Bharat Biotech: ಮಕ್ಕಳಿಗೆ ಕೋವ್ಯಾಕ್ಸಿನ್‌ ಬದಲು ಬೇರೆ ಲಸಿಕೆ ನೀಡಬೇಡಿ

By Kannadaprabha News  |  First Published Jan 9, 2022, 9:06 AM IST

ದೇಶದಲ್ಲಿ 15-18ರ ವಯೋಮಾನದ ಮಕ್ಕಳಿಗೆ ಸದ್ಯ ಕೋವ್ಯಾಕ್ಸಿನ್‌ ಲಸಿಕೆಯನ್ನು ಮಾತ್ರವೇ ನೀಡಲು ಅನುಮತಿ ಇದೆಯಾದರೂ, ಹಲವೆಡೆ ಬೇರೆ ಬೇರೆ ಕಂಪನಿಗಳ ಲಸಿಕೆ ನೀಡುತ್ತಿರುವ ಹಲವು ವರದಿಗಳು ಬಂದಿವೆ ಎಂದು ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದಿಸುತ್ತಿರುವ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ ಹೇಳಿದೆ.


ಹೈದರಾಬಾದ್‌ (ಜ. 09): ದೇಶದಲ್ಲಿ 15-18ರ ವಯೋಮಾನದ ಮಕ್ಕಳಿಗೆ (Childrens) ಸದ್ಯ ಕೋವ್ಯಾಕ್ಸಿನ್‌ ಲಸಿಕೆಯನ್ನು (Covaxin Vaccine) ಮಾತ್ರವೇ ನೀಡಲು ಅನುಮತಿ ಇದೆಯಾದರೂ, ಹಲವೆಡೆ ಬೇರೆ ಬೇರೆ ಕಂಪನಿಗಳ ಲಸಿಕೆ ನೀಡುತ್ತಿರುವ ಹಲವು ವರದಿಗಳು ಬಂದಿವೆ ಎಂದು ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದಿಸುತ್ತಿರುವ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ (Bharat Biotech) ಸಂಸ್ಥೆ ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ, ‘15-18ರ ವಯೋಮಾನದ ಮಕ್ಕಳಿಗೆ ಬೇರೆ ಬೇರೆ ಕಂಪನಿಯ ಲಸಿಕೆ ವಿತರಿಸುತ್ತಿರುವ ಹಲವು ವರದಿಗಳು ಬಂದಿವೆ. ಹೀಗಾಗಿ ಈ ವಯೋಮಾನದ ಮಕ್ಕಳಿಗೆ ಲಸಿಕೆ ವಿತರಿಸುವಾಗ ಹೆಚ್ಚು ಜಾಗರೂಕವಾಗಿರುವಂತೆ ಮತ್ತು ಕೇವಲ ಕೋವ್ಯಾಕ್ಸಿನ್‌ ಅನ್ನು ಮಾತ್ರವೇ ವಿತರಿಸುವಂತೆ ನಾವು ನಮ್ಮ ಆರೋಗ್ಯ ಕಾರ್ಯಕರ್ತರಲ್ಲಿ ವಿನಮ್ರವಾಗಿ ಕೋರುತ್ತೇವೆ. 2-18ರ ವ ವಯೋಮಾನದ ಮಕ್ಕಳ ಮೇಲೆ ನಡೆದ ಕ್ಲಿನಿಕಲ್‌ ಪ್ರಯೋಗದ ವರದಿ ಆಧರಿಸಿ, ಕೋವ್ಯಾಕ್ಸಿನ್‌ಗೆ ಅನುಮೋದನೆ ನೀಡಲಾಗಿದೆ. ಸದ್ಯ ಭಾರತದಲ್ಲಿ ಮಕ್ಕಳಿಗೆ ನೀಡಲು ಅನುಮತಿ ಪಡೆದ ಏಕೈಕ ಲಸಿಕೆ ಇದಾಗಿದೆ’ ಎಂದು ಕಂಪನಿ ಸ್ಪಷ್ಟಪಡಿಸಿದೆ.

Latest Videos

Covid 19 Spike: 27,553 ಕೇಸ್‌: 2 ತಿಂಗಳ ಗರಿಷ್ಠ

ಮಕ್ಕಳಿಗೆ ಕೋವ್ಯಾಕ್ಸಿನ್‌ ನೀಡಲು ಅಸ್ತು - ಶೀಘ್ರ ಲಭ್ಯ: ಹೈದರಾಬಾದ್‌ (Hyderabad) ಮೂಲದ ಭಾರತ್‌ ಬಯೋಟೆಕ್‌ ಕಂಪನಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ (Covaxine)  ಲಸಿಕೆಯನ್ನು 12-18 ವರ್ಷದೊಳಗಿನ ಮಕ್ಕಳ ತುರ್ತು ಬಳಕೆಗೆ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಶನಿವಾರ ಅನುಮೋದನೆ ನೀಡಿದೆ. ಇದರಿಂದ ಭಾರತದಲ್ಲಿ ಮಕ್ಕಳಿಗೂ ಲಸಿಕೆ (Vaccination) ನೀಡುವ ದಿನಗಳು ಮತ್ತಷ್ಟು ಸಮೀಪಿಸಿದಂತಾಗಿದೆ. 

