
ಅಮೆರಿಕದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಸರ್ಕಾರ ರಚನೆ ಮಾಡಿದ್ದಾರೆ. ಟ್ರಂಪ್ ಸರ್ಕಾರದಲ್ಲಿ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ಫೆಡರಲ್ ತನಿಖಾ ಸಂಸ್ಥೆ ಎಫ್‌ಬಿಐನ ಹೊಸ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಗುರುವಾರ ಸೆನೆಟ್ ನಲ್ಲಿ ಕಾಶ್ ಪಟೇಲ್ ನೇಮಕವನ್ನು ಖಚಿತಪಡಿಸಲು ಸಭೆ ನಡೆಸಲಾಯಿತು. ಈ ಸಭೆಗೂ ಮುನ್ನ ಕಾಶ್ ಪಟೇಲ್ ತನ್ನ ಪೋಷಕರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕದಲ್ಲಿ ನೆಲೆಸಿದರೂ ಭಾರತೀಯ ಮೌಲ್ಯಗಳು ಮತ್ತು ಸಾಂಪ್ರದಾಯಿಕ ಬೇರುಗಳನ್ನು ಕಾಪಾಡಿಕೊಳ್ಳುವುದು ಕಂಡು ಜನರು ಕಾಶ್ ಪಟೇಲ್‌ರನ್ನು ಹಾಡಿ ಹೊಗಳಿದ್ದಾರೆ. ಪಟೇಲ್ ತಮ್ಮ ಪೋಷಕರನ್ನು ಜೈ ಶ್ರೀ ಕೃಷ್ಣ ಎಂದು ಸಂಬೋಧಿಸಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಈ ವಿಡಿಯೋ ಕಾಮೆಂಟ್ ಮಾಡಿದ್ದು, ಅಮೆರಿಕ ಸರ್ಕಾರದ ಉನ್ನತ ಹುದ್ದೆಗೇರಿದವರು ಈ ರೀತಿ ಹೆತ್ತವರನ್ನು ಗೌರವಿಸುತ್ತಿರುವುದು ಇದೇ ಮೊದಲಾಗಿದೆ. ಪ್ರೀತಿ ಅಂದರೆ ಇದು' ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿದ್ದು, ಎಲ್ಲೇ ಇದ್ದರೂ ಭಾರತೀಯ ಮೂಲದ ಸಂಸ್ಕಾರ, ಸಂಪ್ರಾದಯದ ಬೇರುಗಳನ್ನ ಎಂದಿಗೂ ಮರೆಯಬೇಡಿ ಎಂದರೆ, ಮತ್ತೊಬ್ಬ ವಾವ್, ಸಂಸ್ಕಾರ ಎಂದರೆ ಇದಪ್ಪಾ, ಭಾರತೀಯರಾಗಿ ನಾವು ಹೆಮ್ಮೆ ಪಡುತ್ತೇವೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಟ್ರಂಪ್ ತೆರಿಗೆ ಬೆದರಿಕೆಗೆ ಮೋದಿ ಸರ್ಕಾರ ಅಮೆರಿಕ ಉತ್ಪನ್ನಗಳ ಮೇಲೂ ತೆರಿಗೆ ಕಡಿತಕ್ಕೆ ಚಿಂತನೆ?
ಜೈ ಶ್ರೀ ಕೃಷ್ನ ಎಂದು ಹೆತ್ತವರನ್ನ ಪರಿಚಯಿಸಿದ ಪಟೇಲ್:
ಪರಸ್ಪರ ಪರಿಚಯ ಸಮಯದಲ್ಲಿ ಕಾಶ್ ಪಟೇಲ್ ತನ್ನ ಪೋಷಕರನ್ನು ಜೈ ಶ್ರೀಕೃಷ್ಣ ಎನ್ನುವ ಮೂಲಕ ಪರಿಚಯಿಸಿದರು. ಪೋಷಕರ ಕುರಿತು ಮಾತನಾಡುತ್ತಾ, ಇಂದು ಇಲ್ಲಿ ಕುಳಿತಿರುವ ನನ್ನ ತಂದೆ ಪ್ರಮೋದ್ ಮತ್ತು ನನ್ನ ತಾಯಿ ಅಂಜನಾ ಅವರನ್ನು ನಾನು ಸ್ವಾಗತಿಸಲು ಬಯಸುತ್ತೇನೆ. ಅವರು ಭಾರತದಿಂದ ಅಮೆರಿಕಕ್ಕೆ ಬಂದರು. ನನ್ನ ತಂಗಿ ನಿಶಾ ಕೂಡ ಇಲ್ಲಿದ್ದಾಳೆ. ಶ್ರೀ ಕೃಷ್ಣನಿಗೆ ಜಯವಾಗಲಿ ಎಂದರು. ಕಾಶ್ ಪಟೇಲ್ ಅವರ ಹಿಂದೂ ಸಾಂಪ್ರದಾಯಿಕ ಶುಭಾಶಯವನ್ನು ಭಾರತೀಯ ಸಮುದಾಯ ಮತ್ತು ಅಮೇರಿಕನ್ ನಾಗರಿಕರು ಬಹಳವಾಗಿ ಮೆಚ್ಚಿದರು.
ಇದನ್ನೂ ಓದಿ: ಆದಾಯ ತೆರಿಗೆಯನ್ನೇ ರದ್ದು ಮಾಡಲು ಟ್ರಂಪ್ ತಯಾರಿ!
ಕಾಶ್ ಪಟೇಲ್ ಯಾರು?
ಕಾಶ್ ಪಟೇಲ್ ಒಬ್ಬ ಭಾರತೀಯ-ಅಮೆರಿಕನ್ ವಕೀಲ ಮತ್ತು ರಾಷ್ಟ್ರೀಯ ಭದ್ರತಾ ತಜ್ಞರು. ಅವರನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರು ಎಂದು ಪರಿಗಣಿಸಲಾಗಿದೆ. ಟ್ರಂಪ್ ನೂತನ ಸರ್ಕಾರ ರಚನೆ ಬಳಿಕ ಇದೀಗ ಎಫ್‌ಬಿಐ ನಿರ್ದೇಶಕರ ಹುದ್ದೆಗೆ ನೇಮಕ ಮಾಡಲಾಗಿದೆ. ಈ ನಡುವೆ ಸೆನೆಟ್ ನ್ಯಾಯಾಂಗ ಸಮಿತಿಯಲ್ಲಿ ಅವರ ನಾಮನಿರ್ದೇಶನದ ಪರಿಶೀಲನೆ ನಡೆಯುತ್ತಿದೆ. ಅದರಲ್ಲಿ ಉತ್ತೀರ್ಣರಾದರೆ, ಅವರು ಭಾರತೀಯ ಮೂಲದ ಮೊದಲ ಎಫ್‌ಬಿಐ ನಿರ್ದೇಶಕರಾಗಬಹುದು. ಆದಾಗ್ಯೂ, ಟ್ರಂಪ್‌ಗೆ ಅವರ ನಿಷ್ಠೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ, ಇದು ಅವರ ನಾಮನಿರ್ದೇಶನದಲ್ಲಿ ವಿವಾದಕ್ಕೆ ಕಾರಣವಾಗಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