ಎಲ್ಲ ರಾಜ್ಯಗಳಿಗಿಂತ ತೆಲಂಗಾಣ 2.5 ದಶಕ ಮುಂದೆ!

Published : Jun 20, 2022, 07:35 AM IST
ಎಲ್ಲ ರಾಜ್ಯಗಳಿಗಿಂತ ತೆಲಂಗಾಣ 2.5 ದಶಕ ಮುಂದೆ!

ಸಾರಾಂಶ

* ದೇಶದ ನಗರಗಳಲ್ಲಿ ಹೈದರಾಬಾದ್‌ ನಂ. 1 * ಕೆಸಿಆರ್‌ ಸರ್ಕಾರದ ಪ್ರಗತಿಪರ ಯೋಜನೆಗಳ ಫಲ * ಎಲ್ಲ ರಾಜ್ಯಗಳಿಗಿಂತ ತೆಲಂಗಾಣ 2.5 ದಶಕ ಮುಂದೆ * ನಗರೀಕರಣದಲ್ಲಿ ತೆಲಂಗಾಣವೇ ಮೊದಲು

ಹೈದರಾಬಾದ್‌(ಜೂ.20): 2025ರ ವೇಳೆಗೆ ತೆಲಂಗಾಣದಲ್ಲಿ ನಗರ ಜನಸಂಖ್ಯೆ ಹಾಗೂ ಸೌಲಭ್ಯಗಳ ಪ್ರಮಾಣ ಶೇ.50ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗಿದೆ. ರಾಜ್ಯ ಸರ್ಕಾರ ಪ್ರಗತಿಪರ ಯೋಜನೆಯ ಫಲವಾಗಿ ದೇಶದ ಇತರೆ ಎಲ್ಲ ರಾಜ್ಯಗಳಿಗಿಂತ ತೆಲಂಗಾಣ ಸುಮಾರು ಎರಡೂವರೆ ದಶಕ ಮುಂದಿದೆ.

ನೀತಿ ಆಯೋಗದ ವರದಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಸರಾಸರಿ ನಗರ ಜನಸಂಖ್ಯೆಯು ಶೇ. 31.16ರಷ್ಟಿದ್ದರೆ, ತೆಲಂಗಾಣದ ಒಟ್ಟು ಜನಸಂಖ್ಯೆಯಲ್ಲಿ ನಗರ ಜನಸಂಖ್ಯೆಯು ಶೇ. 46.8ರಷ್ಟಿದೆ. ಈ ವಿಚಾರದಲ್ಲಿ ತಮಿಳುನಾಡು ಹಾಗೂ ಕೇರಳ ರಾಜ್ಯಗಳು ತೆಲಂಗಾಣಕ್ಕಿಂತ ಮುಂದಿವೆ. ದೇಶದ ಟಾಪ್‌ 3 ನಗರೀಕರಣ ಹೊಂದಿದ ರಾಜ್ಯಗಳಲ್ಲಿ ತೆಲಂಗಾಣ 3 ನೇ ಸ್ಥಾನದಲ್ಲಿದೆ. ತಮಿಳುನಾಡು ಶೇ. 48.45 ಹಾಗೂ ಕೇರಳ ಶೇ. 47.23ರಷ್ಟು ನಗರ ಜನಸಂಖ್ಯೆಯೊಂದಿಗೆ ಮೊದಲ 2 ಸ್ಥಾನವನ್ನು ಪಡೆದುಕೊಂಡಿವೆ.

ನೀತಿ ಆಯೋಗವು ನಗರಗಳನ್ನು ಆರ್ಥಿಕತೆಯ ಎಂಜಿನ್‌ ಎಂದು ಕರೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದ ಹಲವಾರು ಪ್ರಗತಿಪರ ಯೋಜನೆಗಳು ಹಾಗೂ ಉಪಕ್ರಮಗಳು ನಗರ ಪ್ರದೇಶದ ವಿಸ್ತರಣೆ ಹಾಗೂ ನಗರ ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದ್ದು, ಇದು ಉದ್ಯೋಗ ಹಾಗೂ ಆದಾಯದ ಹೆಚ್ಚಳಕ್ಕೆ ಕೊಡುಗೆ ನೀಡಿದೆ.