ಈ ಮೂಲಕ ದೇಶದ ಮಕ್ಕಳ ಬಳಕೆಗೆ ಲಭ್ಯವಾಗಲಿರುವ ಎರಡನೇ ಲಸಿಕೆ ಕೋವ್ಯಾಕ್ಸಿನ್‌ ಆಗಲಿದೆ. ಈಗಾಗಲೇ ಝೈಡಸ್‌ ಕ್ಯಾಡಿಲಾ ಕಂಪನಿಯ ಲಸಿಕೆಗೆ ಡಿಸಿಜೆಐ ಅನುಮತಿ ನೀಡಿತ್ತು. ಕಳೆದ ಅಕ್ಟೋಬರ್‌ನಲ್ಲಿ ಕೋವ್ಯಾಕ್ಸಿನ್‌ ಲಸಿಕೆಯನ್ನು 2-18ರ ವರ್ಷದ ಮಕ್ಕಳಿಗೆ ಬಳಸಲು ಕೊರೋನಾ ಲಸಿಕೆ ಸಂಬಂಧಿಸಿದ ತಜ್ಞರ ಸಮಿತಿ ಅನುಮೋದನೆ ನೀಡಿತ್ತು. ಅಂತಿಮ ಹಂತದ ಅನುಮೋದನೆಗಾಗಿ ಡಿಸಿಜಿಐಗೆ (DCGI)  ಕಳುಹಿಸಿಕೊಡಲಾಗಿತ್ತು.

ವಯಸ್ಕರ ಲಸಿಕೆಯೇ ಬಳಕೆ: ಸದ್ಯ ವಯಸ್ಕರಿಗೆ ಬಳಸಲಾಗುತ್ತಿರುವ ಕೋವ್ಯಾಕ್ಸಿನ್‌ ಲಸಿಕೆಯನ್ನೇ ಮಕ್ಕಳ ಮೇಲೂ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ದೇಶದ 6 ಕಡೆ 1000ಕ್ಕೂ ಹೆಚ್ಚು ಮಕ್ಕಳ (Kids) ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ಮಕ್ಕಳ ಮೇಲಿನ ಲಸಿಕೆಯ ಕ್ಲಿನಿಕಲ್‌ ಪ್ರಯೋಗ ವರದಿಯನ್ನು ಭಾರತ್‌ ಬಯೋಟೆಕ್‌ ಕಂಪನಿ ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣ ಸಂಸ್ಥೆಗೆ ಸಲ್ಲಿಸಿತ್ತು. ಬಳಿಕ ವಿಷಯ ತಜ್ಞರ ಸಮಿತಿ ಇದನ್ನು ಪರಿಶೀಲಿಸಿ ಅನುಮೋದನೆ ಒಪ್ಪಿಗೆ ನೀಡಿತ್ತು.

Coronavirus: ಕೋವಿಡ್‌ 3ನೇ ಅಲೆ ಎದುರಿಸಲು ಸಜ್ಜು: ಸಚಿವ ಬಿ.ಸಿ.ಪಾಟೀಲ್‌

ಶೇ.77ರಷ್ಟು ರಕ್ಷಣೆ: ಕೋವ್ಯಾಕ್ಸಿನ್‌ ಲಸಿಕೆಯನ್ನು ವಯಸ್ಕರಂತೆಯೇ 28 ದಿನಗಳ ಅಂತರದಲ್ಲಿ ಎರಡು ಡೋಸ್‌ ಮೂಲಕ ನೀಡಲಾಗುತ್ತದೆ. ಪ್ರಯೋಗ ಹಂತದಲ್ಲಿ ಲಸಿಕೆಯು ವಯಸ್ಕರಷ್ಟೇ ಮಕ್ಕಳ ಮೇಲೂ ಪರಿಣಾಮಕಾರಿಯಾಗಿದೆ. ಕೋವಿಡ್‌ ವೈರಸ್‌ ವಿರುದ್ಧ ಮಕ್ಕಳಿಗೆ ಶೇ.77.8ರಷ್ಟುರಕ್ಷಣೆ ಒದಗಿಸುತ್ತದೆ ಎಂದು ವರದಿಗಳು ತಿಳಿಸಿವೆ.

click me!