IAF ಪೈಲಟ್‌ ಅಕ್ಷಯ್ ಅಮೋಘ ಸಾಹಸ: ಸೋಮಾಲಿಯಾ ಕಡಲ್ಗಳ್ಳರ ವಶದಲ್ಲಿದ್ದ 17 ಮರ್ಚಂಟ್ ನೇವಿ ಸಿಬ್ಬಂದಿಯ ರಕ್ಷಣೆ

Published : Jan 31, 2025, 11:46 AM IST
IAF ಪೈಲಟ್‌ ಅಕ್ಷಯ್ ಅಮೋಘ ಸಾಹಸ: ಸೋಮಾಲಿಯಾ ಕಡಲ್ಗಳ್ಳರ ವಶದಲ್ಲಿದ್ದ 17 ಮರ್ಚಂಟ್ ನೇವಿ ಸಿಬ್ಬಂದಿಯ ರಕ್ಷಣೆ

ಸಾರಾಂಶ

ಸೋಮಾಲಿಯಾ ಕಡಲಲ್ಲಿ ಕಡಲ್ಗಳ್ಳರಿಂದ ಸೆರೆಹಿಡಿಯಲ್ಪಟ್ಟಿದ್ದ 17 ಮರ್ಚಂಟ್ ನೇವಿ ಸಿಬ್ಬಂದಿಯನ್ನು ಭಾರತೀಯ ವಾಯುಸೇನೆ ಕಡಿಮೆ ಬೆಳಕಿನಲ್ಲಿಯೂ ಏರ್‌ಡ್ರಾಪ್ ಮೂಲಕ ಕಮಾಂಡೋಗಳನ್ನು ನಿಯೋಜಿಸಿ ರಕ್ಷಿಸಿದೆ. ವಿಂಗ್ ಕಮಾಂಡರ್ ಅಕ್ಷಯ್ ಸಕ್ಸೇನಾ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಭಾರತೀಯ ವಾಯುಸೇನೆಯೊಂದು ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಸೋಮಾಲಿಯಾ ಕಡಲಲ್ಲಿ ಅಮೋಘವಾದ ಸಾಹಸಮಯ ಕಾರ್ಯಾಚರಣೆಯನ್ನು ಮಾಡಿ ಮರ್ಚಂಟ್ ನೇವಿ ಹಡಗಿನ 17 ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ. ಕಡಿಮೆ ಬೆಳಕಿನ ಸ್ಥಿತಿಯಲ್ಲಿಯೂ 18 ಕಮಾಂಡೋಗಳನ್ನು ಸಮುದ್ರದಲ್ಲಿ ಏರ್‌ಡ್ರಾಪ್‌ ಮಾಡಿ ಈ ಕಾರ್ಯಾಚರಣೆ ನಡೆಸಿದ್ದು, ಸೋಮಾಲಿಯಾ ಕಡಲ್ಗಳ್ಳರ ವಶದಲ್ಲಿದ್ದ 17 ಸಿಬ್ಬಂದಿಯನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. 

ಸೊಮಾಲಿಯಾ ಕರಾವಳಿಯ ಬಳಿ ವ್ಯಾಪಾರಿ ಹಡಗಿನ 17 ಸಿಬ್ಬಂದಿಯನ್ನು ರಕ್ಷಿಸಲು ಭಾರತೀಯ ಪಡೆಗಳು ಕಡಿಮೆ ಬೆಳಕಿನ ಪರಿಸ್ಥಿತಿಯೂ ನಡೆಸಿದ ಧೈರ್ಯಶಾಲಿ ಕಾರ್ಯಾಚರಣೆಯ ವಿವರಗಳನ್ನು ಕೇಂದ್ರ ಸರ್ಕಾರ ನಿನ್ನೆ ಬಹಿರಂಗಪಡಿಸಿದೆ. ಇದೇ ಸಮಯದಲ್ಲಿ ಹೆಚ್ಚಿನ ಅಪಾಯದ ಕಾರ್ಯಾಚರಣೆಯನ್ನು ನಿರ್ವಹಿಸುವುದಕ್ಕಾಗಿ ಕಡಿಮೆ ಬೆಳಕಿನ ಸ್ಥಿತಿಯಲ್ಲಿಯೂ  C-17 ಮಿಲಿಟರಿ ಸಾರಿಗೆ ವಿಮಾನವನ್ನು ಹಾರಿಸಿದ ಪೈಲಟ್‌ ವಿಂಗ್ ಕಮಾಂಡರ್ ಅಕ್ಷಯ್ ಸಕ್ಸೇನಾ ಅವರನ್ನು ಈ  ಅಪಾಯಕಾರಿ ಸಾಧನೆಗಾಗಿ ಗೌರವಿಸಲಾಯಿತು. 

