, ಪುರ್ಕಾಜಿ, ಮುಜಾಫರ್ನಗರ, ಖತೌಲಿ, ಮೀರಾಪುರ್, ಸಿವಾಲ್ಖಾಸ್, ಸರ್ಧಾನ, ಹಸ್ತಿನಾಪುರ, ಕಿಥೋರ್, ಮೀರತ್ ಕ್ಯಾಂಟ್, ಮೀರತ್, ಮೀರತ್ ಸೌತ್, ಛಪ್ರೌಲಿ, ಬರೌತ್, ಲೋನಿ, ಮುರ್ದನಗರ್, ಸಾಹಿಬಾಬಾದ್, ಮೋದಿ ನಗರ್, ಸಾಹಿಬಾಬಾದ್, ಮೋದಿ ನಗರ್, ಧೌಲಾನಾ, ಹಾಪುರ್ (ಹಾಪುರ್), ಗಢಮುಕ್ತೇಶ್ವರ್, ನೋಯ್ಡಾ, ದಾದ್ರಿ, ಜೇವಾರ್, ಸಿಕಂದರಾಬಾದ್, ಬುಲಂದ್‌ಶಹರ್, ಸೈನಾ, ಅನುಪ್‌ಶಹರ್, ದೇಬಾಯಿ, ಶಿಕರ್‌ಪುರ್, ಖುರ್ಜಾ, ಖೈರ್, ಬರೌಲಿ, ಅಟ್ರೌಲಿ, ಚರ್ರಾ, ಕೋಲ್, ಅಲಿಗಢ್, ಇಗ್ಲಾಸ್, ಛತ್ರ, ಮಂತ್, ಗೋವರ್ಧನ್, , ಬಲ್ದೇವ್, ಇಮಾದ್‌ಪುರ್, ಆಗ್ರಾ ಕ್ಯಾಂಟ್, ಅಗ್ರಾರ್ ಸೌತ್, ಆಗ್ರಾ ನಾರ್ತ್, ಆಗ್ರಾ ಗ್ರಾಮಾಂತರ, ಫತೇಪುರ್ ಸಿಕ್ರಿ, ಖೇರಗಢ್, ಫತೇಹಾಬಾದ್, ಬಹ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು