50 ವರ್ಷ ಸೇವೆ ಸಲ್ಲಿಸಿದ್ದ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಗದೇ ವೈದ್ಯ ಸಾವು!

By Suvarna NewsFirst Published Apr 27, 2021, 7:35 AM IST
Highlights

ಮಿಶ್ರಾ ಅವರು ಉತ್ತರಪ್ರದೇಶದ ಸ್ವರೂಪ್‌ ರಾಣಿ ನೆಹರು (ಎಸ್‌ಆರ್‌ಎನ್‌) ಆಸ್ಪತ್ರೆಯಲ್ಲಿ 50 ವರ್ಷ ಸೇವೆ ಸಲ್ಲಿಸಿದ್ದರು| 50 ವರ್ಷ ಸೇವೆ ಸಲ್ಲಿಸಿದ್ದ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಗದೇ ವೈದ್ಯ ಮೃತ

ಲಖನೌ(ಏ.27): ಭಾರತದಲ್ಲಿ ಕೊರೋನಾ ಸೋಂಕಿನ ಭೀಕರತೆ ಊಹಿಸಲೂ ಆಗದಷ್ಟುತಾರಕಕ್ಕೇರಿದೆ. ತಾವು 50 ವರ್ಷಗಳ ಸೇವೆ ಸಲ್ಲಿಸಿದ್ದ ಆಸ್ಪತ್ರೆಯಲ್ಲೇ ಆಮ್ಲಜನಕ ಲಭ್ಯವಾಗದೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಖ್ಯಾತ ವೈದ್ಯ ಜೆ.ಕೆ.ಮಿಶ್ರಾ (85) ಅವರು ಸೋಮವಾರ ಮೃತಪಟ್ಟಿದ್ದಾರೆ.

ಮಿಶ್ರಾ ಅವರು ಉತ್ತರಪ್ರದೇಶದ ಸ್ವರೂಪ್‌ ರಾಣಿ ನೆಹರು (ಎಸ್‌ಆರ್‌ಎನ್‌) ಆಸ್ಪತ್ರೆಯಲ್ಲಿ 50 ವರ್ಷ ಸೇವೆ ಸಲ್ಲಿಸಿದ್ದರು. ಕಳೆದ ಏ.13ರಂದು ಮಿಶ್ರಾ ಅವರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಶೀಘ್ರವೇ ಅವರು ಎಸ್‌ಆರ್‌ಎನ್‌ ಆಸ್ಪತ್ರೆಗೆ ದಾಖಲಾಗಿದ್ದರು.

Latest Videos

ಅನಂತರದಲ್ಲಿ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಆದರೆ ತೀವ್ರ ನಿಗಾ ಘಟಕದಲ್ಲಿ ಹಾಸಿಗೆ ಮತ್ತು ಆಮ್ಲಜನಕ ಲಭ್ಯವಾಗದೆ ಅದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

click me!