ತೆಲಂಗಾಣ ರಾಜ್ಯ ರಚನೆಯಾದ ನಂತರ ನಗರ ಸ್ಥಳೀಯ ಸಂಸ್ಥೆಗಳನ್ನು ರಾಜ್ಯ ಸರ್ಕಾರ ಹೆಚ್ಚಿಸಿದ್ದು, ನಗರೀಕರಣದ ವಿಸ್ತರಣೆಗೆ ಪೂರಕವಾಗಿದೆ. ರಾಜ್ಯದ ಇಡೀ ಭೂಪ್ರದೇಶದಲ್ಲಿ ನಗರ ಪ್ರದೇಶದ ಒಳಗೊಂಡ ಭಾಗವು ಶೇ. 3ಕ್ಕಿಂತ ಕಡಿಮೆಯಿದ್ದರೂ, ಈ ವಲಯವು ರಾಜ್ಯದ ಜಿಡಿಪಿಗೆ ಮೂರನೇ ಎರಡರಷ್ಟುಕೊಡುಗೆ ನೀಡುತ್ತದೆ.

ಹೈದರಾಬಾದ್‌ ಅತ್ಯುತ್ತಮ ನಗರ:

ಮರ್ಸರ್‌ ಸಂಸ್ಥೆಯು ‘ಜೀವನ ಗುಣಮಟ್ಟಸೂಚ್ಯಂಕ’ದಲ್ಲಿ ಸತತ 6 ವರ್ಷಗಳಿಂದ ಹೈದರಾಬಾದ್‌ ಅನ್ನು ಭಾರತದ ಅತ್ಯುತ್ತಮ ನಗರವೆಂದು ಘೋಷಿಸಿದೆ. ರಾಜ್ಯ ಸರ್ಕಾರವು ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಇದಕ್ಕೆ ಕಾರಣವಾಗಿವೆ.

ನಗರೀಕರಣ ಹೊಂದಿದ ರಾಜ್ಯಗಳಲ್ಲಿ ಒಂದಾದ ತೆಲಂಗಾಣ 2025ರ ವೇಳೆ ಶೇ. 50ರಷ್ಟು ನಗರ ಜನಸಂಖ್ಯೆಯನ್ನು ಹೊಂದುವ ಸಾಧ್ಯತೆಯಿದೆ. ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ 2050ರ ವೇಳೆಗೆ ದೇಶವು ಶೇ. 50ರಷ್ಟು ನಗರ ಜನಸಂಖ್ಯೆಯನ್ನು ಹೊಂದುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ದೇಶದ ಉಳಿದ ರಾಜ್ಯಗಳಿಗಿಂತ ನಗರೀಕರಣದ ವಿಚಾರದಲ್ಲಿ ಸುಮಾರು 2.5 ದಶಕಗಳಷ್ಟುಮುಂದಿದೆ.

ದೇಶದಲ್ಲಿ ನಂ.1:

ನಗರಿಕರಣ ವಿಚಾರದಲ್ಲಿ ರಾಜಧಾನಿ ಹೈದರಾಬಾದ್‌ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹೈದರಾಬಾದಿನ ಖರೀದಿಸುವ ಶಕ್ತಿ ಸೂಚ್ಯಂಕ, ಸುರಕ್ಷತಾ ಸೂಚ್ಯಂಕ, ಆರೋಗ್ಯ ಸೂಚ್ಯಂಕ, ಜೀವನ ವೆಚ್ಚ ಸೂಚ್ಯಂಕ, ಆಸ್ತಿ ಬೆಲೆ ಹಾಗೂ ಆದಾಯ ಅನುಪಾತ ಸೂಚ್ಯಂಕ, ಟ್ರಾಫಿಕ್‌ ಸಂಚಾರದ ಸಮಯ ಸೂಚ್ಯಂಕ ಹಾಗೂ ಮಾಲಿನ್ಯ ಅಥವಾ ಹಮಾಮಾನ ಬದಲಾವಣೆ ಸೂಚ್ಯಂಕದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.

ಗುಣಮಟ್ಟಹಾಗೂ ಆರ್ಥಿಕ ಸ್ಪರ್ಧಾತ್ಮಕತೆಯ ವಿಚಾರದಲ್ಲಿ ಹೈದರಾಬಾದ್‌ ವಿಶ್ವದ 30 ಪ್ರಮುಖ ನಗರಗಳಲ್ಲಿ ಸ್ಥಾನ ಪಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!