Hi-tech Cheating: ನಕಲು ಮಾಡಲು ವಿಗ್‌ ಧರಿಸಿ ಬಂದು ತಗಲಾಕೊಂಡ ಯುವಕ

Suvarna News   | Asianet News
Published : Dec 23, 2021, 11:09 AM ISTUpdated : Dec 23, 2021, 11:21 AM IST
Hi-tech Cheating:  ನಕಲು ಮಾಡಲು ವಿಗ್‌ ಧರಿಸಿ ಬಂದು ತಗಲಾಕೊಂಡ ಯುವಕ

ಸಾರಾಂಶ

ಉತ್ತರಪ್ರದೇಶ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಪರೀಕ್ಷೆ ಒಳಗೆ ಬ್ಲೂಟೂಥ್‌ ಇರಿಸಿ ವಿಗ್‌ ಧರಿಸಿ ಬಂದ ಪರೀಕ್ಷಾರ್ಥಿ ಮೆಟಲ್‌ ಡಿಟೆಕ್ಟರ್‌ನಿಂದಾಗಿ ಹೈ-ಟೆಕ್‌ ನಕಲು ಬಯಲು 

ಲಖ್ನೋ(ಡಿ. 23): ಪರೀಕ್ಷೆಯಲ್ಲಿ ನಕಲು ಮಾಡಲು ಏನೆಲ್ಲಾ ಐಡಿಯಾ ತಂತ್ರಜ್ಞಾನವನ್ನು ಬಳಸುತ್ತಾರೆಂಬುದು ನಕಲು ಮಾಡುವವರು ಸಿಕ್ಕಿ ಬಿದ್ದಾಗಲೇ ಗೊತ್ತಾಗುವುದು.  ನಕಲು ಮಾಡಲು ಇವರಿಗೆ ಹೊಳೆಯುವ ಐಡಿಯಾವನ್ನು ಇವರು ಓದುವಾಗಲೂ ಬಳಸಿದ್ದರೆ ಹೀಗೆ ನಕಲು ಮಾಡಿ ಸಿಕ್ಕಿ ಬೀಳುವ ಸಂದರ್ಭ ಬರುತ್ತಿರಲಿಲ್ಲವೇನೋ. ಆದರೆ ಹಾಗಾಗಲಿಲ್ಲ.  ಐಪಿಎಸ್‌ ಅಧಿಕಾರಿ ( IPS officer) ರುಪಿನ್‌ ಶರ್ಮಾ ( Rupin Sharma) ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.  ಇದರಲ್ಲಿ ಪೊಲೀಸ್‌ ಸೇವೆಗೆ ಆಯ್ಕೆಯಾಗಲು ಪರೀಕ್ಷೆ ಬರೆಯಲು ಬಂದಿದ್ದ ವ್ಯಕ್ತಿಯೊಬ್ಬ ತನ್ನ ತಲೆಗೆ ವಿಗ್‌ ಹಾಕಿ ಅದರೊಳಗೆ ಬ್ಲೂಟೂಥ್‌ ಡಿವೈಸ್‌ ಇಟ್ಟಿದ್ದ. ಆದರೆ ಮೆಟಲ್‌ ಡಿಟೆಕ್ಟರ್‌ನ್ನು ಈ ವ್ಯಕ್ತಿಯ ಬಳಿ ತಂದಾಗ ಅದೋ ಜೋರಾಗಿ ಸೌಂಡ್‌ ಮಾಡಲು ಶುರು ಮಾಡಿದೆ. ಇದರಿಂದ ಅನುಮಾನಗೊಂಡು ಪರೀಕ್ಷಿಸಿದಾಗ ಆತ ದಟ್ಟವಾಗಿ ತಲೆಕೂದಲಿದ್ದರು, ಕೇವಲ ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕಾಗಿ ವಿಗ್‌ ಹಾಕಿಕೊಂಡು ಬಂದಿದ್ದು ತಿಳಿದು ಬಂದಿದೆ. 