ಜೂನ್ 2006 ರಲ್ಲಿ ಭಾರತೀಯ ವಾಯುಪಡೆಗೆ (IAF)ನಿಯೋಜನೆಗೊಂಡ ವಿಂಗ್ ಕಮಾಂಡರ್ ಅಕ್ಷಯ್ ಸಕ್ಸೇನಾ ಅವರನ್ನು ಫೆಬ್ರವರಿ 2021 ರಲ್ಲಿ C-17 ಸ್ಕ್ವಾಡ್ರನ್‌ನೊಂದಿಗೆ ನಿಯೋಜಿಸಲಾಗಿತ್ತು. ಗಣರಾಜ್ಯೋತ್ಸವದ ಮುನ್ನಾ ದಿನದಂದು, ಅವರಿಗೆ ಅವರ ಈ ಅದಮ್ಯ ಧೈರ್ಯ ಮತ್ತು ಶೌರ್ಯಕ್ಕಾಗಿ ವಾಯುಸೇನಾ ಪದಕ (ಶೌರ್ಯ) ನೀಡಿ ಗೌರವಿಸಲಾಗಿದೆ. ಜನವರಿ 25 ರಂದು ರಕ್ಷಣಾ ಸಚಿವಾಲಯವು ನೀಡಿದ ಹೇಳಿಕೆಯಲ್ಲಿ, ವಿಂಗ್ ಕಮಾಂಡರ್ ಅಕ್ಷಯ್ ಸಕ್ಸೇನಾ ಈ ಕಾರ್ಯಾಚರಣೆಗೆ ಸೂಕ್ತ ಸಿಬ್ಬಂದಿಯನ್ನು ಅಂತಿಮಗೊಳಿಸಿದರು ಮತ್ತು ಕಾರ್ಯಾಚರಣೆಯ ಸಮಯ ನಿರ್ಣಾಯಕವಾಗಿದ್ದರಿಂದ ಹಾಗೂ ರಹಸ್ಯ ಸ್ವರೂಪದಿಂದ ಕೂಡಿದ್ದರಿಂದ ತ್ವರಿತ ಕಾರ್ಯಾಚರಣೆಗೆ ವಿಮಾನ ಸಿದ್ಧತೆಯನ್ನು ಖಚಿತಪಡಿಸಿಕೊಂಡರು.

ಈ ಕಾರ್ಯಾಚರಣೆಯು ಸುದೀರ್ಘ ಕಾರ್ಯಾಚರಣೆಯ ಸಮಯದ ಅಪಾಯಕ್ಕಿಂತಲೂ ಹೆಚ್ಚು ಕಡಲ್ಗಳ್ಳ ಬಳ್ಳಿ ಇದ್ದ ಸಣ್ಣ ಶಸ್ತ್ರಾಸ್ತ್ರಗಳ ನಿಜವಾದ ಬೆದರಿಕೆಯನ್ನು ಒಳಗೊಂಡಿತ್ತು, ಇದರಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಅಘೋಷಿತ ಮತ್ತು ಪತ್ತೆಯಾಗದಂತೆ ಮತ್ತೊಂದು ದೇಶದ ವಾಯುಪ್ರದೇಶದೊಳಗೆ ಹಾರಾಟ ನಡೆಸಲಾಗಿತ್ತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.  2024ರ  ಮಾರ್ಚ್ 16 ರಂದು ಈ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. 

ಕಡಲ್ಗಳ್ಳರ ಸೆರೆಯಲ್ಲಿದ್ದ ಹಡಗನ್ನು ಬಿಡಿಸಲು ವಿಂಗ್ ಕಮಾಂಡರ್ ಸಕ್ಸೇನಾ ಎರಡು ಯುದ್ಧ ಕಾರ್ಯಾಚರಣೆಗೆ ಬಳಸುವ ರಬರ್‌ನ ರೈಡಿಂಗ್ ಬೋಟ್‌ (combat rubberised raiding craft - CRRC)ಹಾಗೂ 18 ಮಾರ್ಕೊ ಕಮಾಂಡರ್‌ಗಳಿದ್ದ (ಮಾರ್ಕೋಗಳು ಭಾರತೀಯ ನೌಕಾಪಡೆಯ ವಿಶೇಷ ಪಡೆಗಳಾಗಿವೆ) ತಂಡವನ್ನು ವಿಮಾನದಿಂದ ಕೆಳಗಿಳಿಸಿದ್ದರು.  ಈ ಕಡಲ್ಗಳ್ಳರು  ಅರೇಬಿಯನ್ ಸಮುದ್ರದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಲ್ಲದೆ, ಐಎನ್ಎಸ್ ಕೋಲ್ಕತ್ತಾದಲ್ಲಿ ಮೇಲೂ ಗುಂಡು ಹಾರಿಸಿದ್ದರು ಮತ್ತು 2024 ರ  ಮಾರ್ಚ್ 15ರಂದು  ನೌಕಾ ಸ್ಪಾಟರ್ ಡ್ರೋನ್ ಅನ್ನು ಹೊಡೆದುರುಳಿಸಿದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಘಟನೆ ನಡೆದ ಪ್ರದೇಶವು ಸೊಮಾಲಿಯಾ ಕರಾವಳಿಯ ಸಮೀಪ 1,450 ನಾಟಿಕಲ್ ಮೈಲುಗಳು ದೂರ ( ಒಂದು ನಾಟಿಕಲ್ ಮೈಲ್ ಅಂದರೆ ಸರಿಸುಮಾರು 1.8 ಕಿ.ಮೀ)  ಹಾಗೂ ಭಾರತೀಯ ವಿಮಾನ ಮಾಹಿತಿ ಪ್ರದೇಶದಿಂದ 540 ನಾಟಿಕಲ್ ಮೈಲ್ ದೂರದಲ್ಲಿತ್ತು ( ವಿಮಾನ ಮಾಹಿತಿ ಪ್ರದೇಶವು ನಿರ್ದಿಷ್ಟ ಆಯಾಮಗಳಿಂದ ವ್ಯಾಖ್ಯಾನಿಸಲಾದ ವಾಯುಪ್ರದೇಶವಾಗಿದೆ  ಅದರೊಳಗೆ ವಿಮಾನ ಮಾಹಿತಿ ಮತ್ತು ಎಚ್ಚರಿಕೆ ಸೇವೆಗಳನ್ನು ಒದಗಿಸಲಾಗುತ್ತದೆ. ಪ್ರಪಂಚದಾದ್ಯಂತದ ಎಲ್ಲಾ ವಾಯುಪ್ರದೇಶವನ್ನು ವಿಮಾನ ಮಾಹಿತಿ ಪ್ರದೇಶಗಳಾಗಿ ವಿಂಗಡಿಸಲಾಗಿದೆ.

