BRICS ಊಟದಲ್ಲಿ ಪನೀರ್ ಪದಾರ್ಥಕ್ಕೆ ಈರುಳ್ಳಿ ಬದಲು ಶಾಲೆಟ್ಸ್ ಬಳಕೆ, ಈರುಳ್ಳಿಗೂ ಶಾಲೆಟ್ಸ್‌ಗೂ ವ್ಯತ್ಯಾಸ ಏನು?

Published : Sep 13, 2026, 07:11 PM IST
brics dinner

ಸಾರಾಂಶ

ಬ್ರಿಕ್ಸ್ ಶೃಂಗಸಭೆಯಲ್ಲಿ ನಡೆದ ಊಟದ ಮೆನು ಸಾಕಷ್ಟು ಚರ್ಚೆಗೆ ಕಾರಣವಾಗ್ತಿದೆ. ಡಿನ್ನರ್‍‌ನಲ್ಲಿ ಭಾರತೀಯ ಪರಂಪರೆಯನ್ನ ಗುರುತಿಸುವ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ವೈವಿದ್ಯಮಯ ತಿನಿಸುಗಳು ಊಟದ ಮೆನುವಿನಲ್ಲಿ ಇದ್ದವು. ಈ ಕುರಿತ ಒಂದು ಸುದ್ದಿ ಇಲ್ಲಿದೆ. ಓದಿ.

ನವದೆಹಲಿ: ದೆಹಲಿ ಭಾರತ್ ಮಂಟಪ್‌ನಲ್ಲಿ ಕಳೆದ ಎರಡು ದಿನಗಳಿಂದ ಬ್ರಿಕ್ಸ್ ಶೃಂಗಸಭೆ ಭರ್ಜರಿಯಾಗಿ ನಡೆಯಿತು. ಬ್ರಿಕ್ಸ್ ಶೃಂಗಸಭೆಯ ಅಧಿವೇಶನಗಳ ಕುರಿತ ಚರ್ಚೆಯ ಜೊತೆಗೆ ಬ್ರಿಕ್ಸ್ ಡಿನ್ನರ್ ಬಗ್ಗೆಯೂ ಬಿಸಿಬಿಸಿ ಚರ್ಚೆ ಆಗ್ತಿದೆ. ಪ್ರಧಾನಿ ಮೋದಿ ಅವರು ಜಿನ್‌ಪಿಂಗ್, ಪುಟಿನ್ ಸೇರಿ ಜಾಗತಿಕ ನಾಯಕರ ಜೊತೆ ಗಾಲಾ ಡಿನ್ನರ್ ಆಯೋಜಿಸಿದ್ದರು.

ವಿಶೇಷ ಅಂದ್ರೆ ಈ ಡಿನ್ನರ್‍‌ನಲ್ಲಿ ಭಾರತೀಯ ಪರಂಪರೆಯನ್ನ ಗುರುತಿಸುವ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ವೈವಿದ್ಯಮಯ ತಿನಿಸುಗಳು ಊಟದ ಮೆನುವಿನಲ್ಲಿ ಇದ್ದವು. ಇದೀಗ ಅವುಗಳ ಫೋಟೋಗಳು ಸೋಶಿಯುಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಅದರಲ್ಲೂ ವಿಶೇಷವಾಗಿ ಪನೀರ್ ಲಾಬಾಬ್ದಾರ್ ಪದಾರ್ಥವು ಎಲ್ಲರ ಗಮನ ಸೆಳೆದಿದೆ. ಉತ್ತರ ಭಾರತದ ಜನಪ್ರಿಯ ಖಾದ್ಯವಾಗಿರುವ ಪನೀರ್‍‌ ಲಾಬಾಬ್ದಾರ್ ತಯಾರಿಸಲು ಸಾಮಾನ್ಯ ಈರುಳ್ಳಿ ಬದಲಿಗೆ ಶಾಲೆಟ್ಸ್‌ (ಸಾಂಬಾರ್ ಈರುಳ್ಳಿ) ಬಳಸಲಾಗಿದೆ. ಇದು ಸದ್ಯ ಪಾಕತಜ್ಞರ ಚರ್ಚೆಯ ವಿಷಯ. ನೋಡಲು ಅತ್ಯಂತ ಸಣ್ಣ ವಿಚಾರ ಅಂದುಕೊಂಡರೂ, ಖಾದ್ಯದ ರುಚಿಯನ್ನೇ ಬದಲಾಯಿಸುವ ಶಕ್ತಿ ಈ ಶಾಲೆಟ್ಸ್‌ಗೆ ಇದೆ.

ನಮಗೆ ತಿಳಿದಿರುವಂತೆ ಲಬಾಬ್ದಾರ್ ಗ್ರೇವಿಯನ್ನ ದಪ್ಪ ಈರುಳ್ಳಿ, ಟೊಮ್ಯಾಟೋ ಗೋಡಂಬಿಯನ್ನ ಬಳಸಿ ತಯಾರಿಸುತ್ತಾರೆ. ಆದರೆ ಬ್ರಿಕ್ಸ್ ಭೋಜನಕೂಟದಲ್ಲಿ ಸಾಮಾನ್ಯ ಈರುಳ್ಳಿ ಬದಲಾಗಿ ಶಾಲೆಟ್ಸ್ ಬಳಸಿದ್ದು ಯಾಕೆ ಅನ್ನೋದು ಹಲವರ ಕುತೂಹಲ.

ವ್ಯತ್ಯಾಸ ಏನು?