ಈ ವಿಡಿಯೋವನ್ನು ಸಾವಿರಾರು ಜನ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಸುಂದರ ಬದುಕು ರೂಪಿಸಲು ಸರ್ಕಾರಿ ಉದ್ಯೋಗವನ್ನು ಪಡೆಯಲೇಬೇಕೆಂಬ ದೃಷ್ಟಿಯಿಂದ ಹತಾಶೆಗೊಳಗಾದ ಯುವಕರು ಎಂಥಹ ಕೃತ್ಯಕ್ಕೆ ಇಳಿಯುತ್ತಿದ್ದಾರೆ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ ಎಂದು ಕೆಲ ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಈ ರೀತಿ ಬುದ್ಧಿವಂತಿಕೆ ಪ್ರದರ್ಶಿಸಿದ ಕಾರಣಕ್ಕಾದರೂ ಈತನಿಗೆ ಪೊಲೀಸ್‌ ಇಲಾಖೆ ಕೆಲಸ ನೀಡಬೇಕಾಗಿದೆ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ತೀವ್ರ ಸ್ಪರ್ಧೆಯಿಂದಾಗಿ ಭಾರತದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭದ ಕೆಲಸವೇನು ಅಲ್ಲ. ಉತ್ತರ ಪ್ರದೇಶದ ಸಬ್-ಇನ್ಸ್‌ಪೆಕ್ಟರ್ ಪರೀಕ್ಷೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ಆಕಾಂಕ್ಷಿಯೊಬ್ಬರು ಹೈಟೆಕ್ ಬ್ಲೂಟೂತ್ ವೈರ್‌ಲೆಸ್(Wireless Bluetooth) ಸೆಟ್ ಅನ್ನು ವಿಗ್‌ನೊಳಗೆ ಬಚ್ಚಿಟ್ಟಿದ್ದರು.  ನಕಲು ಮಾಡಲು ಅವರು ಕೈಗೊಂಡ  ಬುದ್ಧಿವಂತ ಪ್ರಯತ್ನದ ಹೊರತಾಗಿಯೂ, ಅವರು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರು.

 

ಇನ್ನಷ್ಟು ಕುತೂಹಲ ಕೆರಳಿಸಿದ ಸಂಗತಿಯೆಂದರೆ, ನಕಲು ಮಾಡಲು ವ್ಯಕ್ತಿ ಬಳಸುತ್ತಿದ್ದ ವೈರ್‌ಲೆಸ್ ಹೆಡ್‌ಫೋನ್‌ಗಳು ತುಂಬಾ ಚಿಕ್ಕದಾಗಿದ್ದು, ಅವುಗಳನ್ನು ಸುಲಭವಾಗಿ ಹೊರತೆಗೆಯಲು ಕೂಡ ಸಾಧ್ಯವಾಗಿರಲಿಲ್ಲ, ಆದರೂ ಅವರು ಎರಡೂ ಕಿವಿಗಳಲ್ಲಿ ಅವುಗಳನ್ನು ಹಾಕಿಕೊಂಡಿದ್ದರು ಎಂಬುದು ಪರಿಶೀಲನೆ ವೇಳೆ ತಿಳಿದು ಬಂದಿದೆ.

SSLC Exams: ಈ ವರ್ಷವೇ ಬದಲಾವಣೆ: ಬಹು ಮಾದರಿ ಆಯ್ಕೆ ರದ್ದು

ಇತ್ತೀಚಿನ ವರ್ಷಗಳಲ್ಲಿ, ಸಂಘಟಿತ ವಂಚನೆ ಹಗರಣಗಳ ಅನೇಕ ನಿದರ್ಶನಗಳು ದೇಶವನ್ನು ಬೆಚ್ಚಿಬೀಳಿಸಿದೆ. ವಂಚನೆಯ ದುರುದ್ದೇಶವು ಪೊಲೀಸ್ ನೇಮಕಾತಿಗಳ ಮೇಲೆ ವಿಶೇಷವಾಗಿ ಪರಿಣಾಮ ಬೀರಿದೆ. 2018 ರಲ್ಲಿ, ಸುಧಾರಿತ ವೈರ್‌ಲೆಸ್ ಸಾಧನಗಳನ್ನು ಬಳಸಿಕೊಂಡು ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ವಂಚಿಸಿದ ಆರೋಪದ ಮೇಲೆ ಸಿಐಡಿ(CID) ಪಶ್ಚಿಮ ಬಂಗಾಳ (West Bengal) ದಲ್ಲಿ 42 ಜನರನ್ನು ಬಂಧಿಸಿತು. ಅದೇ ವರ್ಷದಲ್ಲಿ  ಉತ್ತರ ಪ್ರದೇಶ(Uttara Pradesh) ದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ (Police Constable Exam) ಯಲ್ಲಿ ಸ್ಪೈ-ಮೈಕ್‌ಗಳಂತಹ ಹೈಟೆಕ್ ಸಾಧನ(Hi-tech Divice) ಗಳು ಹಾಗೂ ಸಾಲ್ವರ್‌ಗಳನ್ನು ಇರಿಸಿ ವಂಚನೆಗೆ ಸಹಾಯ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ವಂಚನೆಗೆ ಸಹಾಯ ಮಾಡಿದ ದೊಡ್ಡ ತಂಡವನ್ನು ಬಂಧಿಸಲಾಯಿತು.

ಬೆಳಗಾವಿ: ಬ್ಲೂಟೂತ್‌ ಬಳಸಿ ಪೇದೆ ಪರೀಕ್ಷೆಯಲ್ಲಿ ನಕಲು..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?