ಈ ಕಾರ್ಯಾಚರಣೆಯ ಸಿ-17 ವಿಮಾನದ ಕ್ಯಾಪ್ಟನ್ ವಿಂಗ್ ಕಮಾಂಡರ್ ಸಕ್ಸೇನಾ, ಶತ್ರುಗಳ ಕಣ್ತಿಪ್ಪಿಸುವ ಸಲುವಾಗಿ ವಿಮಾನದಿಂದ ಹೊರಬರುವ ಎಲ್ಲಾ ಲೈಟ್‌ಗಳನ್ನು ಆಫ್ ಮಾಡಿ ಹಾಗೂ ವಿದೇಶಿ ಪ್ರದೇಶದಲ್ಲಿ ಎತ್ತರದ ಸಮುದ್ರದ ಮೇಲೆ ಕಡಿಮೆ ಎತ್ತರದಲ್ಲಿ ವಿಮಾನ ಹಾರಿಸಿ ಮುಸ್ಸಂಜೆಯ ಸಮಯದಲ್ಲಿ ವಿಮಾನ ಇಳಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ರಕ್ಷಣಾ ಸಚಿವಾಲಯ ಅವರ ಸಾಧನೆಯ ಬಗ್ಗೆ ಮಾಹಿತಿ ನೀಡಿದೆ.  
ಮಾರ್ಕೋಗಳನ್ನು ವಿಮಾನದಿಂದ ಕೆಳಗಿಸುವುದಕ್ಕೆ ಮೊದಲು ಕೇವಲ 50 ನಾಟಿಕಲ್ ಮೈಲ್ ದೂರವಿರುವಾಗ ಅವರಿಗೆ  ಡ್ರಾಪಿಂಗ್‌ ಸ್ಥಳ ಸಿಕ್ಕರೂ  ಅವರು ಮಾರ್ಕೊ ಸಿಬ್ಬಂದಿಯನ್ನು ಏರ್‌ಡ್ರಾಪ್ ಮಾಡಿ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಲು ಮಾರ್ಗದರ್ಶನ ನೀಡಿದರು. ಇದರಿಂದಾಗಿ ಕಡಲ್ಗಳ್ಳರನ್ನು ಸೆರೆ ಹಿಡಿದಿದ್ದಲ್ಲದೇ 17 ಮರ್ಚೆಂಟ್ ನೇವಿಯ ಸಿಬ್ಬಂದಿಯನ್ನು ರಕ್ಷಿಸಲಾಯ್ತು. 

ಭೂಮಿ ಮೇಲೆ ಮತ್ತು ಆಕಾಶದಲ್ಲಿನ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುತ್ತಾ ಅವರು ಭಾರತೀಯ ನೌಕಾಪಡೆಯೊಂದಿಗೆ ಪರಿಣಾಮಕಾರಿ ಅಂತರ-ಸೇವಾ ಸಮನ್ವಯವನ್ನು ಪ್ರದರ್ಶಿಸಿದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ, ಸುಮಾರು 10 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ರಕ್ಷಣಾ ಪಡೆ ಹೇಳಿದೆ. ಅತ್ಯಂತ ಕಠಿಣ ಕಾರ್ಯಾಚರಣೆಯನ್ನು ಯಾವುದೇ ತೊಂದರೆ ಇಲ್ಲದೇ ನಿರ್ವಹಿಸಿದ ಅಧಿಕಾರಿ ಅಕ್ಷಯ್ ಸಕ್ಷೇನಾ ಅಸಾಧಾರಣ ಧೈರ್ಯ, ಕ್ರಿಯಾತ್ಮಕ ನಾಯಕತ್ವ, ಅತ್ಯುತ್ತಮ ವೃತ್ತಿಪರತೆ ಮತ್ತು ದೃಢ ನಿರ್ಣಯವನ್ನು ಪ್ರದರ್ಶಿಸಿದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..