  • ದೊಡ್ಡ ಈರುಳ್ಳಿ ಒಂದೇ ಗೆಡ್ಡೆಯಾಗಿ ಬೆಳೆಯುತ್ತದೆ
  • ಶಾಲೆಟ್ಸ್ ಬೆಳ್ಳುಳ್ಳಿಯಂತೆ ಸಣ್ಣ ಸಣ್ಣ ಗೆಡ್ಡೆಗಳ ಗೊಂಚಲು ಗೊಂಚಲಾಗಿ ಬೆಳೆಯುತ್ತದೆ
  • ದಕ್ಷಿಣ ಭಾರತದಲ್ಲಿ ಇದನ್ನು ಸಾಂಬಾರ್ ಈರುಳ್ಳಿ ಎಂದು ಕರೆಯುತ್ತಾರೆ
  • ಈ ಸಾಂಬಾರ್ ಈರುಳ್ಳಿ ಚಿಕ್ಕದಾಗಿಯೇ ಬೆಳೆಯುತ್ತದೆ
  • ಎರಡೂ ಈರುಳ್ಳಿಯೇ ಆಗಿದ್ದರೂ ರೂಚಿಯಲ್ಲಿ ಭಾರೀ ವ್ಯತ್ಯಾಸ ಇದೆ
  • ಸಾಮಾನ್ಯ ಈರುಳ್ಳಿ ಹೆಚ್ಚು ಖಾರ ಮತ್ತು ಕಟು ವಾಸನೆ
  • ಶಾಲೆಟ್ಸ್‌ ಕಟು ವಾಸನೆ ಇಲ್ಲ, ಸ್ವಲ್ಪ ಸಿಹಿ ಕೂಡ ಇರುತ್ತದೆ

ಇನ್ನು ಈ ಶಾಲೆಟ್ಸ್ ಅನ್ನು ಎಣ್ಣೆ ಅಥವಾ ಬೆಣ್ಣೆಯಲ್ಲಿ ಬೇಯಿಸಿದಾಗ ಸಾಮಾನ್ಯ ಈರುಳ್ಳಿಗಿಂತ ತುಂಬಾನೇ ಭಿನ್ನ. ಹೆಚ್ಚು ಬೇಯುತ್ತಿದ್ದಂತೆಯೇ ಅದರಲ್ಲಿರುವ ಸಿಹಿ ಅಂಶ ಹೆಚ್ಚಾಗುತ್ತದೆ. ಹಾಗಾಗಿ ಇದು ಗ್ರೇವಿಗೆ ಒಳ್ಳೆಯ ಟೇಸ್ಟ್ ನೀಡುತ್ತದೆ. ಹಾಗಿದ್ದರೆ ಪನೀರ್ ಲಾಬಾಬ್ದಾರ್‍‌ಗೆ ಇದನ್ನು ಯಾಕೆ ಬಳಸಲಾಗಿದೆ ಎಂದು ನೋಡೋದಾದರೆ..ಈರುಳ್ಳಿಯ ಘಾಟು ಕಡಿಮೆ ಆಗಿ ಟೊಮ್ಯಾಟೋ ಮತ್ತು ಮಸಾಲೆ ಪದರ್ಥಗಳ ನಿಜವಾದ ಪರಿಮಳ ಎದ್ದು ಕಾಣುತ್ತದೆ ಅನ್ನೋದು ಪಾಕತಜ್ಞರ ಬಣ್ಣನೆಯಾಗಿದೆ.

ಇನ್ನು ಬ್ರಿಕ್ಸ್ ಮೆನುವಿನಲ್ಲಿ ಏನೇನು ತಿನಿಸುಗಳು ಇದ್ದವು?

ಬ್ರಿಕ್ಸ್ ಮೆನು ಭಾರತೀಯ ಆಹಾರ ವೈವಿಧ್ಯತೆಯನ್ನ ಪ್ರಪಂಚಕ್ಕೆ ಎತ್ತಿ ತೋರಿಸುವಂತೆ ಇದ್ದವು. ಕೇವಲ ಪನೀರ್ ಲಾಬಾಬ್ದಾರ್ ಅಲ್ಲದೇ, ಖಾಂಡ್ವಿಮಿಲೆ ಫ್ಯೂಯಿಲ್ ಮತ್ತು ಖುಂಬ್ ಗಲೌಟಿ, ಕಾಶ್ಮೀರದ ಗುಚ್ಚಿ ಚಾರ್ಮಿಕ್ (ಮಶ್ರೂಮ್), ಸಿಧಾನ್ಯಗಳ ಫಲಾವ್, ಬೀಟ್‌ರೂಟ್ ರಾಯಿತ, ಕ್ಯಾರಟ್ ಬೀನ್ಸ್ ಪೊರಿಯಲ್, ಫ್ರೂಟ್‌ ಕ್ರೀಮ್ ಜೊತೆ ಜಿಲೇಬಿ, ಗೋಲ್ಡ್ ಲೀಫ್ ಸೇರಿದಂತೆ ಅನೇಕ ಖಾದ್ಯಗಳನ್ನ ಉಣಬಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

21 ರಾಜ್ಯಗಳಲ್ಲಿ ಯೂನಿಫಾರ್ಮ್ ಸಿವಿಲ್ ಕೋಡ್ ನೀತಿ ಜಾರಿಗೆ ದಿನಾಂಕ ಘೋಷಿಸಿದ ಅಮಿತ್ ಶಾ
ಬಂಗಾಳದಲ್ಲಿ 252 ಮದರಸಗಳಿಗೆ ಬೀಗ ಜಡಿದ ಸರ್ಕಾರ, 100ಕ್ಕೂ ಹೆಚ್ಚು ಕೇಂದ್ರಕ್ಕೆ ನೋಟಿಸ್